ಬೆಂಗಳೂರು(ಜು.20):  ಜಾಗ್ವಾರ್‌ ಮತ್ತು ಲ್ಯಾಂಡ್‌ರೋವರ್‌ ಕಾರುಗಳು ಜಾಸ್ತಿ ಜನರನ್ನು ತಲುಪುವ ಉದ್ದೇಶದಿಂದ ಈ ಹೊಸ ಡಿಜಿಟಲ್‌ ಶೋರೂಮ್‌ ಆರಂಭಿಸಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕಾರುಗಳ ಕುರಿತು ವಿವರಣೆ ನೀಡಲಾಗುತ್ತದೆ. ಗ್ರಾಹಕರು ಜಾಗ್ವಾರ್‌ ಕಾರುಗಳನ್ನು www.findmeacar.com ಮೂಲಕ, ಲ್ಯಾಂಡ್‌ ರೋವರ್‌ ಕಾರುಗಳನ್ನು www.findmeasuv.in  ಮೂಲಕ ನೋಡಬಹುದು. ಜಾಗ್ವಾರ್‌ ಕಾರುಗಳ ಆರಂಭಿಕ ಬೆಲೆ ರು.40.61 ಲಕ್ಷ. ಲ್ಯಾಂಡ್‌ರೋವರ್‌ ಕಾರುಗಳ ಆರಂಭಿಕ ಬೆಲೆ ರು.44.68 ಲಕ್ಷ.

ಇದನ್ನೂ ಓದಿ: ಟಾಟಾ ಮಾಲೀಕತ್ವದ ಲ್ಯಾಂಡ್ ರೋವರ್ ಕಾರು ಕಾಪಿ- ಚೀನಾ ವಿರುದ್ಧ ಕೇಸ್ ಗೆದ್ದ JLR!

- ಲಕ್ಸುರಿ ಕಾರುಗಳಿಗೆ ಟ್ಯಾಕ್ಸ್‌ ಜಾಸ್ತಿ. ಹಾಗಾಗಿ ಜಾಗ್ವಾರ್‌, ಲ್ಯಾಂಡ್‌ರೋವರ್‌ ಕಾರುಗಳಿಗೆ ಜಾಸ್ತಿ ಬೆಲೆ ಇಡಲಾಗಿದೆ. ಟ್ಯಾಕ್ಸ್‌ ಕಡಿಮೆ ಮಾಡಿದರೆ ಕಡಿಮೆ ಬೆಲೆಗೆ ಈ ಕಾರುಗಳನ್ನು ನೀಡಬಹುದು.

- ಬೆಂಗಳೂರಿನ ಗ್ರಾಹಕರಿಗೆ ಜಾಗ್ವಾರ್‌ ಅನ್ನು ಸುಲಭವಾಗಿ ತಲುಪಿಸಲು ಕನ್ನಿಂಗ್‌ಹ್ಯಾಮ್‌ ರಸ್ತೆಯಲ್ಲಿ ಅತ್ಯಾಧುನಿಕ ಶೋರೂಮ್‌ ಆರಂಭಿಸಿದ್ದೇವೆ.

- ಮುಂದೆ ಎಲೆಕ್ಟ್ರಾನಿಕ್‌ ವೆಹಿಕಲ್‌ಗಳನ್ನು ಉತ್ಪಾದಿಸುವ ಆಲೋಚನೆ ಇದೆ.

ಇದನ್ನೂ ಓದಿ: ಅಂಬಾನಿ ಪುತ್ರರ ಭದ್ರತೆಗಾಗಿ ಹೊಸ ರೇಂಜ್ ರೋವರ್ ಕಾರು!

ಇವು ಜಾಗ್ವಾರ್‌ ಲ್ಯಾಂಡ್‌ರೋವರ್‌ ಎಂಡಿ ರೋಹಿತ್‌ ಸೂರಿ ಹೇಳಿದ ಮಾತುಗಳು. ಬೆಂಗಳೂರಿನ ಕನ್ನಿಂಗ್‌ಹ್ಯಾಮ್‌ ರಸ್ತೆಯಲ್ಲಿ ಮಾರ್ಕ್ಲ್ಯಾಂಡ್‌ ಶೋರೂಮ್‌ ಉದ್ಘಾಟಿಸಿದ ಸಂದರ್ಭದಲ್ಲಿ ಅವರು ಮಾತಿಗೆ ಸಿಕ್ಕಿ, ‘ಎಲೆಕ್ಟ್ರಾನಿಕ್‌ ಕಾರುಗಳು ಮುಂದೆ ಮಹತ್ವ ಪಡೆದುಕೊಳ್ಳಲಿವೆ. ಎಲೆಕ್ಟ್ರಾನಿಕ್‌ ವೆಹಿಕಲ್‌ಗೆ ಬೇಕಾದ ವ್ಯವಸ್ಥೆ ರೂಪುಗೊಂಡರೆ ನಾವು ಎಲೆಕ್ಟ್ರಿಕ್‌ ಕಾರು ತಯಾರಿಸುವ ಕುರಿತು ಮುಂದಿನ ಹೆಜ್ಜೆ ಇಡಬಹುದು’ ಎಂದರು.