ನವರಾತ್ರಿ, ದಸರಾ ಹಬ್ಬದಲ್ಲಿ ದಾಖಲೆ ಬರೆದ ಮರ್ಸಿಡೀಸ್ ಬೆಂಝ್!
ಕೊರೋನಾ ವೈರಸ್ ಕಾರಣ ಸೊರಗಿ ಹೋಗಿದ್ದ ಭಾರತೀಯ ಆಟೋಮೊಬೈಲ್ ಇಂಡಸ್ಟ್ರಿ ನವರಾತ್ರಿ ಹಾಗೂ ದಸರಾ ಹಬ್ಬಕ್ಕೆ ಚೇತರಿಸಿಕೊಂಡಿದೆ. ಲಕ್ಸುರಿ ಕಾರು ತಯಾರಕ ಕಂಪನಿ ಮರ್ಸಿಡೀಸ್ ಬೆಂಝ್ ಹಬ್ಬದ ವೇಳೆ ದಾಖಲೆಯ ಮಾರಾಟ ಕಂಡಿದೆ.
ದೆಹಲಿ(ಅ.26): ಮರ್ಸಡೀಸ್ ಬೆಂಝ್ ಇಂಡಿಯಾಗೆ ನವರಾತ್ರಿ ಹಾಗೂ ದಸರಾ ಹಬ್ಬ ಹೆಚ್ಚು ಸಿಹಿ ನೀಡಿದೆ. 2019ರ ಮಾರಾಟ ಕುಸಿತ, 2020ರ ಕೊರೋನಾ ಕಾಟದಿಂದ ಲಕ್ಸುರಿ ಕಾರು ಉತ್ಪಾದಕ ಕಂಪನಿ ಮರ್ಸಿಡೀಸ್ ಬೆಂಝ್ ತೀವ್ರ ಹಿನ್ನಡೆ ಅನುಭವಿಸಿತ್ತು. ಆದರೆ ನವರಾತ್ರಿ ಹಾಗೂ ದಸರಾ ಹಬ್ಬದಲ್ಲಿ ಮರ್ಸಿಡೀಸ್ ಬೆಂಝ್ ಬರೋಬ್ಬರಿ 550 ಕಾರುಗಳನ್ನು ಮಾರಾಟ ಮಾಡೋ ಮೂಲಕ ದಾಖಲೆ ಬರೆದಿದೆ.
ಬೆಂಜ್‌ನೊಂದಿಗೆ ಅನ್‌ಲಾಕ್ ಸಂಭ್ರಮ: ಕನಸಿನ ಕಾರು ನಿಮ್ಮದಾಗಿಸಿಕೊಳ್ಳಿ.
ಪ್ರತಿ ಭಾರಿ ಗ್ರಾಹಕರು ಹಬ್ಬವನ್ನು ಮರ್ಸಿಡೀಸ್ ಬೆಂಝ್ ಮೂಲಕ ಆಚರಿಸುತ್ತಾರೆ. ಈ ಬಾರಿ ವಿಶೇಷವಾಗಿದೆ. ಕೊರೋನಾ ವೈರಸ್ ಕಾರಣ ಪರಿಸ್ಥಿತಿ ಸಂಪೂರ್ಣ ಬದಲಾಗಿತ್ತು. ಆದರೆ ಗ್ರಾಹಕರು ಮರ್ಸಿಡೀಸ್ ಬೆಂಝ್ ಕೈಹಿಡಿದ್ದಾರೆ. 550 ಕಾರುಗಳು ಮಾರಾಟವಾಗೋ ಮೂಲಕ ಭಾರತದಲ್ಲಿ 2020ರ ನವರಾತ್ರಿ ಹಾಗೂ ದಸರಾ ಹಬ್ಬದ ವೇಳೆ ಗರಿಷ್ಠ ಮಾರಾಟವಾದ ಲಕ್ಸುರಿ ಕಾರು ಅನ್ನೋ ಹೆಗ್ಗಳಿಕೆಗೆ ಮರ್ಸಿಡೀಸ್ ಬೆಂಝ್ ಪಾತ್ರವಾಗಿದೆ.
ಸಂಪೂರ್ಣ ಚಾರ್ಜ್‌ಗೆ 700 ಕಿ.ಮೀ ಮೈಲೇಜ್; ಇದು ಮರ್ಸಡೀಸ್ ಬೆಂಜ್ ಎಲೆಕ್ಟ್ರಿಕ್ ಕಾರು!.
ದೆಹಲಿ, ಮುಂಬೈ, ಗುಜರಾತ್ ಸೇರಿದಂತೆ ಉತ್ತರ ಭಾರತದಿಂದ ಮರ್ಸಿಡೀಸ್ ಬೆಂಝ್ ಕಾರುಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ದೆಹಲಿ ನಗರದಲ್ಲಿ ಹಬ್ಬದ ವೇಳೆ 175 ಮರ್ಸಿಡೀಸ್ ಬೆಂಝ್ ಕಾರುಗಳನ್ನು ಮಾರಾಟ ಮಾಡಲಾಗಿದೆ ಎಂದು ಮರ್ಸಿಡೀಸ್ ಬೆಂಝ್ ಭಾರತದ ವ್ಯವಸ್ಥಾಪಕ ನಿರ್ದೇಶಕ ಮಾರ್ಟಿನ್ ಶೆವೆಂಕ್ ಹೇಳಿದ್ದಾರೆ.
ಹಬ್ಬದ ಸಂದರ್ಭ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಮರ್ಸಿಡೀಸ್ ಬೆಂಝ್ ಉತ್ತಮ ಮಾರಾಟ ಕಾಣುವ ನಿರೀಕ್ಷೆಯಿದೆ. ಕಾರಣ ಜುಲೈ ತಿಂಗಳಿಂದ ಮರ್ಸಿಡೀಸ್ ಬೆಂಝ್ ಭಾರತದಲ್ಲಿ ಹಂತ ಹಂತವಾಗಿ ಮಾರಾಟದಲ್ಲಿ ಏರಿಕೆ ಕಾಣುತ್ತಿದೆ. ಇನ್ನು ದೀಪಾವಳಿ ಹಬ್ಬ ಆಗಮಿಸಲಿದೆ. ಹೀಗಾಗಿ ಮತ್ತೊಂದು ದಾಖಲೆ ಬರೆಯುವ ವಿಶ್ವಾಸವಿದೆ. ಗ್ರಾಹರಿಗೆ ಅತ್ಯುತ್ತಮ ಕಾರಿನ ಜೊತೆಗೆ ಅಷ್ಟೇ ಅತ್ಯುತ್ತಮ ಸೇವೆ ನೀಡುವುದೇ ನಮ್ಮ ಉದ್ದೇಶ ಎಂದು ಮಾರ್ಟಿನ್ ಹೇಳಿದ್ದಾರೆ.