ಇನೋವಾ, ಇಟಿಯೊಸ್ -ದುಬಾರಿಯಾಗಲಿದೆ ಟೊಯೊಟಾ ಕಾರು!
ಟೊಯೊಟಾ ಕಾರು ಖರೀದಿ ಇನ್ನು ಕಷ್ಟವಾಗಲಿದೆ. 2019ರ ಜನವರಿಯಿಂದ ಟೊಯೊಟಾ ಕಾರು ಖರೀದಿಸಲು ಬಯಸುವವರು ಹೆಚ್ಚಿನ ಬೆಲೆ ತೆರಬೇಕಾಗಿದೆ. ಯಾಕೆ ಇಲ್ಲಿದೆ ವಿವರ.
ಬೆಂಗಳೂರು(ನ.27): ಭಾರತದಲ್ಲಿ ಜನಪ್ರಿಯ ಕಾರಾಗಿ ಹೊರಹೊಮ್ಮಿರುವ ಇನೋವಾ, ಇಟಿಯೊಸ್ ಸೇರಿದಂತೆ ಎಲ್ಲಾ ಟೊಯೊಟಾ ಕಾರುಗಳ ಬೆಲೆ ಹೆಚ್ಚಳವಾಗಲಿದೆ. 2019ರ ಜನವರಿಯಿಂದ ಟೊಯೊಟಾ ಕಾರುಗಳು ಬೆಲೆ ಶೇಕಡ 4 ರಷ್ಟು ಹೆಚ್ಚಾಗಲಿದೆ.
ಕಾರು ನಿರ್ಮಾಣದ ವೆಚ್ಚ ಹೆಚ್ಚಾಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ, ಇಂಧನ ಬೆಲೆ ಹೆಚ್ಚಳದಿಂದ ಟೊಯೊಟಾ ಕಾರುಗಳ ನಿರ್ಮಾಣ ದುಬಾರಿಯಾಗಿದೆ. ಹೀಗಾಗಿ 2019ರಿಂದ ಟೊಯೊಟಾ ಎಲ್ಲಾ ಕಾರುಗಳ ಮೇಲೆ ಬೆಲೆ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂದು ಟೊಯೊಟಾ ಕಿರ್ಲೋಸ್ಕರ್ ಹೇಳಿದೆ.
ಟೊಯೊಟಾ ಮಾತ್ರವಲ್ಲ ಇತರ ಕೆಲ ಕಾರು ಕಂಪೆನಿಗಳು ಕೂಡ ಬೆಲೆ ಹೆಚ್ಚಳ ಮಾಡುವು ಸಾಧ್ಯತೆ ಇದೆ. ಆದರೆ ಟೊಟೊಟಾ ಈಗಾಗಲೇ ಅಧೀಕೃತ ಹೇಳಿಕೆ ಬಿಡುಗಡೆ ಮಾಡಿದೆ. ಹೀಗಾಗಿ ಟೊಯೊಟಾ ಕಾರಿನ ಬೆಲೆ 4% ಹೆಚ್ಚಾಗುವುದು ಖಚಿತ.