ಬೆಂಗಳೂರು(ಆ.27): KTM Duke 790 ಬೈಕ್ ಬಿಡುಗಡೆ ದಿನಾಂಕ ಇನ್ನೂ ಬಹಿರಂಗಗೊಂಡಿಲ್ಲ. ಆದರೆ ಬೆಂಗಳೂರಿನ ಕೆಲ ಡೀಲರ್‌ಗಳಿಗೆ  KTM Duke 790 ಬೈಕ್ ತಲುಪಿದೆ. ಈಗಾಗಲೆ ಬುಕಿಂಗ್ ಕೂಡ ಆರಂಭಿಸಿದ್ದಾರೆ. 30,000 ರೂಪಾಯಿಂದ 50,000 ರೂಪಾಯಿ ವರೆಗೆ ಬುಕಿಂಗ್ ಬೆಲೆಯನ್ನ ನಿಗದಿಪಡಿಸಲಾಗಿದ್ದು, ಗ್ರಾಹಕರು ಡೀಲರ್‌ ಬಳಿ ತೆರಳಿ ಬೈಕ್ ಬುಕ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: ಬರುತ್ತಿದೆ ಬೆಂಗಳೂರು ಮೂಲದ Emflux TWO ಎಲೆಕ್ಟ್ರಿಕ್ ಬೈಕ್ !

ಈ ವರ್ಷ(2019) ಭಾರತದಲ್ಲಿ 100  KTM Duke 790 ಬೈಕ್ ಮಾರಾಟಕ್ಕೆ ಲಭ್ಯವಿದೆ. ಹೀಗಾಗಿ ಮೊದಲು ಬುಕ್ ಮಾಡಿದವರಿಗೆ ಆದ್ಯತೆ ಸಿಗಲಿದೆ. LED ಹೆಡ್ ಹಾಗೂ ಟೈಲ್ ಲ್ಯಾಂಪ್ಸ್, LED ಇಂಡೀಕೇಟರ್, USD ಫೊರ್ಕ್ ಸೇರಿದಂತೆ ಹಲವು ಫೀಚರ್ಸ್ ಈ ಬೈಕ್‌ನಲ್ಲಿದೆ. 

ಇದನ್ನೂ ಓದಿ: Youtubeಗಾಗಿ ರೈಲು ಹಳಿಯಲ್ಲಿ ಸ್ಟಂಟ್; ಟ್ರೇಲರ್ ಬಿಟ್ಟು ಅರೆಸ್ಟ್ ಆದ ಯುವಕ!

ನೂತನ KTM Duke 790 ಬೈಕ್  799cc ಹೊಂದಿದ್ದು,  105 hp ಪವರ್ ಹಾಗೂ 86 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ABS ಬ್ರೇಕಿಂಗ್, ಟ್ರಾಕ್ ಮೂಡ್, ಮೋಟಾರ್ ಸೈಕಲ್ ಸ್ಟೆಬಿಲಿಟಿ ಕಂಟ್ರೋಲ್, ಮೋಟಾರ್‌ಸೈಕಲ್ ಟ್ರಾಕ್ಷನ್ ಕಂಟ್ರೋಲ್ ಸೇರಿದಂತೆ ಹಲವು ಸುರಕ್ಷತಾ ಫೀಚರ್ಸ್ ಈ ಬೈಕ್‌ನಲ್ಲಿದೆ.  ಈ ಬೈಕ್ ಬೆಲೆ 8.5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.