Asianet Suvarna News Asianet Suvarna News

ಮಹೀಂದ್ರ ಸ್ಕಾರ್ಪಿಯೋ S9 ಬಿಡುಗಡೆ-ಬುಕಿಂಗ್ ಆರಂಭ!

ಮಹೀಂದ್ರ ಕಂಪನೆಯ ಸ್ಕಾರ್ಪಿಯೋ ಮತ್ತೆ ಬಿಡುಗಡೆಯಾಗಿದೆ. ಆಕರ್ಷಕ ಲುಕ್, ಬಲಿಷ್ಠ ಎಂಜಿನ್ ಹಾಗೂ ತಂತ್ರಜ್ಞಾನ ಹೊಂದಿರುವ ನೂತನ ಸ್ಕಾರ್ಪಿಯೋ ಬೆಲೆ ಹಾಗೂ ವಿಶೇಷೆ ಇಲ್ಲಿದೆ.

Mahindra Scorpio S9 variant launched at Rs 13.99 lakh
Author
Bengaluru, First Published Nov 12, 2018, 8:05 PM IST

ನವದೆಹಲಿ(ನ.12): ಮಹೀಂದ್ರ ಮೋಟಾರ್ಸ್ ಸಂಸ್ಥೆ ಪ್ರಸಿದ್ದ ಸ್ಕಾರ್ಪಿಯೋ ಇದೀಗ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ನೂತನ ಮಹೀಂದ್ರ ಸ್ಕಾರ್ಪಿಯೋ S9 ಬಿಡುಗಡೆಯಾಗಿದೆ. 2.2 ಲೀಟರ್ ಟರ್ಬೋ ಡೀಸೆಲ್ ಎಂಜಿನ್ ಸ್ಕಾರ್ಪಿಯೋ ಹೆಚ್ಚು ಬಲಿಷ್ಠ ಹಾಗೂ ಆಕರ್ಷಕವಾಗಿದೆ.

ನೂತನ ಸ್ಕಾರ್ಪಿಯೋ S9 ಬೆಲೆ 13. 99 ಲಕ್ಷ(ಎಕ್ಸ್ ಶೋ ರೂಂ). ಆಟೋಮ್ಯಾಟಿಕ್ ಟೆಂಪರೇಚರ್ ಕಂಟ್ರೋಲ್, 15 cm ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸ್ಟಾಟಿಕ್ ಬೆಂಡಿಂಗ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್, LED ಲೈಟ್ಸ್ ಗೈಡ್ಸ್, ಟ್ವಿನ್ ಏರ್‌ಬ್ಯಾಗ್, ಎಬಿಎಸ್ ಬ್ರೇಕ್ ಸಿಸ್ಟಮ್ ಹೊಂದಿದೆ.

140bhp ಹಾಗೂ 320nm ಪೀಕ್ ಟಾರ್ಕ್ ಉತ್ವಾದಿಸಲಿದೆ. 6 ಸ್ಪೀಡ್ ಮ್ಯಾನ್ಯುಯೆಲ್ ಗೇರ್ ಬಾಕ್ಸ್ ಹೊಂದಿದೆ.  7 ಸೀಟರ್ ನೂತನ ಸ್ಕಾರ್ಪಿಯೋ ಇದೀಗ ಹಿಂದಿನ ಮಾರಾಟ ದಾಖಲೆ ಮುರಿಯಲಿದೆ ಅನ್ನೋದು ಮಹೀಂದ್ರ ಕಂಪನಿಯ ವಿಶ್ವಾಸ.

Follow Us:
Download App:
  • android
  • ios