ಕೊಟಾಯಂ(ಮಾ.24): ದೇವರ ನಾಡು ಕೇರಳ ಪಾಕೃತಿಕ ಸೌಂದರ್ಯ ಹೊಂದಿದ ರಾಜ್ಯ. ಹಿನ್ನೀರು, ಕರಾವಳಿ ಪ್ರದೇಶ, ಇಲ್ಲಿನ ಸಂಸ್ಕೃತಿ, ಆಹಾರ ಪದ್ದತಿ ಸೇರಿದಂತೆ ಎಲ್ಲವೂ ವಿಶಿಷ್ಠ. ಇದರ ಜೊತೆಗೆ ವಾಹನ ಬಳಕೆ ಕ್ರೇಝ್ ಕೇರಳದಲ್ಲಿ ಹೆಚ್ಚಿದೆ. ಹೀಗಾಗಿಯೇ ದಕ್ಷಿಣ ಭಾರತದಲ್ಲಿ ಗರಿಷ್ಠ ಮಾಡಿಫೈ ವಾಹನಗಳು ಕೇರಳದಲ್ಲಿದೆ. ಇದೀಗ ಕೇರಳಾಗೆ 2ನೇ ಲ್ಯಾಂಬೋರ್ಗಿನಿ ಕಾರು ಬಂದಿದೆ. 

ಇದನ್ನೂ ಓದಿ: ಅಂಬಾನಿ ಕಾರು ಕಲೆಕ್ಷನ್ ಕಂಡು ದಂಗಾದ ಮುಂಬೈ ಇಂಡಿಯನ್ಸ್!

ಕೇರಳ ಉದ್ಯಮಿ ಸಿರಿಲ್ ಫಿಲಿಪ್ ಲ್ಯಾಂಬೋರ್ಗಿನಿ ಕಾರು ಖರೀದಿಸಿದ್ದಾರೆ.  ಲ್ಯಾಂಬೋರ್ಗಿನಿ ಹರಿಕೇನ್ LP 610-4 ಕಾರು ಖರೀದಿಸಿದ್ದಾರೆ. ಇದು ಕೇರಳದಲ್ಲಿರುವ 2ನೇ ಲ್ಯಾಂಬೋರ್ಗಿನಿ ಕಾರು.  ಸಿರಿಲ್ ಫಿಲಿಪ್ ಖರೀದಿಸಿದ ಲ್ಯಾಂಬೋರ್ಗಿನಿ ಹರಿಕೇನ್ LP 610-4 ಸೆಕೆಂಡ್ ಹ್ಯಾಂಡ್ ಕಾರು. ವಿಶೇಷ ಅಂದರೆ ಈ ಕಾರನ್ನು ಬೆಂಗಳೂರಿನಿಂದ ಖರೀದಿಸಿದ್ದಾರೆ.

ಸದ್ಯ KA ನಂಬರ್ ಪ್ಲೇಟ್ ಹೊಂದಿರುವ ಈ ಕಾರು ಶೀಘ್ರದಲ್ಲೇ KL ರಿಜಿಸ್ಟ್ರೇಶನ್ ಬದಲಾಯಿಸಲಿದ್ದಾರೆ. ಇದು ಕೇರಳದ 2ನೇ ಲ್ಯಾಂಬೋರ್ಗಿನಿ ಕಾರಾಗಿದ್ದರೆ, ಮೊದಲ ಕಾರು ಖರೀದಿಸಿದ ಹೆಗ್ಗಳಿಕೆಗೆ ನಟ, ನಿರ್ದೇಶಕ ಪೃಥ್ವಿರಾಜ್‌ಗೆ ಸಲ್ಲಲಿದೆ. ಪೃಥ್ವಿರಾಜ್ ಲ್ಯಾಂಬೋರ್ಗಿನಿ ಕಾರು ಖರೀದಿಸಿ ಫ್ಯಾನ್ಸಿ ನಂಬರ್‌ಗಾಗಿ ಬರೋಬ್ಬರಿ 7 ಲಕ್ಷ ರೂಪಾಯಿ ನೀಡಿದ್ದರು. 

ಇದನ್ನೂ ಓದಿ: ಹೊಸ ಅವತಾರದಲ್ಲಿ ದಾಟ್ಸನ್ ರೆಡಿ ಗೋ ಕಾರು-ಕೇವಲ 2.75 ಲಕ್ಷ ರೂ!

ಸಿರಿಲ್ ಫಿಲಿಪ್ ಖರೀದಿಸಿರುವ ಲ್ಯಾಂಬೋರ್ಗಿನಿ ಹರಿಕೇನ್ LP 610-4 5.2 ಲೀಟರ್ V10 ಎಂಜಿನ್, 602 Bhp ಪವರ್ ಹಾಗೂ  560 Nm ಪೀಕ್ ಟಾರ್ಕ್ ಉತ್ಪಾದಿಸೋ ಸಾಮರ್ಥ್ಯ ಹೊಂದಿದೆ. ಈ ಕಾರಿನ ಬೆಲೆ  ಬೆಲೆ 2.91 ಕೋಟಿ ರೂಪಾಯಿ. ಇದೀಗ ಸಿರಿಲ್ ಫಿಲಿಪ್ ಕೇರಳಾ ರಿಜಿಸ್ಟ್ರೇಶನ್  ಮಾಡಲು 80 ಲಕ್ಷ ರೂಪಾಯಿ ರಾಜ್ಯ ತೆರಿಗೆ ಪಾವತಿಸಬೇಕು.