ಪ್ರಯಾಣಿಕರಿಗೆ ಸುರಕ್ಷತೆ ನೀಡುವಲ್ಲಿ ವಿಫಲ; ಉಬರ್ ಲೈಸೆನ್ಸ್ ರದ್ದು?

ಪ್ರಯಾಣಿಕರ ಸುರಕ್ಷತೆಯಲ್ಲಿ ಯಾವದೇ ರಾಜಿಯಿಲ್ಲ ಎಂದಿರುವ ಟ್ರಾನ್ಸ್‌ಪೋರ್ಟ್ ಅಥಾರಿಟಿ ಉಬರ್ ಲೈಸೆನ್ಸ್ ನವೀಕರಿಸಲು ನಿರಾಕರಿಸಿದೆ. ಹೀಗಾಗಿ ಉಬರ್ ತನ್ನ ಸೇವೆಯನ್ನು ಸ್ಥಗಿತಗೊಳಿಸುವ ಅನಿವಾರ್ಯತೆಗೆ ಸುಲಿಕಿದೆ.

London transport authority denied to renew uber taxi licence

ಲಂಡನ್(ನ.26): ವಿಶ್ವದೆಲ್ಲಡೆ ಟ್ಯಾಕ್ಸಿ, ಕ್ಯಾಬ್ ಸೇವೆ ನೀಡುತ್ತಿರುವ ಉಬರ್ ಕಾರು ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಅಮೆರಿಕಾದ ಬಹುರಾಷ್ಟ್ರೀಯ ಕಂಪನಿ ಇದೀಗ ಲಂಡನ್‌ನಲ್ಲಿ ಲೈಸೆನ್ಸ್ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದೆ. ಪ್ರಯಾಣಿಕರಿಗೆ ಸುರಕ್ಷತೆ ನೀಡುವಲ್ಲಿ ವಿಫಲವಾಗಿರುವ ಉಬರ್ ಕಾರು ಸೇವೆಯ ಲೈಸೆನ್ಸ್ ನವೀಕರಿಸಲು ಲಂಡನ್ ಸಾರಿಗೆ ಇಲಾಖೆ ನಿರಾಕರಿಸಿದೆ.

ಇದನ್ನೂ ಓದಿ: ಸಾರಿಗೆ ಇಲಾಖೆ ಸಂಚಾರಕ್ಕೆ ಕವಡೆ ಕಾಸಿನ ಕಿಮ್ಮತ್ತೂ ನೀಡದ ಓಲಾ, ಉಬರ್

ಲಂಡನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಉಬರ್ ಮೇಲೆ ಹಲವು ದೂರುಗಳು ದಾಖಲಾಗಿವೆ. ಇದರಲ್ಲಿ ಪ್ರಮುಖವಾಗಿ ಪ್ರಯಾಣಿಕರಿಗೆ ಕನಿಷ್ಠ ಸುರಕ್ಷತೆ ನೀಡಲು ವಿಫಲವಾಗಿರುವ ಉಬರ್ ಕಂಪನಿಯ ಲೈಸೆನ್ಸ್ ನವೀಕರಿಸಲು ಸಾಧ್ಯವಿಲ್ಲ ಎಂದು ಲಂಡನ್ ಟ್ರಾನ್ಸ್‌ಪೋರ್ಟ್ ಅಥಾರಿಟಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಓಲಾ, ಉಬರ್ ಕಾರ್‌ಪೂಲಿಂಗ್ ನಿಷೇಧಿಸಿದ ಸರ್ಕಾರ!

ಲಂಡನ್ ಟ್ರಾನ್ಸ್‌ಪೋರ್ಟ್ ಅಥಾರಿಟಿ ನಿರ್ಧಾರಕ್ಕೆ ಅಚ್ಚರಿ ವ್ಯಕ್ತಪಡಿಸಿರುವ ಲಂಡನ್ ಉಬರ್, ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಉಬರ್ ಹೇಳಿದೆ. ಈ ಹಿಂದೆ ಕೂಡ ಉಬರ್ ಕಂಪನಿಗೆ ಲೈಸೆನ್ಸ್ ನೀಡಲು ಅಥಾರಿಟಿ ನಿರಾಕರಿಸಿತ್ತು. 2017ರಲ್ಲಿ ಉಬರ್ ಕಂಪನಿ ವಿರುದ್ಧದ ಮೇಲೆ ದಾಖಲಾದ ದೂರು ಆಧರಿಸಿ ಲೈಸೆನ್ಸ್ ನವೀಕರಿಸಲು ನಿರಾಕರಿಸಲಾಗಿತ್ತು. ಆದರೆ ಮೇಲ್ಮನವಿ ಸಲ್ಲಿಸಿದ ಉಬರ್ಗೆ 15 ತಿಂಗಳು, ಬಳಿಕ 2 ತಿಂಗಳು ಹೆಚ್ಚುವರಿ ಅನುಮತಿ ನೀಡಲಾಗಿತ್ತು.

ಇದನ್ನೂ ಓದಿ: ಕರ್ನಾಟಕದಲ್ಲಿ ಓಲಾ, ಉಬರ್ ಕಾರ್‌ಪೂಲಿಂಗ್ ನಿಷೇಧಿಸಿದ ಸರ್ಕಾರ!

ಕಳೆದ 2 ವರ್ಷದಲ್ಲಿ ಉಬರ್ ಕಂಪನಿ ಹಲವು ಬದಲಾವಣೆ ಮಾಡಿದೆ. ಪ್ರಯಾಣಿಕರ ಗರಿಷ್ಠ ಸುರಕ್ಷತೆ ನಮ್ಮ ಆದ್ಯತೆ. ಇದಕ್ಕಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೆಚ್ಚುವರಿ ಲೈಸೆನ್ಸ್ ಅನುಮತಿ ನೀಡುವಾಗಿ ನಮ್ಮ ಸೇವೆ ಕುರಿತು ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಸೇವೆಗೆ ಯೋಗ್ಯ ಎಂಬ ವರದಿ ನೀಡಿತ್ತು. ಇದೀಗ ಉಬರ್ ಸೇವೆಗೆ ಯೋಗ್ಯವಲ್ಲ ಎಂದಿರುವುದು ಸರಿಯಲ್ಲ ಎಂದು ಉಬರ್ ಲಂಡನ್ ಹೇಳಿದೆ. ಆದೇಶದ ವಿರುದ್ದ ಮೇಲ್ಮನವಿ ಸಲ್ಲಿಸಿ, ಲೈ,ಸೆನ್ಸ್ ನವೀಕರಿಸಲಿದ್ದೇವೆ. ನಮ್ಮ ಗ್ರಾಹಕರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಕಂಪನಿ ಹೇಳಿದೆ. 

ನವೆಂಬರ್ 26ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Latest Videos
Follow Us:
Download App:
  • android
  • ios