ಹಬ್ಬದ ಪ್ರಯುಕ್ತ Unlock with Mercedes-Benz ಅಭಿಯಾನ ಆರಂಭ!
ಇನ್ನೇನು ಸಾಲು ಸಾಲು ಹಬ್ಬಗಳು ಆರಂಭವಾಗಿವೆ. ಕೊರೋನಾ ವೈರಸ್ ಜನರಿಂದ ದೂರವಾಗದೇ ಹೋದರೂ ಮನುಷ್ಯ ಅದಕ್ಕೆ ಹೆದರೋದ ಕಡಿಮೆ ಮಾಡಿದ್ದಾನೆ. ಅಲ್ಲದೇ ಬದುಕು ಸಹಜದತ್ತ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನರು ಸೆಳೆಯಲು ಮರ್ಸಿಡೀಸ್ ಬೆಂಝ್ Unlock with Mercedes-Benz ಅಭಿಯಾನ ಆರಂಭಿಸಿದೆ.
ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಲಾಕ್‌ಡೌನ್ ಜನರ ಬದುಕಿನ ಪಯಣಕ್ಕೆ ಬ್ರೇಕ್ ಹಾಕಿತ್ತು. ಇನ್ನೂ ಅನ್‌ಲಾಕ್ ಆದರೂ ಯಾರೂ ತಮ್ಮ ತಮ್ಮ ಕಾರಿನಲ್ಲಿ ಇತರೆಡೆ ಪ್ರಯಾಣ ಮಾಡಲು ಹಿಂಜರಿಯುತ್ತಿದ್ದರು. ಮುಂಬರುವ ಸಾಲು ಸಾಲು ಹಬ್ಬದ ಪ್ರಯಕ್ತ ಮರ್ಸಿಡೀಸ್ ಬೆಂಝ್ Unlock with Mercedes-Benz ಅಭಿಯಾನ ಆರಂಭಿಸಿದೆ.
ಸದ್ಯ ಭಾರತದಲ್ಲಿ ನಾಲ್ಕನೇ ಹಂತದ ಅನ್‌ಲಾಕ್ ನಿಯಮ ಜಾರಿಯಲ್ಲಿದೆ. ಬಹುತೇಕ ಕ್ಷೇತ್ರಕ್ಕೆ ವಿನಾಯಿತಿ ನೀಡಲಾಗಿದೆ. ಕ್ವಾರಂಟೈನ್, ಅಂತರ್ ರಾಜ್ಯ ನಿರ್ಬಂಧಗಳನ್ನು ತೆರುವು ಮಾಡಲಾಗಿದೆ. ದೇಶದೆಲ್ಲೆಡೆ ಮುಕ್ತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಇನ್ನು ಪ್ರವಾಸೋದ್ಯಮಗಳು ಕೂಡ ತೆರಯಲಾಗಿದ್ದು, ವಿಶೇಷ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ.
ಅಮಿತಾಭ್ ಬಚ್ಚನ್ ಮನೆಗೆ ಹೊಸ ಅತಿಥಿ ಆಗಮನ
ಲಾಕ್‌ಡೌನ್ ಬೆನ್ನಲ್ಲೇ ರೋಮನ್ ಕವಿ ಹೇಳಿದ Carpe Diem (ಜೀವನನ್ನು ಸಂತೋಷವಾಗಿ ಆಸ್ವಾದಿಸು) ಪದಕ್ಕೆ ಹೆಚ್ಚಿನ ಆರ್ಥ ಬಂದಿದೆ. ಕಾರಣ ಎರಡೂ ತಿಂಗಳಿಗೂ ಹೆಚ್ಚು ಕಾಲ ಮನೆಯೊಳಗೆ ಬಂಧಿಯಾಗಿದ್ದ ಜನರಿಗೆ ಹೊರಗಡೆ ಸುತ್ತಾಡಲು, ಜೀವನವನ್ನು ಅಸ್ವಾಧಿಸಲು ಹಾತೊರೆದಿದ್ದಾರೆ. ಇದಕ್ಕಾಗಿ ಭಾರತದ ಅತೀ ದೊಡ್ಡ ಐಷಾರಾಮಿ ಕಾರು ತಯಾಕರ ಮರ್ಸಿಡಿಸ್ ಬೆಂಝ್ Unlock with Mercedes-Benz ಅಭಿಯಾನ ಆರಂಭಿಸಿದೆ. ಅನ್‌ಲಾಕ್ ಸಮಯದಲ್ಲಿ ಹೊಸ ಪ್ರಯಾಣ, ಹೊಸ ಅನುಭವ ಹಾಗೂ ಬಂಧಿಯಾಗಿದ್ದ ಭಾವನೆಗಳಿಗೆ ರೆಕ್ಕೆ ಪುಕ್ಕ ನೀಡಲು ಮರ್ಸಡೀಸ್ ಬೆಂಝ್ ನೆರವಾಗಲಿದೆ. ಹೊಸ ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿ ನೆನಪುಗಳು ಮರುಕಳಿಸಲು, ಪ್ರಯಾಣದ ಸವಿ ಆನಂದಿಸಲು ಹಾಗೂ ಲಾಕ್‌ಡೌನ್‌ನಿಂದ ಹುದುಗಿಸಿಟ್ಟ ಕಲ್ಪನೆಗಳನ್ನು ಅನ್ಲಾಕ್ ಮಾಡಲು ಮರ್ಸಡಿಸ್ ಬೆಂಝ್ ನೆರವಾಗುತ್ತಿದೆ.
ಗ್ರಾಹಕರ ಅಸೆಗಳನ್ನು, ಆಕಾಂಕ್ಷೆಗಳನ್ನು ಹಾಗೂ ಅವರ ಕನಸುಗಳನ್ನು ಅನ್ಲಾಕ್ ಮಾಡಲು ಪ್ರೇರೇಪಿಸುವ ಉದ್ದೇಶದಿಂದ Unlock with Mercedes-Benz ಅಭಿಯಾನ ಆರಂಭಿಸಲಾಗಿದೆ. ಕೊರೋನಾ , ಲಾಕ್‌ಡೌನ್‌ಗಳಿಂದ ಸಂಕುಚಿತಗೊಂಡಿದ್ದ ಕಲ್ಪನೆಗಳನ್ನು ಪುನರುಜ್ಜೀವನಗೊಳಿಸಲು ಈ ಅಭಿಯಾನ ನೆರವಾಗಲಿದೆ. ಹೊಸ ಪ್ರಯಾಣ, ಹೊಸ ಸ್ಥಳ ಹಾಗೂ ಹೊಸ ಸಾಹಸದೊಂದಿಗೆ ಪ್ರಯಾಣಕ್ಕೆ ಸಹಕಾರಿಯಾಗಿದೆ. ವಿಶೇಷವಾಗಿ ಗ್ರಾಹಕರಿಗೆ ಹಣಕಾಸಿನ ಹಾಗೂ ಮಾಲೀಕತ್ವದ ಸಮಸ್ಯೆಗಳಿಗೆ ಪರಿಹಾರ ನೀಡಲಿದೆ ಎಂದು ಮರ್ಸಿಡಿಸ್ ಬೆಂಜ್ ಇಂಡಿಯಾದ ಎಂಡಿ ಹಾಗೂ ಸಿಇಒ ಮಾರ್ಟಿನ್ ಶ್ವೆಂಕ್ ಹೇಳಿದರು.
ಗ್ರಾಹಕರು ತಮ್ಮ ಕನಸಿನ ಕಾರನ್ನು ಖರೀದಿಸಲು ಅದ್ಭುತ ಅವಕಾಶವನ್ನು ಈ ಕೊಡುಗೆ ನೀಡುತ್ತಿದೆ. ಮರ್ಸಿಡಿಸ್ ಬೆಂಝ್ ಕಾರುಗಳು ಐಷಾರಾಮಿ ಮಾತ್ರವಲ್ಲ, ಅವರವರ ಸ್ಟೇಟಸ್ ಕೂಡ ಆಗಿದೆ. ಅತ್ಯಾಧುನಿಕ ತಂತ್ರಜ್ಞಾನ, ಗರಿಷ್ಠ ಫೀಚರ್ಸ್ ಸೌಲಭ್ಯಗಳಿಂದ ಮನೆಯಿಂದ ಹೊರಗಿದ್ದರೂ ಮರ್ಸಡಿಸ್ ಬೆಝ್ ಅದೇ ಐಷಾರಾಮಿ ಅನುಭವ ನೀಡಲಿದೆ. ಈ ಹಬ್ಬದ ಪ್ರಯುಕ್ತ ಭಾರತದ ಮರ್ಸಡಿಸ್ ಬೆಂಝ್ ಹಲವು ಕೊಡುಗೆ ನೀಡುತ್ತಿದೆ. ಈ ಮೂಲಕ ಗ್ರಾಹಕರು ತಮ್ಮ ಡ್ರೀಮ್ ಕಾರು ಖರೀದಿಸಲು ನೆರವಾಗುತ್ತಿದೆ.
Unlock with Mercedes-Benz ಅಭಿಯಾನದಲ್ಲಿ ಗ್ರಾಹಕರಿಗೆ ಹಲವು ಪ್ರಯೋಜನಗಳಿವೆ;
C-ಕ್ಲಾಸ್ ಕಾರು: 39,999 ರೂಪಾಯಿಂದ EMI ಆರಂಭಗೊಳ್ಳಲಿದೆ | ಬಡ್ಡಿ ದರ @ 7.99% | New Star in 3 years | ಕಾಂಪ್ಲಿಮೆಂಟರಿಯಾಗಿ ಮೊದಲ ವರ್ಷದ ವಿಮೆ
E-ಕ್ಲಾಸ್ ಕಾರು: 49,999 ರೂಪಾಯಿಂದ EMI ಆರಂಭಗೊಳ್ಳಲಿದೆ | ಬಡ್ಡಿ ದರ @ 7.99% | New Star in 3 years | ಕಾಂಪ್ಲಿಮೆಂಟರಿಯಾಗಿ ಮೊದಲ ವರ್ಷದ ವಿಮೆ
GLC: 44,444 ರೂಪಾಯಿಂದ EMI ಆರಂಭಗೊಳ್ಳಲಿದೆ | ಬಡ್ಡಿ ದರ @ 7.99% | New Star in 3 years | ಕಾಂಪ್ಲಿಮೆಂಟರಿಯಾಗಿ ಮೊದಲ ವರ್ಷದ ವಿಮೆ
ಮರ್ಸಿಡಿಸ್ ಬೆಂಝ್ ಕಾರಿನ ಕ್ಲಾಸ್ ಫೀಚರ್ಸ್:
Comfort: ಕಾರು ಖರೀದಿಸುವ ಗ್ರಾಹಕರು ಮೊದಲು ಕಾರಿನ ಕಂಫರ್ಟ್ ಕುರಿತು ಪರಿಶೀಲಿಸುತ್ತಾರೆ. ಮರ್ಸಿಡಿಸ್ ಬೆಂಝ್ ಕಾರು ಅಪರಿಮಿತ ಕಂಫರ್ಟ್ ನೀಡಲಿದೆ. ಡಿಸೈನ್, ಇದರಲ್ಲಿರುವ ಫೀಚರ್ಸ್ ಚಾಲಕ ಹಾಗೂ ಪ್ರಯಾಣಿಕರಿಗೆ ಅತ್ಯುತ್ತಮ ಹಾಗೂ ಆರಾಮದಾಯಕ ಪ್ರಯಾಣ ನೀಡಲಿದೆ.
Innovation and Technology: ಮರ್ಸಿಡಿಸ್ ಬೆಂಝ್ ಅತ್ಯಾಧುನಿಕ ತಂತ್ರಜ್ಞಾನವನ್ನು ತನ್ನ ಕಾರಿನಲ್ಲಿ ಅಳವಡಿಸಿದೆ. MBUX ಹಾಗೂ ನ್ಯಾಚ್ಯುಲರ್ ವಾಯ್ಸ್ ಅಸಿಸ್ಟ್, ಫ್ರಂಟ್ ಹಾಗೂ ರೇರ್ ಪಾರ್ಕಿಂಗ್ ಅಸಿಸ್ಟ್, ಮರ್ಸಿಡಿಸ್ ಮಿ ಆ್ಯಪ್ ಸೇರಿದಂತೆ ಎಲ್ಲಾ ಆಧುನಿಕ ತಂತ್ರಜ್ಞಾನ ಈ ಕಾರಿನಲ್ಲಿದೆ.
Selection: ಗ್ರಾಹಕರ ಬೇಡಿಕೆ, ಅವರ ಕನಸಿಗೆ ತಕ್ಕಂತೆ ಮರ್ಸಡೀಸ್ ಬೆಂಜ್ ಕಾರುಗಳಲ್ಲಿ ಹಲವು ಮಾಡೆಲ್ ಕಾರುಗಳಿವೆ. ಸೆಡಾನ್ ಕಾರಿನಿಂದ ಹಿಡಿದು SUV ಕಾರುಗಳ ವರೆಗೆ ಹಲವು ಆಯ್ಕೆಗಳನ್ನು ಮರ್ಸಿಡಿಸ್ ಬೆಂಝ್ ನೀಡುತ್ತಿದೆ.
Safety:ಮರ್ಸಿಡಿಸ್ ಬೆಂಝ್ ಪ್ರತಿ ಕಾರುಗಳು ಹಲವು ಹಂತದ ಸುರಕ್ಷತಾ ಪರೀಕ್ಷೆಗೆ ಒಳಪಟ್ಟಿದೆ. ಗ್ರಾಹಕರಿಗೆ ಗರಿಷ್ಠ ಸುರಕ್ಷತೆ ನೀಡುತ್ತಿದೆ. ABS, ಏರ್‌ಮ್ಯಾಟಿಕ್ ಸಸ್ಪೆನ್ಶನ್, ADS+ ಸೇರಿದಂತೆ ಹಲವು ಸುರಕ್ಷತಾ ಫೀಚರ್ಸ್‌ಗಳಿವೆ.
Breakdown Management: ಪ್ರಯಾಣ ನಡುವೆ ಕಾರು ನಿಂತು ಹೋದರೆ ಚಾಲನ ಕುಳಿತುಕೊಳ್ಳುವ ಮೇಲ್ಬಾಗದಲ್ಲಿ ಬಟನ್ ಒತ್ತಿದರೆ, ಮರ್ಸಿಡಿಸ್ ಬೆಂಝ್ ರೋಡ್ ಸೈಡ್ ಅಸಿಸ್ಟೆಂಟ್ ವಿಭಾಗಕ್ಕೆ ಮಾಹಿತಿ ರವಾನೆಯಾಗಲಿದೆ. ಕಾರು ಕೆಟ್ಟು ನಿಂತಿರುವ ಜಾಗ, ಎಲ್ಲವೂ ಕೂಡ ತಿಳಿಯಲಿದೆ. ಈ ಮೂಲಕ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಲು ನೆರವಾಗಲಿದೆ.
Emergency Call Services: ಚಾಲಕ ಕಾರಿನಲ್ಲಿರುವ SOS ಬಟನ್ ಒತ್ತಿದರೆ ಅಥವಾ ಅಪಘಾತದ ಸಂದರ್ಭದಲ್ಲಿ ಕಾರಿನ ಸೆನ್ಸಾರ್ ಅಪಘಾತವನ್ನು ಗ್ರಹಿಸಿ ಮಾಹಿತಿಗಳನ್ನು Bosch ವರ್ಗಾಯಿಸಲಿದೆ. ಮರ್ಸಡಿಸ್ ಬೆಂಝ್‌ನ ತುರ್ತು ಸ್ಪಂದನೆ ಕೇಂದ್ರ ಜವಾಬ್ದಾರಿಯನ್ನು Bosch ನಿರ್ವಹಿಸುತ್ತಿದೆ. ಮಾಹಿತಿ ಪಡೆದ ಬೆನ್ನಲ್ಲೇ ಬಾಶ್ ರಕ್ಷಣೆ ಹಾಗೂ ಇತರ ನೆರವಿಗೆ ಸಿಬ್ಬಂದಿಗಳನ್ನು ಕಳುಹಿಸಲಿದೆ.
Information Call and me Call Services: ಕಾರಿನಲ್ಲಿರುವ ಟಚ್ ಬಟನ್ ಒತ್ತಿದರೆ ನೇರವಾಗಿ ಮರ್ಸಿಡಿಸ್ ಬೆಂಝ್ ಗ್ರಾಹಕ ಸೇವಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸಲಿದೆ. ಈ ಮೂಲಕ ಗ್ರಾಹಕರ ಪ್ರಶ್ನೆಗಳಿಗೆ, ಸಮಸ್ಯೆಗಳಿಗೆ ಉತ್ತರ ಸಿಗಲಿದೆ.
ಇಷ್ಟು ಕೊಡುಗೆಗಳು ಹಾಗೂ ಅತ್ಯುತ್ತಮ ಫೀಚರ್ಸ್ ಕಾರಿನಲ್ಲಿರುವಾಗ ನೀವು ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಅಗತ್ಯವಿಲ್ಲ. ಕೊಡುಗಳನ್ನು ಪರೀಶಿಲಿಸಿ ಹೊಚ್ಚ ಹೊಸ ಮರ್ಸಡಿಸ್ ಬೆಂಝ್ ಕಾರು ಮನೆಗೆ ತನ್ನಿ.