ನವದೆಹಲಿ(ನ.08): ಕೊರೋನಾ ವಕ್ಕರಿಸಿದ ಬಳಿಕ ಇದೀಗ ಪ್ರತಿಯೊಬ್ಬರೂ ಸ್ವಂತ ವಾಹನದಲ್ಲಿ ಪ್ರಯಾಣ ಮಾಡಲು ಬಯಸುತ್ತಾರೆ. ಹೀಗಾಗಿ ವಾಹನ ಖರೀದಿಯತ್ತ ಹೆಜ್ಜೆ ಇಡುತ್ತಿದ್ದಾರೆ. ಆರೋಗ್ಯ ಕಾಪಾಡಿಕೊಳ್ಳುವ ಹಾಗೂ ಪರಿಸರಕ್ಕೂ ಪೂರಕವಾದ ನೂತನ ಎಲೆಕ್ಟ್ರಿಕ್ ಬೈಕ್ ಬಿಡುಗಡೆಯಾಗಿದೆ. ಹೆಚ್ಚು ಕಡಿಮೆ ಇದು ಸೈಕಲ್ ಆದರೂ, ಎಲೆಕ್ಟ್ರಿಕ್ ಬೈಕ್ ಅನ್ನೋದು ಇದರ ವಿಶೇಷತೆ.

ನೊವಸ್ ಎಲೆಕ್ಟ್ರಿಕ್ ಬೈಕ್ ಅನಾವರಣ, ಇದು ದುಬಾರಿ EV!

GoZero ಮೊಬಿಲಿಟಿ ಭಾರತದಲ್ಲಿ ಹೊಚ್ಚ ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಿದೆ. ಈ ಎಲೆಕ್ಟ್ರಿಕ್ ಬೈಕ್ ಗ್ರೇಟ್ ಬ್ರಿಟನ್‌ನಲ್ಲಿ ಡಿಸೈನ್ ಮಾಡಲಾಗಿದ್ದು, ಭಾರತದಲ್ಲಿ ಉತ್ಪಾದನೆಯಾಗಿದೆ. ಸ್ಕೆಲ್ಲಿಂಗ್, ಸ್ಕೆಲ್ಲಿಂಗ್ ಲೈಟ್ ಹಾಗೂ ಸ್ಕೆಲ್ಲಿಂಗ್ ಪ್ರೋ ಎಂಬ ಮೂರು ವೇರಿಯೆಂಟ್ ಲಭ್ಯವಿದೆ.

ಎಲೆಕ್ಟ್ರಿಕ್ ಸ್ಕೂಟರ್‌ಗೆ 12 ಸಾವಿರ, ರಿಕ್ಷಾಗೆ 48 ಸಾವಿರ ಸಬ್ಸಿಡಿ ಘೋಷಿಸಿದ ಸರ್ಕಾರ!.

GoZero ಎಲೆಕ್ಟ್ರಿಕ್ ಬೈಕ್ ಬೆಲೆ:
ಸ್ಕೆಲ್ಲಿಂಗ್ = 19,999 ರೂಪಾಯಿ
ಸ್ಕೆಲ್ಲಿಂಗ್ ಲೈಟ್ =24,999 ರೂಪಾಯಿ
ಸ್ಕೆಲ್ಲಿಂಗ್ ಪ್ರೋ = 34,999 ರೂಪಾಯಿ

ಎಲೆಕ್ಟ್ರಿಕ್ ಕಾರು ಚಾರ್ಜಿಂಗ್: ಪ್ರತಿ ಯುನಿಟ್‌ಗೆ ತಗಲುವ ವೆಚ್ಚ ಎಷ್ಟು?

GoZero ಸ್ಕೆಲ್ಲಿಂಗ್ ಎಲೆಕ್ಟ್ರಿಕ್ ಬೈಕ್‌ನಲ್ಲಿ 210wh ಲಿಥಿಯಂ ಬ್ಯಾಟರಿ ಬಳಸಲಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 25 ಕಿ.ಮೀ ಮೈಲೇಜ್ ನೀಡಲಿದೆ. ಈ ಎಲೆಕ್ಟ್ರಿಕ್ ಬೈಕ್ ಗರಿಷ್ಠ ವೇಗ 25 ಕಿ.ಮೀ ಪ್ರತಿ ಗಂಟೆಗೆ. ಇನ್ನು 3 ಗಂಟೆಯಲ್ಲಿ ಶೇಕಡಾ 95ರಷ್ಟು ಚಾರ್ಜ್ ಆಗಲಿದೆ. 

ಸ್ಕೆಲ್ಲಿಂಗ್ ಲೈಟ್ ಹಾಗೂ ಪ್ರೋ ಎಲೆಕ್ಟ್ರಿಕ್ ಬೈಕ್ ಒಂದು ಬಾರಿ ಚಾರ್ಜ್ ಮಾಡಿದರೆ 75 ಕಿ.ಮೀ ಮೈಲೇಜ್ ನೀಡಲಿದೆ. ಬೈಕ್ ಬುಕಿಂಗ್ ಆರಂಭಗೊಂಡಿದ್ದು, ನವೆಂಬರ್ 20 ರಿಂದ ಡೆಲಿವರಿ ಆರಂಭಗೊಳ್ಳಲಿದೆ.