ಬಹುನಿರೀಕ್ಷಿತ KIA ಸೆಲ್ಟೋಸ್ ಕಾರು ಬಿಡುಗಡೆ; ಬೆಲೆ 9.69 ಲಕ್ಷ ರೂ!
ಕಿಯಾ ಮೋಟಾರ್ಸ್ ಕಂಪನಿಯ ಸೆಲ್ಟೋಸ್ ಕಾರು ಬಿಡುಗಡೆಯಾಗಿದೆ. ಮಿಡ್ ಸೆಗ್ಮೆಂಟ್ SUV ಕಾರುಗಳ ಪೈಕಿ ಸೆಲ್ಟೋಸ್ ಕಾರು ಅತ್ಯಂತ ಆಕರ್ಷಕ ವಿನ್ಯಾಸ, ಕಾರ್ಯಕ್ಷಮತೆ ಹಾಗೂ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಬಿಡುಗಡೆಯಾಗಿದೆ. ಈ ಕಾರಿನ ಬೆಲೆ, ಇತರ ಮಾಹಿತಿ ಇಲ್ಲಿದೆ.
ಬೆಂಗಳೂರು(ಆ.23): ಬಹುನಿರೀಕ್ಷಿತ ಕಿಯಾ ಸೆಲ್ಟೋಸ್ SUV ಕಾರು ಬಿಡುಗಡೆಯಾಗಿದೆ. ವಿಶ್ವದ 8ನೇ ಅತೀ ದೊಡ್ಡ ಆಟೋಮೊಬೈಲ್ ಕಂಪನಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಕಿಯಾ ಮೋಟಾರ್ಸ್, ಭಾರತದಲ್ಲಿ ಮೊದಲ ಕಾರು ಬಿಡುಗಡೆ ಮಾಡಿದೆ. 3 ಎಂಜಿನ್ ವೇರಿಯೆಂಟ್ ಲಭ್ಯವಿರುವ ಈ ಕಾರಿನ ಬೆಲೆ 9.69 ಲಕ್ಷ ರೂಪಾಯಿಯಿಂದ ಆರಂಭವಾಗಲಿದೆ.
ಇದನ್ನೂ ಓದಿ: ಕಿಯಾ ಸೆಲ್ಟೊಸ್ ಅನಾವರಣ; SUV ಕಾರುಗಳಿಗೆ ಶುರುವಾಯ್ತು ನಡುಕ!
ಹ್ಯುಂಡೈ ಕ್ರೆಟಾ, ನಿಸಾನ್ ಕಿಕ್ಸ್ ಸೇರಿದಂತೆ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿರುವ ಕಿಯಾ ಸೆಲ್ಟೋಸ್ ಅತ್ಯುತ್ತಮ ಹಾಗೂ ಆಕರ್ಷಕ ವಿನ್ಯಾಸ್ ಹೊಂದಿದೆ. ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಅತ್ಯುತ್ತಮ ಎಂಜಿನ್ , ಅತೀ ದೊಡ್ಡ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹೆಚ್ಚು ಸ್ಥಳವಕಾಶ ಹೊಂದಿರುವ ಈ ಕಾರು ಹೊಸ ಮೈಲಿಗಲ್ಲು ಸ್ಥಾಪಿಸಲಿದೆ. ಈಗಾಗಲೇ 32,035 ಕಾರುಗಳು ಆನ್‌ಲೈನ್ ಮೂಲಕ ಬುಕ್ ಆಗಿವೆ.
ಇದನ್ನೂ ಓದಿ: ಕಿಯಾ ಕಾರು ತುಮಕೂರಿನಿಂದ ಅನಂತಪುರಕ್ಕೆ ಹೋದದ್ದು ಏಕೆ?
ಸೆಲ್ಟೋಸ್ ಕಾರಿಗೆ ನಮ್ಮ ಹೃದಯ ಮತ್ತು ಆತ್ಮವನ್ನು ಹಾಕಿದ್ದೇವೆ. ಸೆಲ್ಟೋಸ್ ಪ್ರಿಮಿಯಂ ವೈಶಿಷ್ಠತೆಗಳು, ಗುಣಮಟ್ಟ, ಶಕ್ತಿಶಾಲಿ ಎಂಜಿನ್, ಅತ್ಯುತ್ತಮ ಕಾರ್ಯಕ್ಷಮತೆಯಿಂದ ಎಲ್ಲರನ್ನು ಚಕಿತಗೊಳಿಸಿದೆ. ಎಲ್ಲಾ ರೀತಿಯ ಪರೀಕ್ಷೆಯಲ್ಲಿ ಸೆಲ್ಟೋಸ್ ಯಶಸ್ವಿಯಾಗಿದೆ. ಮಧ್ಯಮ suv ಸೆಗ್ಮೆಂಟ್‌ನಲ್ಲಿ ಇಷ್ಟು ಲಕ್ಸುರಿ, ಕಡಿಮೆ ಬೆಲೆ ಹಾಗೂ ಇದುವರೆಗೆ ಪೂರೈಸಲಾಗದಂತಹ ಅಗತ್ಯತೆಗಳನ್ನು ಸೆಲ್ಟೋಸ್ ಕಾರೂ ಪೂರೈಸಿದೆ ಎಂದು ಕಾರು ಬಿಡುಗಡೆಗೊಳಿಸಿದ ಕಿಯಾ ಮೋಟಾರ್ಸ್ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೂಖ್ಯುಂಶಿಮ್ ಹೇಳಿದರು.
ಇದನ್ನೂ ಓದಿ: 25 ಸಾವಿರಕ್ಕೆ ಬುಕ್ ಮಾಡಿ ಕಿಯಾ ಸೆಲ್ಟೊಸ್ SUV ಕಾರು!
5 ಸೀಟರ್ ಸಾಮರ್ಥ್ಯ ಹೊಂದಿರುವ ಕಿಯಾ ಸೆಲ್ಟೊಸ್, ಭಾರತದಲ್ಲಿರುವ SUV ಕಾರುಗಳ ಪೈಕಿ ಅತ್ಯಂತ ಆಕರ್ಷಕ ಲುಕ್ ಹೊಂದಿದೆ. ಕಾರಿನ ಒಳಭಾಗದ ಇಂಟೀರಿಯರ್ ಕೂಡ ಅಷ್ಟೇ ಅತ್ಯುತ್ತಮವಾಗಿದೆ. ಡ್ಯಾಶ್‌ಬೋರ್ಡ್, ಅತಿ ದೊಡ್ಡ ಹಾಗೂ ಯೂಸುಫುಲ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೊಂದಿದೆ.
ಕಿಯಾ ಸೆಲ್ಟೋಸ್ ಕಾರಿನಲ್ಲಿ 3 ವೇರಿಯೆಂಟ್ ಲಭ್ಯವಿದೆ. 1.4 ಲೀಟರ್ ಟರ್ಬೊ GDI ಪೆಟ್ರೋಲ್ ಎಂಜಿನ್, 1.5 ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಲಭ್ಯವಿದೆ. ಈ ಮೂರು ವೇರಿಯೆಂಟ್‌ಗಳಲ್ಲಿ ಬೇಸ್ ಮಾಡೆಲ್‌ನಿಂದ ಹಿಡಿದು ಟಾಪ್ ಮಾಡೆಲ್ ವರೆಗೂ TE, TK, TK+, TX ಹಾಗೂ TX+ ಆಯ್ಕೆಗಳಿವೆ.
ಕಿಯಾ ಸೆಲ್ಟೋಸ್ Teh line ಕಾರಿನ ಬೆಲೆ(ಎಕ್ಸ್ ಶೋ ರೂಂ):
ವೇರಿಯೆಂಟ್ | ಪೆಟ್ರೋಲ್ | ಡಿಸೆಲ್ |
HTE | 9.69 ಲಕ್ಷ ರೂ | 9.99 ಲಕ್ಷ ರೂ |
HTK | 9.99 ಲಕ್ಷ ರೂ | 11.99 ಲಕ್ಷ ರೂ |
HTK Plus | 11.19 ಲಕ್ಷ ರೂ | 12.19 & 13.19(5 AT) ಲಕ್ಷ ರೂ |
HTX | 12.19 & 13.79(vvt) ಲಕ್ಷ ರೂ | 13.79 ಲಕ್ಷ ರೂ |
HTX Plus | - | 14.79 & 15.99(5 AT) ಲಕ್ಷ ರೂ |
ಕಿಯಾ ಸೆಲ್ಟೋಸ್ GT line ಕಾರಿನ ಬೆಲೆ(ಎಕ್ಸ್ ಶೋ ರೂಂ):
ವೇರಿಯೆಂಟ್ | GT line ಪೆಟ್ರೋಲ್ |
GTK | 13.48 ಲಕ್ಷ ರೂ |
GTX | 14.99 & 15.99(7 DCT) ಲಕ್ಷ ರೂ |
GTX Plus | 15.99 ಲಕ್ಷ ರೂ |
1.4 ಲೀಟರ್ GDI ಟರ್ಬೋ ಚಾರ್ಜ್ ಪೆಟ್ರೋಲ್ ಎಂಜಿನ್ ಕಾರು 138 bhp ಪವರ್ ಹಾಗೂ 242 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು 6 ಸ್ಪೀಡ್ ಮ್ಯಾನ್ಯುಯೆಲ್ ಹಾಗೂ 7 ಸ್ಪೀಡ್ DCT ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದೆ. ಈ ಕಾರು 0-100 ಕಿ.ಮೀ ವೇಗಕ್ಕೆ 9.7 ಸೆಕೆಂಡ್‌ಗಳಲ್ಲಿ ತೆಗೆದುಕೊಳ್ಳಲಿದೆ. ಈ ಕಾರಿನ ಮೈಲೇಜ್ ಪ್ರತಿ ಲೀಟರ್ ಪೆಟ್ರೋಲ್‌ಗೆ 16.1 ಕಿ.ಮೀ ನೀಡಲಿದೆ.
ಸೆಲ್ಟೋಸ್ BSVI ಎಮಿಶನ್ ಎಂಜಿನ್:
ಕಿಯಾ ಸೆಲ್ಟೋಸ್ ಕಾರು ಕೇಂದ್ರ ಸರ್ಕಾರದ ನಿಯಮದಂತೆ BSVI ಎಮಿಶನ್ ಎಂಜಿನ್ ಹೊಂದಿದೆ. ಈ ಮೂಲಕ ಮಾಲಿನ್ಯ ರಹಿತ ಕಾರು ಬಿಡುಗಡೆ ಮಾಡಿದ ಹೆಗ್ಗಳಿಕೆಗೆ ಕಿಯಾ ಪಾತ್ರವಾಗಿದೆ.
ಕಿಯಾ ಅನಂತಪುರ ಘಟಕ:
ಭಾರತದಲ್ಲಿ ಕಿಯಾ ಮೋಟಾರ್ಸ್ ಆಂಧ್ರಪ್ರದೇಶದ ಅನಂತಪುರದಲ್ಲಿ ಉತ್ಪಾದನ ಘಟಕ ಹೊಂದಿದೆ. 536 ಎಕರೆಯಲ್ಲಿ ಕಿಯಾ ಮೋಟಾರ್ಸ್ ಘಟಕ ಹೊಂದಿದೆ. ವರ್ಷಕ್ಕೆ 3 ಲಕ್ಷ ಕಾರು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಭಾರತದಲ್ಲಿರುವ ಏಕೈಕ ಕಿಯಾ ಕಾರು ಘಟಕ ಅನ್ನೋ ಹೆಗ್ಗಳಿಕೆಗೂ ಅನಂತಪುರ ಘಟಕ ಪಾತ್ರವಾಗಿದೆ.