ಜಾವಾಗೆ ಹೆಚ್ಚಾದ ಬೇಡಿಕೆ-ಎಪ್ರಿಲ್‌ನಲ್ಲಿ ಗ್ರಾಹಕರ ಕೈಸೇರಲಿದೆ ಬೈಕ್!

ಜಾಜಾ ಮೋಟಾರ್ ಬೈಕ್ ಗ್ರಾಹಕರ ಕೈಸೇರಲು ಸಿದ್ಧವಾಗಿದೆ. ಕಳೆದ ವರ್ಷ ಬುಕ್ ಮಾಡಿ ಕಾಯುತ್ತಿದ್ದ ಗ್ರಾಹಕರಿಗೆ ಶೀಘ್ರದಲ್ಲೇ ಕೈಸೇರಲಿದೆ. ಈ ಕುರಿತು ಕ್ಲಾಸಿಕ್ ಲೆಜೆಂಡ್ ಸ್ಪಷ್ಟನೆ ನೀಡಿದೆ.
 

Jawa deliveries to start by April for buyers who booked last year

ಮುಂಬೈ(ಫೆ.26): ಜಾವಾ ಮೋಟಾರ್ ಬೈಕ್‌ಗೆ ಬೇಡಿಕೆ ಹೆಚ್ಚಾಗುತ್ತಿದೆ. ನವೆಂಬರ್ 15ರಂದು ಜಾವಾ ಬೈಕ್ ಭಾರತದಲ್ಲಿ ಮತ್ತೆ ಬಿಡುಗಡೆಗೊಂಡಿತ್ತು. ಶೀಘ್ರದಲ್ಲೇ 2019ರ ಸೆಪ್ಟೆಂಬರ್ ವರೆಗಿನ ಜಾವಾ ಬೈಕ್ ಸೋಲ್ಡ್ ಔಟ್ ಆಗಿತ್ತು. ಬಿಡುಗಡೆಗೂ ಮುನ್ನ ಬುಕಿಂಗ್ ಮಾಡಿದ ಗ್ರಾಹಕರಿಗೆ ಇದೀಗ ಎಪ್ರಿಲ್‌ನಲ್ಲಿ ಬೈಕ್ ಡೆಲಿವರಿ ಆಗಲಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಸೆಪ್ಟೆಂಬರ್ 2019ರ ವರೆಗಿನ ಜಾವಾ ಬೈಕ್ ಸೋಲ್ಡ್ ಔಟ್!

ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿರೋ ಜಾವಾ ಮೋಟಾರ್ ಬೈಕ್ 3 ವೇರಿಯೆಂಟ್‌ಗಳಲ್ಲಿ ಬೈಕ್ ಬಿಡುಗಡೆ ಮಾಡಿತ್ತು.  ಜಾವಾ, ಜಾವ 42 ಹಾಗೂ ಜಾವಾ ಪೆರಾಕ್ ಎಂಬ ಮೂರು ಮಾಡೆಲ್‌ಗಳಲ್ಲಿ ಬಿಡುಗಡೆಯಾಗಿದೆ. ಒಟ್ಟು 6 ಬಣ್ಣಗಳಲ್ಲಿ ಜಾವಾ ಬೈಕ್ ಮೋಟರ್‌ಬೈಕ್ ಲಭ್ಯವಿದೆ. ಜಾವಾ ಹಾಗೂ ಜಾವಾ 42 ಬೈಕ್ ಮೋಟರ್‍ ‌ಬೈಕ್ 293 ಸಿಸಿ ಎಂಜಿನ್ ಹೊಂದಿದ್ದರೆ, ಜಾವಾ ಪೆರಾಕ್ 334 ಸಿಸಿ ಎಂಜಿನ್ ಹೊಂದಿದೆ.  ಸದ್ಯ ಅನಾವರಣಗೊಂಡಿರುವ  ಕಸ್ಟಮೈಸ್‌ಡ್ ಜಾವಾ ಬೊಬರ್(ಜಾವಾ ಪೆರಾಕ್) 2019ರಲ್ಲಿ ಮಾರುಕ್ಟಟೆ ಪ್ರವೇಶಿಸಲಿದೆ.

ಇದನ್ನೂ ಓದಿ: ಒಂದೇ ತಿಂಗಳಲ್ಲಿ ರಾಯಲ್ ಎನ್‌ಫೀಲ್ಡ್‌ಗೆ ಜಾವಾ ನೀಡಿತು 13 ಹೊಡೆತ!

70-80ರ ದಶಕದಲ್ಲಿ ಭಾರತದಲ್ಲಿ ಕಿಂಗ್ ಆಗಿ ಮೆರೆದ ಜಾವಾ 1996ರಲ್ಲಿ ನಿರ್ಮಾಣ ಅಂತ್ಯಗೊಳಿಸಿತು. ಬಳಿಕ  2016ರಲ್ಲಿ ಮಹೀಂದ್ರ ಮೋಟಾರು ಸಂಸ್ಥೆ ಜಾವಾ ಮೋಟಾರ್ ಸೈಕಲ್ ನಿರ್ಮಾಣದ ಹಕ್ಕನ್ನ ಪಡೆಯಿತು.  ಇದೀಗ 2 ವರ್ಷಗಳ ಬಳಿಕ ಮಹೀಂದ್ರ & ಮಹೀಂದ್ರ ಕಂಪೆನಿ ಜಾವಾ ಬೈಕ್ ಬಿಡುಗಡೆ ಮಾಡಿದೆ.

Latest Videos
Follow Us:
Download App:
  • android
  • ios