KTM ಡ್ಯೂಕ್ 125 ಪ್ರತಿಸ್ಪರ್ಧಿ- ಬಜಾಜ್ ಪಲ್ಸಾರ್ 125NS ಶೀಘ್ರದಲ್ಲಿ!
ಬಜಾಜ್ ನೂತನ 125ns ಬೈಕ್ ಬೈಕ್ ಬಿಡುಗಡೆ ಮಾಡಲು ಮುಂದಾಗಿದೆ. ಈ ಬೈಕ್ ಬೆಲೆ ಎಷ್ಟು? ಇದರ ವಿಶೇಷತೆ ಏನು? ಇಲ್ಲಿದೆ ಸಂಪೂರ್ಣ ವಿವರ.
ನವದೆಹಲಿ(ಏ.13): ಬಜಾಜ್ ಕಂಪನಿ ನೂತನ ಪಲ್ಸಾರ್ 125NS ಬೈಕ್ ಬಿಡುಗಡೆ ಮಾಡುತ್ತಿದೆ. CBS(ಕಾಂಬಿ ಬ್ರೇಕಿಂಗ್ ಸಿಸ್ಟಮ್) ಅಳವಡಿಸಿರುವ ನೂತನ ಪಲ್ಸಾರ್ 125NS ಬೈಕ್ ಇದೀಗ ಗ್ರಾಹಕರನ್ನು ಮೋಡಿ ಮಾಡಲು ಸಜ್ಜಾಗಿದೆ. KTM ಡ್ಯೂಕ್ 125 ಬೈಕ್ ಯಶಸ್ಸಿನ ಬಳಿಕ ಬಜಾಜ್, ಪಲ್ಸಾರ್ 125NS ಬೈಕ್ ಬಿಡುಗಡೆ ಮಾಡಲು ಮುಂದಾಗಿದೆ.
ಇದನ್ನೂ ಓದಿ: ಬೈಕ್ ಸೀಟ್ ಕೆಳಗಡೆ ಹೆಬ್ಬಾವು ಪ್ರತ್ಯಕ್ಷ - ವೀಡಿಯೋ ವೈರಲ್!
KTM ಡ್ಯೂಕ್ 125 ಪ್ರತಿಸ್ಪರ್ಧಿಯಾಗಿ ಬಜಾಜ್ ಪಲ್ಸಾರ್ 125NS ರಸ್ತೆಗಿಳಿಯುತ್ತಿದೆ. ಪಲ್ಸಾರ್ 125NS ಬೈಕ್ ಬೆಲೆ ಸರಿಸುಮಾರು 65,000 ದಿಂದ 75,000 ರೂಪಾಯಿ(ಎಕ್ಸ್ ಶೋ ರೂಂ). ಇದು KTM ಡ್ಯೂಕ್ 125 ಬೈಕ್ ಬೆಲೆಗಿಂತ ಕಡಿಮೆ. ನೂತನ ಪಲ್ಸಾರ್ 125NS ಬೈಕ್ ಹಳೇ 135LS ಬೈಕ್ ಬದಲಾಗಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಯುವಕರ ನೆಚ್ಚಿನ ಬಜಾಜ್ ಪಲ್ಸಾರ್180 ಬೈಕ್ ಉತ್ಪಾದನೆ ಸ್ಥಗಿತ!
ನೂತನ ಪಲ್ಸಾರ್ 125Ns ಬೈಕ್ 124.5cc,ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್, DTS-i ಎಂಜಿನ್ ಹೊಂದಿದ್ದು, BS VI ಎಮಿಶನ್ ನಿಯಮ ಕೂಡ ಪಾಲಿಸಿದೆ. 12 PS ಪವರ್(@ 8,500 rpm) ಹಾಗೂ 11 Nm ಪೀಕ್ ಟಾರ್ಕ್ (@6,000 rpm)ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಈ ಬೈಕ್ 5 ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ. ಬಜಾಜ್ ಪಲ್ಸಾರ್ 125NS ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿದೆ.