Asianet Suvarna News Asianet Suvarna News

ಮೇಡ್ ಇನ್ ಇಂಡಿಯಾ ಟಾಟಾ ಹೆಕ್ಸಾ ಈಗ ಬಾಂಗ್ಲಾದೇಶ ಸೇನೆಯ ಅದೀಕೃತ SUV ಕಾರು!

ಪ್ರಧಾನಿ ಮೋದಿ ಇತ್ತೀಚೆಗೆ ಭಾರತದಲ್ಲೇ ಉತ್ಪಾದನೆಯಾಗಬೇಕು, ಇಲ್ಲಿಂದ ಇತರ ದೇಶಗಳಿಗೆ ರಫ್ತುಮಾಡುವ ಸಾಮರ್ಥ್ಯ ಹೆಚ್ಚಿಸಬೇಕು. ಇದಕ್ಕಾಗಿ ಸಾವಲಂಬಿ ಭಾರತ ನಿರ್ಮಾಣಕ್ಕೆ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿಸಿದ್ದಾರೆ. ಈ ನಿಟ್ಟಿನಲ್ಲಿ ಕೆಳೆದ 3 ವರ್ಷಗಳಿಂದ ಕೆಲಸ ನಡೆಯುತ್ತಿದೆ. ಇದರ ಫಲವೇ ಭಾರತದ ಟಾಟಾ ಹೆಕ್ಸಾ ಕಾರು ಇದೀಗ ಬಾಂಗ್ಲಾದೇಶ ಸೇನೆಗೆ ಅದೀಕೃತವಾಗಿ ಸೇರಿಕೊಂಡಿದೆ.

Made in India tata hexa car official joined Bangladesh army vehicle
Author
Bengaluru, First Published May 17, 2020, 2:51 PM IST

ಮುಂಬೈ(ಮೇ.17): ಟಾಟಾ ಮೋಟಾರ್ಸ್ ಮೇಲೆ ಭಾರತೀಯರ ಗೌರವ ಮತ್ತಷ್ಟು ಹೆಚ್ಚಾಗಿದೆ.  ಟಾಟಾ ಗ್ರೂಪ್ ಸಮೂಹ ಸಂಸ್ಥೆ ಕೊರೋನಾ ತುರ್ತು ಪರಿಹಾರ ನಿಧಿಗೆ 1,500 ಕೋಟಿ ರೂಪಾಯಿ ನೀಡಿದೆ. ಇದೀಗ ಟಾಟಾ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಭಾರದಲ್ಲಿ ನಿರ್ಮಾಣವಾದ ಟಾಟಾ ಹೆಕ್ಸಾ ಕಾರು ಇದೀಗ ಅದೀಕೃತವಾಗಿ ಬಾಂಗ್ಲಾದೇಶ ಸೇನೆ ಸೇರಿಕೊಂಡಿದೆ.

ಲಾಕ್‌ಡೌನ್ ಸಂಕಷ್ಟ; ಗ್ರಾಹಕರಿಗೆ ವಾರಂಟಿ ವಿಸ್ತರಣೆ ಸೇರಿ ಹಲವು ಸೌಲಭ್ಯ ಘೋಷಿಸಿದ ಟಾಟಾ ಮೋಟಾರ್ಸ್!.

2019ರ ಅಂತ್ಯದಲ್ಲಿ ಬಾಂಗ್ಲಾದೇಶ ಸರ್ಕಾರ, ಟಾಟಾ ಮೋಟಾರ್ಸ್ ಜೊತೆ ಮಾತುಕತೆ ನಡೆಸಿತ್ತು. ಬಳಿಕ 2020ರ ಆರಂಭದಲ್ಲಿ ಟಾಟಾ ಹೆಕ್ಸಾ ವಾಹನ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. 200 ಹೆಕ್ಸಾ SUV ಕಾರುಗಳನ್ನು ಬಾಂಗ್ಲಾದೇಶ ಸೇನೆ ಬುಕ್ ಮಾಡಿತ್ತು. ಇದೀಗ ಟಾಟಾ ಮೋಟಾರ್ಸ್ ಬಾಂಗ್ಲಾದೇಶ ಸೇನೆಗೆ ವಿಶೇಷವಾಗಿ ವಿನ್ಯಾಸ ಮಾಡಿದ ಹೆಕ್ಸಾ ಕಾರನ್ನು ಹಸ್ತಾಂತರಿಸಿದೆ. ಇಷ್ಟೇ ಅಲ್ಲ ಬಾಂಗ್ಲಾದೇಶ ಸೇನೆಯ ಅಧೀಕೃತ ವಾಹನವಾಗಿ ಟಾಟಾ ಹೆಕ್ಸಾ ಕಾರು ಸೇರಿಕೊಂಡಿದೆ.

ಮಾರುತಿ Dzire, ಹೊಂಡಾ ಅಮೇಜ್ ಪ್ರತಿಸ್ಪರ್ಧಿ, ಬರುತ್ತಿದೆ ಟಾಟಾ ಸೆಡಾನ್ ಕಾರು!...

2012ರಿಂದ ಭಾರತದ ಟಾಟಾ ಮೋಟಾರ್ಸ್ ಕಾರುಗಳು ಬಾಂಗ್ಲಾದೇಶದಲ್ಲಿ ಮಾರಾಟವಾಗುತ್ತಿದೆ. ಬಾಂಗ್ಲಾದೇಶ ಸೇನೆ ಹೆಕ್ಸಾ ಕಾರು ಆರ್ಡರ್ ಮಾಡಿದ ಕಾರಣ ಬಾಂಗ್ಲಾದಲ್ಲಿ ಹೆಕ್ಸಾ ಕಾರು ಮಾರಾಟವಿಲ್ಲ. ಕೇವಲ ಸೇನೆಗೆ ಮಾತ್ರ ಸೀಮಿತವಾಗಿದೆ. bs6 ಎಂಜಿನ್, 2.2 ಲೀಟರ್ ಟರ್ಬೋ ಚಾರ್ಜ್ಡ್ ಡೀಸೆಲ್ ಎಂಜಿನ್ ಹೆಕ್ಸಾ ಕಾರನ್ನು ಬಾಂಗ್ಲಾದೇಶ ಸೇನೆ ಬಳಸಿಕೊಂಡಿದೆ.

ಭಾರತದಲ್ಲಿ ಇದೀಗ ಟಾಟಾ ಕಾರುಗಳಿಗೆ ಭಾರಿ ಬೇಡಿಕೆ ಬರುತ್ತಿದೆ. ಕಾರಣ ಸುರಕ್ಷತೆಯಲ್ಲಿ ಟಾಟಾ ಕಾರುಗಳು ಇತರ ಎಲ್ಲಾ ಕಾರುಗಳನ್ನು ಹಿಂದಿಕ್ಕ ಮೊದಲ ಸ್ಥಾನ ಪಡದಿದೆ. ಕ್ರಾಶ್ ಟೆಸ್ಟ್ ರೇಟಿಂಗ್‌ನಲ್ಲಿ ಟಾಟಾ ಕಾರುಗಳು 5 ಸ್ಟಾರ್ ರೇಟಿಂಗ್ ಪಡೆದಿದೆ. ಸ್ಪರ್ಧಾತ್ಮಕ ಮೊತ್ತ,  ಮೇಡ್ ಇನ್ ಇಂಡಿಯಾ ಸೇರಿದಂತೆ ಹಲವು ಕಾರಣಗಳಿಂದ ಭಾರದದಲ್ಲಿ ಟಾಟಾ ಕಾರುಗಳ ಡಿಮ್ಯಾಂಡ್ ಹೆಚ್ಚಾಗಿದೆ.
 

Follow Us:
Download App:
  • android
  • ios