ಅನಂತಪುರಂ(ಜೂ.22): ಕಿಯಾ ಮೋಟಾರ್ಸ್ ಭಾರತದಲ್ಲಿ ಕೆಲವೇ ವರ್ಷಗಳಲ್ಲಿ ಜನಪ್ರಿಯ ಕಾರಾಗಿ ಮಾರ್ಪಟ್ಟಿದೆ. ಹ್ಯುಂಡೈ ಕ್ರೆಟಾ, ನಿಸಾನ್ ಕಿಕ್ಸ್ ಸೇರಿದಂತೆ ಕಾಂಪಾಕ್ಟ್ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಸೆಲ್ಟೋಸ್ ಕಾರು ಬಿಡುಗಡೆಯಾಗಿತ್ತು. ಅತ್ಯಲ್ಪ ಅವಧಿಯಲ್ಲಿ ಭಾರಿ ಯಶಸ್ಸು ಸಾಧಿಸಿದ ಸೆಲ್ಟೋಸ್, ಇದೀಗ ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಯಾಗುತ್ತಿದೆ.

ಭಾರತದಲ್ಲಿ 2ನೇ ಘಟಕ ತೆರೆಯುತ್ತಿದೆ ಕಿಯಾ ಮೋಟಾರ್ಸ್, ಕರ್ನಾಟಕ ಅಥವಾ ಮಹಾರಾಷ್ಟ್ರ?

ವಿಶ್ವವೇ ಇದೀಗ ಎಲೆಕ್ಟ್ರಿಕ್ ವಾಹನದತ್ತೆ ಗಮನ ಕೇಂದ್ರೀಕರಿಸಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈಗಾಗಲೇ ಹಲವು ಎಲೆಕ್ಟ್ರಿಕ್ ಕಾರುಗಳು ಬಿಡುಗಡೆಯಾಗಿದೆ. ಇದೀಗ ಕಿಯಾ ಸೆಲ್ಟೋಸ್ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗುತ್ತಿದೆ. ನೂತನ ಸೆಲ್ಟೋಸ್ ಎಲೆಕ್ಟ್ರಿಕ್ ಕಾರು,  111 PS ಪವರ್ ಹಾಗೂ 285 Nm ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ. 

ಬೆಂಗಳೂರಿನಲ್ಲಿ ದಾಖಲೆ ಬರೆದ ಕಿಯಾ ಕಾರ್ನಿವಲ್ ಕಾರು!...

KX3 ಪವರ್ ಮೋಟಾರ್ ಬಳಸಲಾಗುತ್ತಿದ್ದು,  45.2 kWh ಲಿಥಿಯಂ ಐಯಾನ್ ಬ್ಯಾಟರಿ ಹೊಂದಿದೆ. ಒಂದು ಸಂಪೂರ್ಣ ಚಾರ್ಜ್‌ಗೆ 300 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ. ಈ ಮೂಲಕ ಹ್ಯುಂಡೈ ಕೋನಾ, ಎಂಜಿ ZS, ಟಾಟಾ ನೆಕ್ಸಾನ್ ಇವಿ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಿಳಿಯುತ್ತಿದೆ. ಮೊದಲ ಹಂತದಲ್ಲಿ ಚೀನಾದಲ್ಲಿ ಸೆಲ್ಟೋಸ್ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಲಿದೆ. ಬಳಿಕ ಭಾರತಕ್ಕೆ ಪ್ರವೇಶಿಸಲಿದೆ.

ಕಿಯಾ ಸೊನೆಟ್ ಕಾರಿನ ಟೀಸರ್ ಬಿಡುಗಡೆ, ಬ್ರೆಜ್ಜಾ, ವೆನ್ಯೂಗೆ ನಡುಕ!.

ಮುಂದಿನ ವರ್ಷದ ಆರಂಭದಲ್ಲೇ ಈ ಕಾರು ಬಿಡುಗಡೆಯಾಗಲಿದೆ. 2011ರಲ್ಲೇ ಭಾರತಕ್ಕೂ ನೂತನ ಸೆಲ್ಟೋಸ್ ಎಲೆಕ್ಟ್ರಿಕ್ ಕಾರು ಲಗ್ಗೆ ಇಡಲಿದೆ.