ನವದೆಹಲಿ(ಮಾ.24): ಐತಿಹಾಸಿಕ ಜಾವಾ ಬೈಕ್ ಭಾರತದಲ್ಲಿ ಕಳೆದ ವರ್ಷ ಬಿಡುಗಡೆಯಾಗಿದೆ. ಮುಂದಿನ ವಾರ ಬೈಕ್ ಬುಕ್ ಮಾಡಿದ ಗ್ರಾಹಕರ ಕೈಸೇರಲಿದೆ. ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆಯಾದ ಜಾವಾ ಮೋಟಾರ್‌ಸೈಕಲ್‌ಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಇದೀಗ ಕಂಪನಿ ಗ್ರಾಹಕರಿಗೆ ಬೈಕ್ ಪೂರೈಸಲು ಸಜ್ಜಾಗಿದೆ. ಇದರ ಬೆನ್ನಲ್ಲೇ, ಜಾವಾ ಹುತಾತ್ಮರಾದ ಭಾರತೀಯ ಯೋಧರ ಮಕ್ಕಳ ಶಿಕ್ಷಣಕ್ಕೆ ಹರಾಜು ನಡೆಸಲು ನಿರ್ಧರಿಸಿದೆ.

ಇದನ್ನೂ ಓದಿ:ಜಾವಾಗೆ ಹೆಚ್ಚಾದ ಬೇಡಿಕೆ-ಎಪ್ರಿಲ್‌ನಲ್ಲಿ ಗ್ರಾಹಕರ ಕೈಸೇರಲಿದೆ ಬೈಕ್!

ಗ್ರಾಹಕರಿಗೆ ಬೈಕ್ ತಲುಪುವ ಮುನ್ನ ಜಾವಾ ಬೈಕ್ ಕ್ಲಾಸಿಕ್ ಹಾಗೂ ಜಾವಾ 42 ಬೈಕ್ ಹರಾಜಿಗಿಡಲಿದೆ. ಇದರಿಂದ ಬರುವ ಹಣವನ್ನು ಹುತಾತ್ಮ ಯೋಧರ ಮಕ್ಕಳಿಗಾಗಿ ವಿನಿಯೋಗಿಸಲು ಜಾವಾ ನಿರ್ಧರಿಸಿದೆ. ಈ ಕುರಿತು ಅದಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.

 

 

ಇದನ್ನೂ ಓದಿ: ಅಂಬಾನಿ ಕಾರು ಕಲೆಕ್ಷನ್ ಕಂಡು ದಂಗಾದ ಮುಂಬೈ ಇಂಡಿಯನ್ಸ್!

ಕಳೆದ ನೆವೆಂಬರ್‌ನಲ್ಲಿ ಜವಾ ಕ್ಲಾಸಿಕ್, ಜಾವಾ 42 ಹಾಗಾ ಜಾವೆ ಪೆರಾಕ್ ಬೈಕ್ ಬಿಡುಗಡೆ ಮಾಡಿತ್ತು.  ಜಾವಾ 42 1.55 ಲಕ್ಷ, ಕ್ಲಾಸಿಕ್ 1.63 ಲಕ್ಷ ಹಾಗೂ ಪೆರಾಕ್ ಬೈಕ್ ಬೆಲೆ 1.89 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 2019ರ ಜುಲೈನಲ್ಲಿ ಜಾವಾ ಬೈಕ್ ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಬೈಕ್ ಬಿಡುಗಡೆಯಾಗಲಿದೆ.