ಮುಂಬೈ(ಜ.28): ಮಹೀಂದ್ರ ಹಾಗೂ ಕ್ಲಾಸಿಕ್ ಲೆಜೆಂಡ್ ಕಂಪೆನಿ ಈಗಾಗಲೇ ಐತಿಹಾಸಿಕ ಜಾವಾ ಬೈಕ್ ಬಿಡುಗಡೆ ಮಾಡಿದೆ. ಜಾವಾ ಹಾಗೂ ಜಾವ 42 ಬೈಕ್ ಕಳೆದ ವರ್ಷ ಬಿಡುಗಡೆಯಾಗಿತ್ತು. ಈ ವೇಳೆ ಜಾವಾ ಪೆರಾಕ್ ಬೈಕ್ ಬಿಡುಗಡೆ ಶೀಘ್ರದಲ್ಲೇ ಆಗಲಿದೆ ಎಂದು ಕಂಪನಿ ಹೇಳಿತ್ತು. ಇದೀಗ ಜಾವಾ ಪೆರಾಕ್ ಬಾಬರ್ ಸ್ಟೈಲ್ ಬೈಕ್ ಬುಕಿಂಗ್ ದಿನಾಂಕ ಬಹಿರಂಗವಾಗಿದೆ. 

ಇದನ್ನೂ ಓದಿ: ಬಿಗ್‌ಬಾಸ್ ಮನೆಯಲ್ಲಿ ಸುದೀಪ್‌ಗೆ BMW ಬೈಕ್ ಗಿಫ್ಟ್ ನೀಡಿದ ಅಭಿಮಾನಿ!

2019ರ ಸೆಪ್ಟೆಂಬರ್‌ನಲ್ಲಿ ಜಾವ ಪೆರಾಕ್ ಬಾಬರ್ ಬೈಕ್ ಬುಕಿಂಗ್ ಆರಂಭಗೊಳ್ಳಲಿದೆ ಎಂದು ಕ್ಲಾಸಿಕ್ ಲೆಜೆಂಡ್ ಹೇಳಿದೆ. ಜಾವ ಪೆರಾಕ್ ಬೆಲೆ 1.89 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 293 ಸಿಸಿ ಎಂಜಿನ್ ಹೊಂದಿರುವ ಪೆರಾಕ್ 30 Bhp ಪವರ್ ಹಾಗೂ 31 Nm ಪೀಕ್ ಟಾರ್ಕ್ ಉತ್ವಾದಸಲಿದೆ. 

ಇದನ್ನೂ ಓದಿ: ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ- 5 ಸಾವಿರ ರೂ.ಗೆ ಬುಕ್ ಮಾಡಿ!

ಜಾವಾ ಪೆರಾಕ್ ಬೈಕ್ ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಹೊಂದಿದೆ. ಇನ್ನು BS-VI ಎಮಿಶನ್ ನಿಯಮವನ್ನ ಪಾಲಿಸಿದೆ. ಈಗಾಗಲೇ ಜಾವಾ ಹಾಗೂ ಜಾವಾ 42 ಬೈಕ್ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಮೂಡಿಸಿದೆ. ಇದೀಗ ಜಾವ ಪೆರಾಕ್ ಕೂಡ ದಾಖಲೆ ಬರೆಯಲು ಸಜ್ಜಾಗಿದೆ.