ಬೆಂಗಳೂರು(ಮೇ.15): ಎಸ್‌ಯುವಿ ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲೇ ಇರುವ ಮಹೀಂದ್ರಾ ಈಗ ಮತ್ತೊಂದು ಹೊಸ ಎಸ್‌ಯುವಿಯನ್ನು ದೇಶಕ್ಕೆ ಅರ್ಪಿಸಿದೆ. ಈ ಹೊಸ ಎಸ್‌ಯುವಿಯ ಹೆಸರು ದಿ ಬೋಲ್ಡ್‌ ನ್ಯೂ ಟಿಯುವಿ 300. ಈ ಕಾರಿನ ಎಕ್ಸ್‌ ಶೋ ರೂಮ್‌ ಮುಂಬೈ ಬೆಲೆ ರೂ. 8.38 ಲಕ್ಷ.

ಇದನ್ನೂ ಓದಿ: ದುಬಾರಿ ಬೆಂಟ್ಲಿ ಕಾರಿಗೆ ಟ್ಯಾಂಕ್ ರೂಪ- ಇದು ವಿಶ್ವದ ವಿಚಿತ್ರ ಕಾರು!

ಈ ಹೊಸ ಟಿಯುವಿ 300 ಎಂಹಾಕ್‌ 100 ಇಂಜಿನ್‌ ಹೊಂದಿದೆ. ಈ ಇಂಜಿನ್‌ 100 ಬಿಎಚ್‌ಪಿ ಮತ್ತು 240 ಎನ್‌ಎಂ ಟಾರ್ಕ್ ಸಾಮರ್ಥ್ಯ ಪಡೆದಿದೆ. ಸಮಾಧಾನಕಾರ ಎತ್ತರ ಮತ್ತು ಅತ್ಯಾಧುನಿಕ ಸಸ್ಪೆನ್ಷನ್‌ ತಂತ್ರಜ್ಞಾನ ಹೊಂದಿರುವುದು ಈ ಎಸ್‌ಯುವಿ ಹೆಚ್ಚುಗಾರಿಕೆ. ಬಲಿಷ್ಠ ಸ್ಟೀಲ್‌ನಿಂದ ಈ ಎಸ್‌ಯುವಿ ದೇಹವನ್ನು ತಯಾರಿಸಲಾಗಿದೆ ಎನ್ನುತ್ತದೆ ಕಂಪನಿ. ಸುಮಾರು ಏಳು ಬಣ್ಣಗಳಲ್ಲಿ ಈ ಎಸ್‌ಯುವಿ ಲಭ್ಯವಿದೆ. ಕೆಂಪು ಮತ್ತು ಕಪ್ಪು, ಸಿಲ್ವರ್‌ ಮತ್ತು ಕಪ್ಪು, ಕಪ್ಪು, ಮೆಜೆಸ್ಟಿಕ್‌ ಸಿಲ್ವರ್‌ ಮತ್ತು ಪಲ್‌ರ್‍ ವೈಟ್‌ ಬಣ್ಣಗಳ ಜೊತೆಗೆ ಈ ಸಲ ಹೈವೇ ರೆಡ್‌ ಮತ್ತು ಮಿಸ್ಟಿಕ್‌ ಕಾಪರ್‌ ಬಣ್ಣಗಳಲ್ಲಿ ಟಿಯುವಿ 300 ದೊರೆಯಲಿದೆ.

ಇದನ್ನೂ ಓದಿ: ಭಾರತದಲ್ಲಿ ಬಿಡುಡೆಯಾಗುತ್ತಾ ಮಾರುತಿ ಸ್ವಿಫ್ಟ್ RS?

ಒಳಾಂಗಣದಲ್ಲಿ ಏಳು ಆಸನವಿದ್ದು, ಇಟಾಲಿಯನ್‌ ಮನೆಗಳಂತೆ ಡಿಸೈನ್‌ ಮಾಡಲಾಗಿದೆ. ಸಿಲ್ವರ್‌ ಬಣ್ಣದ ಕ್ಯಾಬಿನ್‌, ರಿವ​ರ್‍ಸ್ ಪಾರ್ಕಿಂಗ್‌ಗಾಗಿ ಕ್ಯಾಮೆರಾ, 17.8 ಸೆ.ಮೀ ಗಾತ್ರದ ಇನ್ಫೊಟೈನ್ಮೆಂಟ್‌ ಡಿವೈಸ್‌, ಸ್ಟ್ಯಾಟಿಕ್‌ ಬೆಂಡಿಂಗ್‌ ಹೆಡ್‌ಲ್ಯಾಂಪ್‌ ಎಲ್ಲವೂ ಈ ಕಾರಿನಲ್ಲಿದೆ. ನೋಡುವುದಕ್ಕೂ ಓಡಿಸುವುದಕ್ಕೂ ಅದ್ದೂರಿ ಫೀಲಿಂಗು ಇರುವ ಎಸ್‌ಯುವಿ ಇದು. ಎಸ್‌ಯುವಿ ಪ್ರಿಯರಿಗೆ ಜಾಸ್ತಿ ಹೇಳಬೇಕಿಲ್ಲ.