ನವದೆಹಲಿ(ಜು.30):  ಮಹೀಂದ್ರ ಕಂಪನಿಯ ನೂತನ ಮೋಜೊ 300 ಬೈಕ್ ಬಿಡುಗಡೆಯಾಗಿದೆ. ಹಲವು ಟೀಸರ್ ಹರಿಬಿಟ್ಟು ಕುತೂಹಲ ಕೆರಳಿಸಿದ್ದ ಮಹೀಂದ್ರ ಇದೀಗ ಬೈಕ್ ಪ್ರಿಯರ ಕಾಯುವಿಕೆಗೆ ಅಂತ್ಯ ಹಾಡಿದೆ. 295 ಸಿಸಿ ಎಂಜಿನ್ ಹೊಂದಿರುವ ನೂತನ ಬೈಕ್ ವಿಶೇಷವಾಗಿ BS6 ಎಂಜಿನ್ ಹಾಗೂ ABS ತಂತ್ರಜ್ಞಾನ ಹೊಂದಿದೆ.

ದಶಕಗಳ ಬಳಿಕ ಮತ್ತೆ ಬರುತ್ತಿದೆ ಯಜ್ಡಿ ಬೈಕ್!

ನೂತನ ಮಹೀಂದ್ರ ಮೋಜೊ ಬೈಕ್ ಬೆಲೆ 1.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇದು BS4 ಮಹೀಂದ್ರ ಮೋಜೊ ಬೈಕ್‌ಗಿಂತ 10,000 ರೂಪಾಯಿ ಹೆಚ್ಚಾಗಿದೆ. ಸುಪ್ರೀಂ ಕೋರ್ಟ್ ಆದೇಶದಿಂದ ಮಹೀಂದ್ರ ಕಂಪನಿ BS4 ಮೋಜೊ ಬೈಕ್ ಎಪ್ರಿಲ್ ತಿಂಗಳಲ್ಲಿ ಸ್ಥಗಿತಗೊಳಿಸಿತ್ತು. ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ಇದೀಗ ನೂತನ ಮೋಜೊ ಬೈಕ್ ಬಿಡುಗಡೆಯಾಗಿದೆ.

ಭಾರತದ ಅತ್ಯಂತ ಸುರಕ್ಷತೆಯ ಮಹೀಂದ್ರ XUV300 ಸ್ಪೋರ್ಟ್ಸ್ ಕಾರು ಶೀಘ್ರದಲ್ಲೇ ಬಿಡುಗಡೆ

ಕಳೆದ ವಾರದಿಂದ ಮೋಜೊ ಬೈಕ್ ಬುಕಿಂಗ್ ಆರಂಭಗೊಂಡಿದೆ. 5,000 ರೂಪಾಯಿ ನೀಡಿ ನೂತನ ಬೈಕ್ ಬುಕ್ ಮಾಡಿಕೊಳ್ಳಬಹುದು. ಬುಕ್ ಮಾಡಿದ ಗ್ರಾಹಕರಿಗೆ ಕೆಲ ದಿನಗಳಲ್ಲೇ ಬೈಕ್ ವಿತರಣೆಯಾಗಲಿದೆ. ನಾಲ್ಕು ಹೊಚ್ಚ ಹೊಸ ಬಣ್ಣಗಳಲ್ಲಿ ಬೈಕ್ ಲಭ್ಯವಿದೆ. ಇನ್ನು Bs4 ಹಾಗೂ  BS6 ಬೈಕ್ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 

ಮಹೀಂದ್ರ ಮೋಜೊ ಬೈಕ್ 295 ಸಿಸಿ, ಸಿಂಗಲ್ ಸಿಲಿಂಡರ್, ಫ್ಯುಯೆಲ್ ಇಂಜೆಕ್ಷನ್ ಹಾಗೂ BS6 ಎಂಜಿನ್ ಹೊಂದಿದೆ. 26 bhp ಪವರ್ ಹಾಗೂ   28 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು ಡ್ಯುಯೆಲ್ ಸ್ಟಾಂಡರ್ಡ್ ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಹೊಂದಿದೆ.