ಅನಂತಪುರಂ(ಫೆ.06): ಸೌತ್ ಕೊರಿಯಾದ ಕಿಯಾ ಮೋಟಾರ್ಸ್ ಭಾರತದಲ್ಲಿ ವ್ಯವಹಾರ ಆರಂಭಿಸಲು ಮೊದಲು ಕರ್ನಾಟಕ ಸರ್ಕಾರವನ್ನು ಸಂಪರ್ಕಿಸಿತ್ತು. ಆದರೆ 2015-16ರಲ್ಲಿ ರಾಜ್ಯ ಸರ್ಕಾರ ಆಸಕ್ತಿ ತೋರಿಲ್ಲ. ಹೀಗಾಗಿ ಪಕ್ಕದ ಆಂಧ್ರಪ್ರದೇಶಕ್ಕೆ ತೆರಳಿತು. ಅನಂತಪುರದಲ್ಲಿ ಸುಸ್ಸಜ್ಜಿತ ಘಟಕ ಹಾಗೂ ಕಾರು ನಿರ್ಮಾಣ ಸೇರಿದಂತೆ ಕಿಯಾ ಬರೋಬ್ಬರಿ 7,000 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಿತು.

ಇದನ್ನೂ ಓದಿ: ಕಿಯಾ ಕಾರು ತುಮಕೂರಿನಿಂದ ಅನಂತಪುರಕ್ಕೆ ಹೋದದ್ದು ಏಕೆ?

ಕಳೆದ  ಡಿಸೆಂಬರ್ ವೇಳೆಗೆ ಕಿಯಾ ಕಾರು ಘಟಕ ಸಂಪೂರ್ಣವಾಗಿ ಕಾರ್ಯಾರಂಭ ಮಾಡಿತು. ಸಂಪೂರ್ಣವಾಗಿ ಆರಂಭವಾದ 2 ತಿಂಗಳಿಗೆ ಕಿಯಾ ಕಾರು ಘಟಕ ಇದೀಗ ನೆರೆ ರಾಜ್ಯ ತಮಿಳುನಾಡಿನತ್ತ ಪ್ರಯಾಣ ಬೆಳೆಸಲು ಮುಂದಾಗಿದೆ. ಈ ಕುರಿತು ರಾಯ್‌ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: 3 ತಿಂಗಳಲ್ಲಿ ಕಿಯಾ ಸೆಲ್ಟೋಸ್ ದಾಖಲೆ; SUV ಕಾರಿಗೆ ಭಾರಿ ಬೇಡಿಕೆ!

ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರ ಸರ್ಕಾರ ಉದ್ಯಮ ಹಾಗೂ ಉದ್ಯೋಗ ನೀತಿಗಳನ್ನು ಬದಲಾಯಿಸಿದೆ. ಆಂಧ್ರದಲ್ಲಿ ಕೈಗಾರಿಕೆ ಹಾಗೂ ಉದ್ಯಮ ನೀತಿ ಬದಲಾಗಿದೆ. ಹೀಗಾಗಿ ತೀವ್ರ ಸಮಸ್ಯೆ ಎದುರಿಸುತ್ತಿರುವ ಕಿಯಾ ಕಾರು ಘಟಕಕ್ಕೆ ಇದೀಗ ಸ್ಥಳಾಂತರ ಹೊರತು ಪಡಿಸಿ ಇನ್ಯಾವ ಮಾರ್ಗವೂ ಕಾಣುತ್ತಿಲ್ಲ.

ಇದನ್ನೂ ಓದಿ: ಕಿಯಾ ಸೊನೆಟ್ ಕಾರು ಅನಾವರಣ; ಮಾರುತಿ ಬ್ರೆಜಾ, ನೆಕ್ಸಾನ್‌ಗೆ ಪೈಪೋಟಿ!

ಶೀಘ್ರದಲ್ಲೇ ಕಿಯಾ ಮೋಟಾರ್ಸ್, ಆಂಧ್ರ ಪ್ರದೇಶ ಸರ್ಕಾರದ ಸೆಕ್ರೆಟರಿ ಜೊತೆಗೆ ಮಾತುಕತೆ ನಡೆಸಲಿದೆ. ಇತ್ತ ತಮಿಳುನಾಡು ಸರ್ಕಾರಕ್ಕೂ ಮನವಿ ಸಲ್ಲಿಸಿದೆ. ಇಷ್ಟೇ ಅಲ್ಲ ಕಿಯಾ ಸಹೋದರ ಸಂಸ್ಥೆ ಹ್ಯುಂಡೈ ಮೋಟಾರ್ಸ್ ಚೆನ್ನೈ ಘಟಕದ ಜೊತೆ ಮಾತುಕತೆ ನಡೆಸಿದೆ.

ಇದನ್ನೂ ಓದಿ: ಒಂದೇ ದಿನದಲ್ಲಿ ದಾಖಲೆ ಬರೆದ ಇನೋವಾ ಪ್ರತಿಸ್ಪರ್ಧಿ ಕಿಯಾ ಕಾರ್ನಿವಲ್!

ಹಿಂದಿನ ಸರ್ಕಾರ ನೀಡಿದ್ದ ಸೌಲಭ್ಯಗಳನ್ನು ಜಗನ್ ಸರ್ಕಾರ ಹಿಂತೆಗೆದುಕೊಂಡಿದೆ. ಸ್ಥಳೀಯರಿಗೆ ಉದ್ಯೋಗ ನೀತಿ ಕಿಯಾ ಮೋಟಾರ್ಸ್‌ಗೆ ತೀವ್ರ ಸಂಕಷ್ಟ ತಂದಿದೆ. ಹೊಸ ನೀತಿ ಪ್ರಕಾರ 75% ಸ್ಥಳೀಯರಿಗೆ ಉದ್ಯೋಗ ನೀತಿಯನ್ನು ಸರ್ಕಾರ ತಂದಿದೆ. ಸದ್ಯ ಅನಂತಪುರ ಘಟಕದಲ್ಲಿ ಆಂಧ್ರ ಪ್ರದೇಶ, ಕರ್ನಾಟಕ, ತಮಿಳುನಾಡು ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳ ಜನರು ಕಿಯಾ ಮೋಟಾರ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಶೇಕಡಾ 75% ರಷ್ಟು ಸ್ಥಳೀಯ ಉದ್ಯೋಗಿಗಳನ್ನು ಆಯ್ಕೆ ಮಾಡುವುದು ಅಸಾಧ್ಯ. ಎಂಜಿನೀಯರ್, ಮೆಕಾನಿಕ್ ಸೇರಿದಂತೆ ಕೌಶಲ್ಯ ಭರಿತ ಉದ್ಯೋಗಿಗಳ ಆಯ್ಕೆ ಸ್ಥಳೀಯವಾಗಿ ಕಷ್ಟ. ಆಂಧ್ರ ಸರ್ಕಾರ ನೀತಿಯನ್ನು ಮರು ಪರಿಶೀಲಿಸಿದರೆ ಉತ್ತಮ ಎಂದು ಕಿಯಾ ಮೋಟಾರ್ಸ್ ಹೇಳಿದೆ. 

ಕಡಿಮೆ ಬೆಲೆ, ಲಕ್ಸುರಿ ಫೀಚರ್ಸ್; ಮಾರುಕಟ್ಟೆಗೆ ಕಿಯಾ ಸೆಲ್ಟೋಸ್ ಕಾರು!.

2017ರಲ್ಲಿ ಅನಂತಪುರದಲ್ಲಿ ಕಿಯಾ ಕಾರು ಘಟಕ ಆರಂಭವಾಯಿತು. 2019ರಲ್ಲಿ ಕಿಯಾ ಸೆಲ್ಟೋಸ್ ಕಾರು ಬಿಡುಗಡೆ ಮಾಡಿತು. ಇದೀಗ ಕಿಯಾ ಕಾರ್ನಿವಲ್ ಬಿಡುಗಡೆ ಮಾಡಿರುವ ಕಿಯಾ ಮೋಟಾರ್ಸ್ ಸೊನೆಟ್ ಕಾರನ್ನು ಅನಾವರಣ ಮಾಡಿದೆ.

ಅನಂತಪುರದ ಕಿಯಾ ಕಾರು ಘಟಕದಲ್ಲಿ ವರ್ಷಕ್ಕೆ 3 ಲಕ್ಷ ಕಾರುಗಳು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 12,000 ಉದ್ಯೋಗಗಳು ಸೃಷ್ಟಿಯಾಗಿದೆ. ಬೃಹತ್ ಘಟಕ ಇದೀಗ ಸ್ಥಳಾಂತರ ಅಷ್ಟು ಸುಲಭದ ಮಾತಲ್ಲ. ಇಷ್ಟೇ ಅಲ್ಲ ಕಾರು ನಿರ್ಮಾಣ ಹಾಗೂ ವಿತರಣೆಗೂ ಹೊಡೆತ ಬೀಳಲಿದೆ. ರಾಜಕೀಯ ಕಾರಣದಿಂದ ಕಿಯಾ ಘಟಕ ಸ್ಥಗಿತಗೊಂಡರೆ ಭಾರತೀಯ ಆರ್ಥಿಕತೆ ಮೇಲೋ ಪರಿಣಾಮ ಬೀರಲಿದೆ. ಹಲವರು ಉದ್ಯೋಗ ಕಳೆದುಕೊಳ್ಳಲಿದ್ದಾರೆ.  


ಫೆಬ್ರವರಿ 6ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ