ನವದೆಹಲಿ(ಜ.23): ಯುವಕರ ನೆಚ್ಚಿನ ಬೈಕ್ ಆಗಿ ಹೊರಹೊಮ್ಮಿರುವ KTM ಡ್ಯೂಕ್ ಇದೀಗ ಬಲಿಷ್ಠ ಎಂಜಿನ್ ಹಾಗೂ ಹೊಸ ವಿನ್ಯಾಸದೊಂದಿಗೆ ಬಿಡುಗಡೆಯಾಗಲಿದೆ. 799 ಸಿಸಿ ಎಂಜಿನ್ ಹೊಂದಿರುವ ನೂತನ KTM 790 ಡ್ಯೂಕ್ ಬೈಕ್ ಮಾರ್ಚ್, 2019ರಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಒಂದು ವಾರದಲ್ಲಿ 12 ಸಾವಿರ Maruti WagonR ಕಾರು ಬುಕ್!

ನೂತನ KTM 790 ಡ್ಯೂಕ್ ಬೈಕ್ ಬೆಲೆ 8 ರಿಂದ 8.5 ಲಕ್ಷ ರೂಪಾಯಿ(ಆನ್ ರೋಡ್) ಎಂದು ಅಂದಾಜಿಸಲಾಗಿದೆ. ಈ ಮೂಲಕ Suzuki GSX-S750 ಹಾಗೂ Kawasaki Z900 ಬೈಕ್‌ಗಳಿ ಪೈಪೋಟಿ ನೀಡಲು ರೆಡಿಯಾಗಿದೆ. ಈ ಎರಡು ಬೈಕ್ ಬೈಕ್ ಬೆಲೆ  7.46 ಲಕ್ಷ ರೂಪಾಯಿ ಹಾಗೂ  7.68 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

ಇದನ್ನೂ ಓದಿ: ಮಕ್ಕಳಿಗಾಗಿ ಪುಟ್ಟ ಆಟೋ ರಿಕ್ಷಾ ನಿರ್ಮಿಸಿದ ತಂದೆ!

ನೂತನ KTM 790 ಡ್ಯೂಕ್ ಬೈಕ್ ಭಾರತದಲ್ಲಿ ನಿರ್ಮಾಣವಾಗುವುದಿಲ್ಲ. ಬಿಡಿಭಾಗಗಳನ್ನ ಆಮದು ಮಾಡಿಕೊಂಡು ಇಲ್ಲಿ ಜೋಡಿಸಲಾಗುತ್ತೆ. 2017 EICMA ಮೋಟಾರ್ ಶೋನಲ್ಲಿ KTM 790 ಡ್ಯೂಕ್ ಪರಿಚಯಿಸಲಾಗಿತ್ತು. ಇನ್ನೆರಡು ತಿಂಗಳಲ್ಲೇ ಭಾರತದ ರಸ್ತೆಗಿಳಿಯಲಿದೆ.