ನವದೆಹಲಿ(ಏ.14): ಫರ್ಪಾಮೆನ್ಸ್ ಬೈಕ್‌ಗಳಲ್ಲಿ KTM ಡ್ಯೂಕ್ ಹಾಗೂ RC ಬೈಕ್ ಅಗ್ರಸ್ಥಾನದಲ್ಲಿದೆ.  ಆಸ್ಟ್ರಿಯಾ ಮೂಲದ KTM ಬೈಕ್‍ಗೆ ಭಾರತದಲ್ಲಿ ಬಹು ಬೇಡಿಕೆ ಇದೆ. ಇದೀಗ KTM ಡ್ಯೂಕ್ ಹಾಗೂ RC ಬೈಕ್ ಬೆಲೆ ಹೆಚ್ಚಳವಾಗಿದೆ.ಗರಿಷ್ಠ 6,500 ರೂಪಾಯಿಯಷ್ಟು ಹೆಚ್ಚಳವಾಗಿದೆ.

ಇದನ್ನೂ ಓದಿ: ಬಜಾಜ್- KTM ಬಿಡುಗಡೆ ಮಾಡುತ್ತಿದೆ 500cc ಬೈಕ್!

KTM ಡ್ಯೂಕ್ ಬೈಕ್‌ಗಳಲ್ಲಿ 125 ಕಡಿಮೆ ಬೆಲೆಯ ಬೈಕ್. ಆದರೆ ಈ ಬೈಕ್ ಗರಿಷ್ಠ ಬೆಲೆ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. KTM ಡ್ಯೂಕ್ 125 ಬೈಕ್‌ಗೆ 6416 ರೂಪಾಯಿ ಹೆಚ್ಚಳವಾಗಿದೆ. KTM RC ಕಡಿಮೆ ಬೆಲೆ ಹೆಚ್ಚಳವಾದ ಬೈಕ್ . ಈ ಬೈಕ್ ಮೇಲೆ 2252 ರೂಪಾಯಿ ಹೆಚ್ಚಳವಾಗಿದೆ. 

ಬೈಕ್ ನೂತನ ಬೆಲೆ ಹಳೇ ಬೆಲೆ
KTM 125 1,24,416 ರೂ 1,18,00 ರೂ
KTM 200 1,61,421 ರೂ 1,59,168 ರೂ
KTM 350 1,96,672 ರೂ 1,93,421 ರೂ
KTM 390 2,48,819 ರೂ 2,43,562 ರೂ
RC 200 1,89,990 ರೂ 1,87,738 ರೂ
RC 390 2,43,490 ರೂ 2,40,234 ರೂ