Asianet Suvarna News Asianet Suvarna News

KTM ಡ್ಯೂಕ್ 125 ಬೈಕ್ ಬಿಡುಗಡೆ-ಯಮಹಾ R15ಗೆ ಪೈಪೋಟಿ!

KTM ಡ್ಯೂಕ್ ನೂತನ 125 ಬೈಕ್ ಬಿಡುಗಡೆಗೆ ಕೆಟಿಎಂ ಸಜ್ಜಾಗಿದೆ. 125 ಸಿಸಿ ಇಂಜಿನ್, ಕಡಿಮೆ ಬೆಲೆ ಮೂಲಕ ಯಮಹಾ ಬೈಕ್‌ಗಳಿಗೆ ಸೆಡ್ಡು ಹೊಡೆಯಲು ಕೆಟಿಎಂ ಸಜ್ಜಾಗಿದೆ. ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಈ ಬೈಕ್ ವಿಶೇಷತೆ ಇಲ್ಲಿದೆ.

KTM Duke 125 India launch next month
Author
Bengaluru, First Published Oct 18, 2018, 12:49 PM IST
  • Facebook
  • Twitter
  • Whatsapp

ಬೆಂಗಳೂರು(ಅ.16): ಕೆಟಿಎಂ ಇಂಡಿಯಾ ಇದೀಗ ಭಾರತದಲಲ್ಲಿ ಹೊಸ ಡ್ಯೂಕ್ 125 ಬೈಕ್ ಬಿಡುಗಡೆ ಮಾಡಲು ಸಜ್ಜಾಗಿದೆ. ಈಗಾಗಲೇ ಪುಣೆಯಲ್ಲಿರೋ ಬಜಾಜ್ ಕಂಪನಿಯ ಚಕನ್ ಘಟಕದಲ್ಲಿ ನಿರ್ಮಾಣ ಕಾರ್ಯ ಆರಂಭಗೊಂಡಿದೆ. 

KTM Duke 125 India launch next month

ಡ್ಯೂಕ್ 390 ಬೈಕ್ ಮಾದರಿಯನ್ನೇ ಹೋಲುವು 125 ಡ್ಯೂಕ್ ಹೆಚ್ಚು ಆಕರ್ಷಕ ವಿನ್ಯಾಸ ಹೊಂದಿದೆ. ಜೊತೆಗೆ ಕೆಲ ಬದಲಾವಣೆ ಕೂಡ ಮಾಡಿದೆ. ವಿಶೇಷ ಅಂದರೆ 125 ಡ್ಯೂಕ್ ಎಬಿಎಸ್ ಬ್ರೇಕ್ ಹೊಂದಿದೆ.

KTM Duke 125 India launch next month

15ಪಿಎಸ್ ಎಂಜಿನ್, 6 ಸ್ಪೀಡ್ ಗೇರ್ ಹೊಂದಿದೆ. 390 ಡ್ಯೂಕ್ ಹಾಗೂ 125 ಡ್ಯೂಕ್ ವಿನ್ಯಾಸ ಹೆಚ್ಚೂ ಕಡಿಮೆ ಒಂದೇ ರೀತಿ ಇರಲಿದೆ. 17 ಇಂಚು ಆಲೋಯ್ ವೀಲ್ಹ್ಸ್, LED ಹೆಡ್‌ಲ್ಯಾಂಪ್ಸ್ ಹೊಂದಿದೆ. 125 ಸಿಸಿ ಸಿಂಗಲ್ ಸಿಲಿಂಡರ್ ಫ್ಯೂಯೆಲ್ ಇಂಜೆಕ್ಟ್ ಮೋಟರ್ ಹೊಂದಿದೆ.

KTM Duke 125 India launch next month

ನೂತನ ಡ್ಯೂಕ್ 125 ಬೈಕ್ ಬೆಲೆ 1 ಲಕ್ಷ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ. ಈ ಮೂಲಕ ಭಾರತದಲ್ಲಿ ಮಾರಾಟದಲ್ಲಿ ಗಣನೀಯ ಏರಿಕೆ ಕಂಡಿರುವ ಯಮಹಾ R15 ಬೈಕ್‌ಗಳಿಗೆ ಪೈಪೋಟಿ ನೀಡಲು ಸಜ್ಜಾದೆ. ಮುಂದಿನ ತಿಂಗಳ ಆರಂಭದಲ್ಲೇ ನೂತನ ಡ್ಯೂಕ್ 125 ಬೈಕ್ ಬಿಡುಗಡೆಯಾಗಲಿದೆ.

Follow Us:
Download App:
  • android
  • ios