ರಷ್ಯಾ(ಮೇ.15): ಬೆಂಟ್ಲಿ ಕಾರುಗಳು ವಿಶ್ವದ ದುಬಾರಿ ಹಾಗೂ ಐಷಾರಾಮಿ ಕಾರುಗಳು.  ಆದರೆ ಇದೇ ದುಬಾರಿ ಕಾರನ್ನು ಮಾಡಿಫೈ ಮಾಡಿ ಹೊಸ ರೂಪ ನೀಡಲಾಗಿದೆ. ಬೆಂಟ್ಲಿ ಕಾಂಟಿನೆಂಟಲ್ GT ಕಾರಿನ ಚಕ್ರದ ಬದಲು ಟ್ಯಾಂಕ್ ವಾಹನಗಳಲ್ಲಿರುವ ಚೈನ್ ಅಳವಡಿಸಿ ಹೊಸ ರೂಪ ನೀಡಲಾಗಿದೆ. ಇಷ್ಟೇ ಅಲ್ಲ ಈ ಚೈನ್‌ಗೆ ತಕ್ಕಂತೆ ಎಂಜಿನ್  ಕೂಡ ಬದಲಾಯಿಸಲಾಗಿದೆ. 

 ಬೆಂಟ್ಲಿ ಕಾಂಟಿನೆಂಟಲ್ GT ಕಾರಿನ ಎಂಜಿನ್ ತೆಗೆದು  ಟೊಯೊಟಾ 4.3-ಲೀಟರ್ V8 ಎಂಜಿನ್ ಬಳಸಲಾಗಿದೆ. ಈ ಕಾರು ಮಾಡಿಫೈ ಮಾಡಲು ನಿರಂತರ 9 ತಿಂಗಳು ಸಮಯ ತೆಗೆದುಕೊಂಡಿದ್ದಾರೆ. 

ಬೆಂಟ್ಲಿ ಕಾಂಟಿನೆಂಟಲ್ GT ಕಾರಿನ  ಬೆಲೆ 3.58 ಕೋಟಿ ರೂಪಾಯಿ(ಎಕ್ಸ್ ಶೋ ರೂಂ).  ಈ ದುಬಾರಿ ಕಾರನ್ನು ಮಾಡಿಫೈ ಮಾಡಿ ಈ ರೀತಿ ಮಾಡಲಾಗಿದೆ.