ನವದೆಹಲಿ(ಫೆ.21): ಟಾಟಾ ಒಡೆತನ ಬ್ರಿಟೀಷ್ ಕಂಪನಿ ಜಾಗ್ವಾರ್ ಲ್ಯಾಂಡ್ ರೋವರ್ ತನ್ನ ಕಾರುಗಳಿಗೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ಜಾಗ್ವಾರ್ ಲ್ಯಾಂಡ್ ರೋವರ್ ಕಾರುಗಳಿಗೆ ಗರಿಷ್ಠ 20 ಲಕ್ಷ ರೂಪಾಯಿ  ಡಿಸ್ಕೌಂಟ್ ಆಫರ್ ಘೋಷಿಸಿದೆ. ಈ ಮೂಲಕ ಸ್ಟಾಕ್ ಕ್ಲೀಯರ್ ಮಾಡಲು ಪ್ರತಿಷ್ಠಿತ ಜಾಗ್ವಾರ್ ಲ್ಯಾಂಡ್ ರೋವರ್ ಮುಂದಾಗಿದೆ.

ಇದನ್ನೂ ಓದಿ: ಭಾರತೀಯ ಸೇನೆಗೆ ಬೇಕಿದೆ ಆಡ್‌ಆರ್ಮರ್ ಬುಲೆಟ್‌ಫ್ರೂಫ್ ವಾಹನ!

ಕಾರುಗಳಿಗೆ ಕನಿಷ್ಠ 7 ಲಕ್ಷ ರೂಪಾಯಿಂದ ಗರಿಷ್ಠ 20 ಲಕ್ಷ ರೂಪಾಯಿವರೆಗೆ ರಿಯಾಯಿತಿ ನೀಡಲಾಗಿದೆ. ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಕಾರುಗಳಿಗೆ 7 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಿದ್ದರೆ, ಜಾಗ್ವರ್ XJL ಸೆಡಾನ್ ಕಾರಿಗೆ 20 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಿದೆ. ನ್ಯೂ ಜೆನರೇಶನ್ ಡಿಸ್ಕವರಿ ಕಾರಿಗೆ 12 ಲಕ್ಷ ರೂಪಾಯಿ, ಜಾಗ್ವಾರ್ XF ಸೆಡಾನ್ ಕಾರಿಗೆ 8 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಿದೆ.

ಇದನ್ನೂ ಓದಿ: ಕೆಟ್ಟು ನಿಂತ ಭಾರತದ ಅತಿ ವೇಗದ ರೈಲು: ಏನಾಗಿತ್ತು?

ಈ ಆಫರ್ ಕೆಲ ನಿರ್ದಿಷ್ಟ ಕಾರುಗಳಿಗೆ ಮಾತ್ರ ಅನ್ವಯವಾಗಲಿದೆ ಎಂದು ಕಂಪನಿ ಹೇಳಿದೆ. 2018ರ ಜನವರಿಯಿಂದ ಆಗಸ್ಟ್ ವರೆಗೆ ತಯಾರಾದ ಜಾಗ್ವಾರ್ ಲ್ಯಾಂಡ್ ರೋವರ್ ಕಾರುಗಳಿಗೆ ಈ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಈ ಮೂಲಕ ಜಾಗ್ವಾರ್ ಕಂಪೆನಿ ಮಾರಾಟದಲ್ಲಿ ಗಣನೀಯ ಏರಿಕೆ ದಾಖಲಿಸಲು ಭರ್ಜರಿ ಪ್ಲಾನ್ ಹಾಕಿಕೊಂಡಿದೆ.