ಎಲೆಕ್ಟ್ರಿಕ್ ವಾಹನ ಬಿಡುಗಡೆಗೆ ಸಜ್ಜಾದ ಕೋಲ್ಕತಾದ ಕ್ಲೀನ್‌ಟೆಕ್ ಕಂಪನಿ!

ಕೇಂದ್ರದ ಬಜೆಟ್ ಬಳಿಕ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಹೆಚ್ಚಾಗಿದೆ. ಇದೀಗ ಕೋಲ್ಕತಾ ಮೂಲದ ಕಂಪನಿ  ಎಲೆಕ್ಟ್ರಿಕ್ ವಾಹನ ಬಿಡುಗಡೆ ಮಾಡಲು ಸಜ್ಜಾಗಿದೆ. 

Kolkata based KSL Cleantech will launch Electric vehicle

ಕೋಲ್ಕತಾ(ಜು.22): ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಬಿಡುಗಡೆಯಾಗುತ್ತಿದೆ. ಹ್ಯುಂಡೈ ಈಗಾಗಲೇ ಕೋನಾ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ. ಬೆಂಗಳೂರಿನ ಎದರ್ ಕಂಪನಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಇದೀಗ ಕೋಲ್ಕತಾ ಮೂಲದ KSL ಕ್ಲೀನ್‌ಟೆಕ್ ಕಂಪನಿ ಎಲೆಕ್ಟ್ರಿಕ್ ದ್ವಿಚಕ್ರ ಹಾಗೂ ಮೂರು ಚಕ್ರದ ವಾಹನ ಬಿಡುಗಡೆ ಮಾಡಲು  ಸಜ್ಜಾಗಿದೆ.

ಇದನ್ನೂ ಓದಿ: Photo Gallery: ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು; ಸವಾರಿ ಬಲು ಜೋರು!

10 ಎಲೆಕ್ಟ್ರಿಕ್ ಸ್ಕೂಟರ್ ಹಾಗೂ 10 ಎಲೆಕ್ಟ್ರಿಕ್ ಮೂರು ಚಕ್ರದ ವಾಹನ ನಿರ್ಮಾಣಕ್ಕೆ KSL ಕ್ಲೀನ್‌ಟೆಕ್ ಯೋಜನೆ ಸಿದ್ದಪಡಿಸಿದೆ. ಇದಕ್ಕಾಗಿ ಬರೋಬ್ಬರಿ 200 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡುತ್ತಿದೆ. 12 ತಿಂಗಳಲ್ಲಿ ನೂತನ ಕ್ಲೀನ್‌ಟೆಕ್ ಎಲೆಕ್ಟ್ರಿಕ್ ವಾಹನ ಬಿಡುಗಡೆಯಾಗಲಿದೆ. 

ಇದನ್ನೂ ಓದಿ: ಟೆಕೋ ಎಲೆಕ್ಟ್ರಾ ಸ್ಕೂಟರ್ ಬಿಡುಗಡೆ- ಬೆಲೆ 43 ಸಾವಿರ ರೂ!

2019ರಲ್ಲಿ ಇದುವರೆಗೆ 7.5 ಲಕ್ಷ ಎಲೆಕ್ಟ್ರಿಕ್ ವಾಹನಗಳು ಮಾರಾಟವಾಗಿದೆ. ಇದು ಇಂಧನ ವಾಹನಗಳಿಗೆ ಹೋಲಿಸಿದರೆ ತೀರಾ ಕಡಿಮೆ. ಕೇಂದ್ರದ ಬಜೆಟ್‌ನಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ವಿಶೇಷ ಅನುದಾನ ನೀಡಲಾಗಿದೆ. ಈ ಮೂಲಕ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಬಳಕಿಗೆ ಉತ್ತೇಜನ ನೀಡಲಾಗುತ್ತಿದೆ.
 

Latest Videos
Follow Us:
Download App:
  • android
  • ios