ದಶಕಗಳ ಬಳಿಕ ಮತ್ತೆ ಬರುತ್ತಿದೆ ಯಜ್ಡಿ ಬೈಕ್!

ಭಾರತದಲ್ಲಿ ದಶಕಗಳ ಬಳಿಕ ಜಾವಾ ಮೋಟಾರ್‌ಸೈಕಲ್ ಬಿಡುಗಡೆಯಾಗೋ ಮೂಲಕ ಹೊಸ ಇತಿಹಾಸ ರಚಿಸಿದೆ. 80-90ರ ದಶಕದಲ್ಲಿ ಭಾರತದಲ್ಲಿ ಅಬ್ಬರಿಸಿದ ಜಾವಾ ಇದೀಗ 2020ರಲ್ಲಿ ಮೋಡಿ ಮಾಡುತ್ತಿದೆ. ಇದೀಗ ಜಾವಾ ಮೋಡಿ ಬಳಿಕ ಹಳೇ ಯಜ್ಡಿ ಬೈಕ್ ಮತ್ತೆ ಬಿಡುಗಡೆಯಾಗಲಿದೆ.
 

Classic legend mahindra plan to re launch Yezdi bike in India

ಮುಂಬೈ(ಜು.19): ಹಳೇ ಕಾಲದ ಬೈಕ್, ಕಾರುಗಳಿಗೆ ಬೇಡಿಕೆ ಹೆಚ್ಚು. ರೆಟ್ರೋ ಶೈಲಿ, ಹಳೇ ಎಂಜಿನ್ ವಾಹನ ಪ್ರಿಯರಲ್ಲಿ ಇನ್ನೂ ಅಚ್ಚಳಿಯದೇ ಉಳಿದಿದೆ. ಇದಕ್ಕೆ ತಕ್ಕಂತೆ ಕಂಪನಿಗಳು ಹಳೇ ವಾಹನಗಳನ್ನು ಹೊಸ ರೂಪದಲ್ಲಿ ಬಿಡುಗಡೆ ಮಾಡುತ್ತಿದೆ. ದಶಕಗಳ ಹಿಂದೆ ಭಾರತದ ನೆಚ್ಚಿನ ಬೈಕ್ ಆಗಿ ಹೊರಹೊಮ್ಮಿದ ಕ್ಲಾಸಿಕ್ ಲೆಜೆಂಡ್ ಕಂಪನಿಯ ಜಾವಾ ಬೈಕ್ ಇದೀಗ ಮತ್ತೆ ಮೋಡಿ ಮಾಡುತ್ತಿದೆ. ಇದೇ ಮಹೀಂದ್ರ ಅಂಗಸಂಸ್ಥೆಯಾದ ಕ್ಲಾಸಿಕ್ ಲೆಜೆಂಡ್ ಇದೀಗ ಯಜ್ಡಿ ಬೈಕ್ ಮತ್ತೆ ಬಿಡುಗಡೆ ಮಾಡಲು ತಯಾರಿ ಆರಂಭಿಸಿದೆ.

ಮಿಂಚಿ ಮರೆಯಾದ ಭಾರತದ 10 ಜಾವಾ-ಯೆಝೆಡಿ ಬೈಕ್!

ಕ್ಲಾಸಿಕ್ ಲೆಜೆಂಡ್ ಹಾಗೂ ಮಹೀಂದ್ರ ಸಹಯೋಗದೊಂದಿಗೆ ಭಾರತದಲ್ಲಿ ಜಾವಾ 42, ಜಾವಾ ಕ್ಲಾಸಿಕ್ ಹಾಗೂ ಜಾವಾ ಪೆರಾಕ್ ಬೈಕ್ ಬಿಡುಗಡೆಯಾಗಿ ಭಾರಿ ಜನಪ್ರಿಯತೆ ಪಡೆದುಕೊಂಡಿದೆ. ಇದೀಗ ಕ್ಲಾಸಿಕ್ ಲೆಜೆಂಡ್ ಯಜ್ಡಿ ಬೈಕ್ ಬಿಡುಗಡೆ ಮಾಡಿ ಮತ್ತೆ ಮೋಡಿ ಮಾಡಲು ಸಜ್ಜಾಗಿದೆ. ವಿಶೇಷ ಅಂದರೆ ಯಜ್ಡಿ ಬೈಕ್ ಕೇವಲ ಪೆಟ್ರೋಲ್ ಎಂಜಿನ್ ಮಾತ್ರವಲ್ಲ, ಎಲೆಕ್ಟ್ರಿಕ್ ಬೈಕ್ ಕೂಡ ಬಿಡುಗಡೆಯಾಗಲಿದೆ.

ಕೊರೋನಾ ವೈರಸ್ ಕಾರಣ ಮಹೀಂದ್ರ ಹಾಗೂ ಕ್ಲಾಸಿಕ್ ಲೆಜೆಂಡ್ ಸಹಯೋಗದ ಯಜ್ಡಿ ಬೈಕ್ ನಿರ್ಮಾಣ ಕೊಂಚ ತಡವಾಗಿದೆ. ಆದರೆ 2021ರ ಒಳಗೆ ನೂತನ ಯಜ್ಡಿ ಬೈಕ್ ಅನಾವರಣಗೊಳ್ಳುವ ಸಾಧ್ಯತೆ ಇದೆ. ಹಳೇ ರೆಟ್ರೋ ಶೈಲಿಗೆ ಯಾವುದೇ ದಕ್ಕೆ ಬರದ ರೀತಿಯಲ್ಲಿ ನೂತನ ಯಜ್ಡಿ ಬೈಕ್ ನಿರ್ಮಾಣವಾಗಲಿದೆ. 

250 ಸಿಸಿ ಎಂಜಿನ್ ಯಜ್ಡಿ ಬೈಕ್ ಆಧುನಿಕ ತಂತ್ರಜ್ಞಾನಗಳನ್ನು ಹೊಂದಿರಲಿದೆ. ABS ಬ್ರೇಕ್ ಸೇರಿದಂತೆ ಎಲ್ಲಾ ಆಯ್ಕೆಗಳು ಇರಲಿದೆ. 

Latest Videos
Follow Us:
Download App:
  • android
  • ios