ಮುಂಬೈ(ನ.03): ಭಾರತದಲ್ಲಿ ಮತ್ತೆ ಜಾವಾ ಮೋಟಾರ್ ಬೈಕ್ ಬಿಡುಗಡೆಗೆ ಕ್ಷಣಗಣನೆಗೆ ಆರಂಭವಾಗಿದೆ. ನವೆಂಬರ್ 15 ರಂದು ಜಾವಾ ಮೋಟಾರ್‌ಸೈಕಲ್ ನೂತನ ಬೈಕ್ ಅನಾವರಣ ಮಾಡಲಿದೆ. ವಿಶೇಷ ಅಂದರೆ 4 ವಿವಿಧ ಮಾಡೆಲ್ ಬೈಕ್‌ಗಳು ಅನಾವರಣಗೊಳ್ಳಲಿದೆ.

ನ.15 ರಂದು ಅನಾವರಣವಾಗಲಿರುವ 4 ಬೈಕ್‌ಗಳ ಸ್ಕೆಚ್ ಈಗಾಗಲೇ ಬಿಡುಗಡೆಯಾಗಿದೆ. ಕ್ಲಾಸಿಕ್, ಸ್ಕ್ರಾಂಬ್ಲರ್, ಅಡ್ವೆಂಚರ್ ಹಾಗೂ ಕ್ರೂಸರ್ ಮಾದರಿ ಜಾವಾ ಬೈಕ್ ಸ್ಕೆಚ್ ಬಿಡುಗಡೆ ಮಾಡಿದೆ.

6 ಸ್ಪೀಡ್ ಗೇರ್ ಬಾಕ್ಸ್ ಇರುವ 293 ಸಿಸಿಯ ಬೈಕ್ ಅನ್ನು ಬಿಡುಗಡೆಗೊಳಿಸುವುದಾಗಿ ಕಂಪನಿ ಘೋಷಿಸಿದೆ. ವಿಶೇಷ ಅಂದರೆ ರೆಟ್ರೋ ಶೈಲಿಯಲ್ಲೇ ಜಾವಾ ಬೈಕ್‌ಗಳು ಬಿಡುಗಡೆಯಾಗಲಿದೆ. 80 ಹಾಗೂ 90ರ ದಶಕದಲ್ಲಿ ಭಾರತದಲ್ಲಿ ಮೋಡಿ ಮಾಡಿದ ಜಾವಾ ಬೈಕ್‌ಗಾಗಿ ಬೈಕ್ ಪ್ರಿಯರು ಕಾಯುತ್ತಿದ್ದಾರೆ.