ಮುಂಬೈ(ನ.22): ಮಿನಿ ಟ್ರಕ್ ವೇರಿಯೆಂಟ್‌ಗಳಲ್ಲಿ ಮಹೀಂದ್ರ ಕಂಪನಿ ಟಾಟಾ ಮೋಟಾರ್ಸ್‌ಗೆ ತೀವ್ರ ಪೈಪೋಟಿ ನೀಡುತ್ತಿದೆ. ಇದೀಗ ಮಹೀಂದ್ರ ತನ್ನ ಜನಪ್ರೀಯ ಜೀತೋ ಪ್ಲಸ್ ಮಿನಿ ಟ್ರಕ್ ಬಿಡುಗಡೆ ಮಾಡಿದೆ. ಈ ವಾಣಿಜ್ಯ ವಾಹನದ ಬೆಲೆ 3.47 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಸದ್ಯ ಮಾರುಕಟ್ಟೆಯಲ್ಲಿರುವ ಜಿತೋಗಿಂತ ನೂತನ ಜಿತೋ ಪ್ಲಸ್ ಮಿನಿ ಟ್ರಕ್‌ ಹಲವು ವಿಶೇಷತೆ ಹೊಂದಿದೆ.

ಇದನ್ನೂ ಓದಿ: ಗಂಟೆಗೆ 800 ಕಿ.ಮೀ ವೇಗ; ದಾಖಲೆ ಬರೆದ ಬ್ಲಡ್‌ಹೌಂಡ್ ಕಾರು!.

ಜೀತೋ ಪ್ಲಸ್ ಮಿನಿ ಟ್ರಕ್ ವಾರೆಂಟಿ 3 ವರ್ಷ ಅಥವಾ 72,000 ಕಿ.ಮೀ.  ಬಲಿಷ್ಠ ಎಂಜಿನ್ ಹೊಂದಿರುವ ಕಾರಣ, ಹೆಚ್ಚು ಭಾರವನ್ನು ಹೊರಬಲ್ಲ ಸಾಮರ್ಥ್ಯ ಹೊಂದಿದೆ.  625 cc ಸಿಂಗಲ್-ಸಿಲಿಂಡರ್ ವಾಟರ್ ಕೂಲ್ಡ್ ಡೈರೆಕ್ಟ್ ಇಂಜೆಕ್ಷನ್ ಡೀಸೆಲ್ ಎಂಜಿನ್ ಹೊಂದಿದೆ. 16 bhp  ಪವರ್ ಹಗೂ 38 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 

ಇದನ್ನೂ ಓದಿ: 2020 ರಿಂದ ಟೊಯೊಟಾ ಇಟಿಯೋಸ್, ಇಟಿಯೋಸ್ ಲಿವಾ ಕಾರು ಸ್ಥಗಿತ!

4 ಸ್ಪೀಡ್ ಮ್ಯಾನ್ಯುಯೆಲ್ ಗೇರ್ ಬಾಕ್ಸ್ ಹೊಂದಿದ್ದು, ಪ್ರತಿ ಲೀಟರ್ ಡೀಸೆಲ್‌ಗೆ 29.1 ಕಿ.ಮೀ ಮೈಲೇಜ್ ನೀಡಲಿದೆ. ಹೆಚ್ಚು ಆಕರ್ಷಕ ಲುಕ್ ಹೊಂದಿದ್ದು, ಕಾರಿನಂತೆ ಆರಾಮದಾಯಕ ಪ್ರಯಾಣವನ್ನು ನೀಡಲಿದೆ. ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕಡಿಮೆ ಬೆಲೆ ಹಾಗೂ ಹೆಚ್ಚುವರಿ ಫೀಚರ್ಸ್‌ನೊಂದಿಗೆ ಜೀತೋ ಮಿನಿ ಟ್ರಕ್ ಮಾರುಕಟ್ಟೆ ಪ್ರವೇಶಿಸಿದೆ.