ಭಾರತದಲ್ಲಿ ಬಿಡುಡೆಯಾಗುತ್ತಾ ಮಾರುತಿ ಸ್ವಿಫ್ಟ್ RS?

ಟಾಟಾ ಟಿಯಾಗೋ ಕಾರಿಗೆ ಪ್ರತಿಸ್ಪರ್ಧಿಯಾಗಿ ಇದೀಗ ಮಾರುತಿ ಸ್ವಿಫ್ಟ್ RS ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಕಾರಿನ ವಿಶೇಷತೆ ಏನು? ಟಿಯಾಗೋ ಕಾರಿಗೆ ಪೈಪೋಟಿ ನೀಡಲು ಮಾರುತಿ ಮುಂದಾಗಿದ್ದೇಕೆ? ಇಲ್ಲಿದೆ.

Will Suzuki Swift RS Come To India To Challenge Tata Tiago JTP

ನವದೆಹಲಿ(ನ.04): ಭಾರತದ ಕಾರು ಮಾರುಕಟ್ಟೆಯಲ್ಲಿ ಪ್ರತಿ ದಿನ ಪೈಪೋಟಿ ಹೆಚ್ಚಾಗುತ್ತಿದೆ. ಕಳೆದ ವಾರ ಟಾಟಾ ಮೋಟಾರ್ಸ್ ಟಿಯಾಗೋ ಹಾಗೂ ಟಿಗೋರ್ ಜಿಟಿಪಿ ಎಡಿಶನ್ ಬಿಡುಗಡೆ ಮಾಡಿದೆ. ಇದೀಗ ಇದಕ್ಕೆ ಪ್ರತಿಸ್ಪರ್ಧಿಯಾಗಿ ಮಾರುತಿ ಸುಜುಕಿ ಸ್ಪಿಫ್ಟ್ RS ಬಿಡುಗಡೆ ಮಾಡಲು ಮುಂದಾಗಿದೆ. 

ಟಾಟಾ ಟಿಯಾಗೋ ಭಾರತದ ಕಡಿಮೆ ಬೆಲೆ ಹ್ಯಾಚ್‌ಬ್ಯಾಕ್ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಷ್ಟೇ ಅಲ್ಲ ಗ್ರಾಹಕರು ಕೂಡ ಟಿಯಾಗೋ ಕಾರು ಖರೀದಿಸಲು ಹೆಚ್ಚಿನ ಆಸಕ್ತಿ ತೋರಿದ್ದಾರೆ. ಹೀಗಾಗಿ ಮಾರುತಿ ಕೂಡ ಕಡಿಮೆ ಬೆಲೆಯಲ್ಲಿ ಸ್ಪಿಫ್ಟ್ RS ಕಾರು ಬಿಡುಗಡೆ ಚಿಂತನೆ ನಡೆಸಿದೆ.

Will Suzuki Swift RS Come To India To Challenge Tata Tiago JTP

ಈಗಾಗಲೇ ವಿದೇಶಗಳಲ್ಲಿರುವ 1.0 ಲೀಟರ್, 3 ಸಿಲಿಂಡರ್, ಬೂಸ್ಟೆಡ್ ಟರ್ಬೊಚಾರ್ಜ್‌ಡ್ ಪೆಟ್ರೋಲ್ ಎಂಜಿನ್ ಸ್ಪಿಫ್ಟ್ RS ಕಾರು ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಮಾರುತಿ ಬಲೆನೋ RS ಈಗಾಗಲೇ ಬಿಡುಗಡೆಯಾಗಿದೆ. ಆದರೆ ಸ್ಪಿಫ್ಟ್ RS ಇನ್ನು ಭಾರತಕ್ಕೆ ಬಂದಿಲ್ಲ. 

ಎಂಜಿನ್ ಮಾತ್ರವಲ್ಲ, ವಿನ್ಯಾಸದಲ್ಲೂ ಕೆಲ ಬದಲಾವಣೆಗಳಿವೆ. ಸ್ವಿಫ್ಟ್ ಕಾರಿಗಿಂತ ಸ್ವಿಫ್ಟ್ RS ಕಾರು ಸ್ಪೋರ್ಟೀವ್ ಲುಕ್ ಹೊಂದಿದೆ. 2019ರಲ್ಲಿ ಸ್ವಿಫ್ RS ಕಾರು ಭಾರತದಲ್ಲಿ ಬಿಡುಗಡೆಯಾಗೋ ಸಾಧ್ಯತೆ ಇದೆ. ಇದರ ಬೆಲೆ 4 ಲಕ್ಷ (ಎಕ್ಸ್ ಶೋ ರೂಂ)ಪ್ರಾರಂಭವಾಗಲಿದೆ ಎಂದು ಅಂದಾಜಿಸಲಾಗಿದೆ.
 

Latest Videos
Follow Us:
Download App:
  • android
  • ios