ಅನಂತಪುರಂ(ಫೆ.21): ಭಾರತದ ಅತೀ ದೊಡ್ಡ ಆಟೋ ಎಕ್ಸ್ಪೋ 2020ರಲ್ಲಿ ಕಿಯಾ ಮೋಟಾರ್ಸ್ ಸೊನೆಟ್ ಸಬ್ ಕಾಂಪಾಕ್ಟ್ SUV ಕಾರು ಅನಾವರಣ ಮಾಡಿತ್ತು. ಇದೀಗ ಕಾರು ಬಿಡುಗಡೆಗೆ ಸಜ್ಜಾಗಿದೆ. ಕಾರಿನ ಟೀಸರ್ ರಿಲೀಸ್ ಮಾಡಿದ್ದು, ಇತರ ಸಬ್ ಕಾಂಪಾಕ್ಟ್ ಕಾರಿಗೆ ನಡುಕ ಶುರುವಾಗಿದೆ.

ಇದನ್ನೂ ಓದಿ: ಇನೋವಾ ಕಾರಿಗೆ ಪ್ರತಿಸ್ಪರ್ಧಿ; ಕಿಯಾ ಕಾರ್ನಿವಲ್ ಲಾಂಚ್!

ಅಗ್ರೆಸ್ಸೀವ್ ಲುಕ್ ಹೊಂದಿರುವ ಸೊನೆಟ್ ಕಾರಿನ ಟೀಸರ್ ಹಲವು ಕುತೂಹಲಗಳನ್ನು ಹಿಡಿದಿಟ್ಟುಕೊಂಡಿದ್ದರೆ, ಹಲವು ಫೀಚರ್ಸ್ ರಿವೀಲ್ ಮಾಡಿದೆ. ಕಿಯಾ ಸಿಗ್ನೇಚರ್ ಟೈಗರ್ ನೋಸ್ ಗ್ರಿಲ್, LED DRLs ಹೆಡ್‌ಲೈಟ್ಸ್, ರೂಫ್ ರೈಲ್ಸ್, ಬ್ಲಾಕ್ ಗಾರ್ನಿಶ್ ಸಿ ಪಿಲ್ಲರ್ ಸೇರಿದಂತೆ ಹಲವು ಫೀಚರ್ಸ್ ಟೀಸರ್‌ನಲ್ಲಿ ಬಯಲಾಗಿದೆ.

 

ಇದನ್ನೂ ಓದಿ: 2019ರಲ್ಲಿ ಮಿಂಚಿದ SUV ಕಾರು ಲಿಸ್ಟ್; ಅಗ್ರಸ್ಥಾನದಲ್ಲಿ ವೆನ್ಯು, ಸೆಲ್ಟೋಸ್!

ಹೆಚ್ಚು ಆಕರ್ಷಕ ಹಾಗೂ ಗರಿಷ್ಠ ಫೀಚರ್ಸ್ ಒಳಗೊಂಡ ನೂತನ ಸೊನೆಟ್ ಕಾರು ಮಾರುತಿ ಸುಜುಕಿ ಬ್ರೆಜ್ಜಾ, ಹ್ಯುಂಡೈ ವೆನ್ಯೂ, ಫೋರ್ಡ್ ಇಕೋಸ್ಪೋರ್ಟ್, ಟಾಟಾ ನೆಕ್ಸಾನ್, ಮಹೀಂದ್ರ XUV300 ಕಾರಿಗೆ ಪ್ರತಿಸ್ಪರ್ಧಿಯಾಗಿದೆ.

ನೂತನ ಕಾರು 1.0 ಲೀಟರ್ ಟರ್ಬೋ ಪೆಟ್ರೋಲ್, 1.2 ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.5 ಲೀಟರ್ ಟರ್ಬೋ ಡೀಸೆಲ್ ಎಂಜಿನ್ ವೇರಿಯೆಂಟ್ ಆಯ್ಕೆ ಲಭ್ಯವಿದೆ.