ನವದೆಹಲಿ(ನ.01): ಮಹೀಂದ್ರ ಕಂಪೆನಿಯ ಬೊಲೆರೊ ಪಿಕ್ ಜೀಪ್ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ಹೆಚ್ಚುವರಿ ಫೀಚರ್ಸ್ ಹಾಗೂ ಮತಷ್ಟು ಬಲಿಷ್ಠ ಎಂಜಿನ್‌ನೊಂದಿಗೆ ಮಹೀಂದ್ರ ಬೊಲೆರೊ ಬಿಡುಗಡೆಯಾಗಿದೆ.

ನೂತನ ಮಹೀಂದ್ರ ಬೊಲೆರೊ ಪಿಕ್ ಅಪ್ ಬೆಲೆ 6.7 ಲಕ್ಷ ರೂಪಾಯಿ(ಎಕ್ಸ್ ಶೂಂ ರೂಂ). ವಿವಿದ ಸಾಮರ್ಥ್ಯದ ಬೊಲೆರೊ ಪಿಕ್ ಜೀಪ್ ಲಭ್ಯವಿದೆ. ಗರಿಷ್ಠ ಸಾಮರ್ಥ್ಯ 1700 ಕೆಜಿ. ಇದರ ಜೊತೆಗೆ ಅತ್ಯುತ್ತಮ ಸೀಟಿಂಗ್ ಹಾಗೂ ಇಂಟಿರಿಯರ್ ಡೆಕೋರ್‌ನೊಂದಿಗೆ ಬಿಡುಗಡೆಯಾಗಿದೆ. 

1,300 ಕೆಜಿ, 1,500 ಕೆಜಿ, ಹಾಗೂ 1,700 ಕಜಿ ಸಾಮರ್ಥ್ಯದ ನೂತನ ಬೊಲೆರೊ ಪಿಕ್ ಅಪ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ವರೆಗೆ 10 ಲಕ್ಷ ಬೊಲೆರೊ ಪಿಕ್ಅಪ್ ಮಾರಾಟವಾಗಿದೆ. ಇದೀಗ ನೂತನ ಬೊಲೆರೊ ಪಿಕ್‌ಅಪ್ ಜೀಪ್ ಮಾರಾಟದಲ್ಲೂ ದಾಖಲೆ ಬರೆಯುವ ವಿಶ್ವಾಸದಲ್ಲಿದೆ.