Asianet Suvarna News Asianet Suvarna News

ಹ್ಯುಂಡೈ ವೆನ್ಯೂ SUV ಕಾರು- ಬುಕಿಂಗ್ ದಿನಾಂಕ ಪ್ರಕಟ!

SUV ಕಾರಿನಲ್ಲಿ ಸಂಚಲ ಸೃಷ್ಟಿಸಲು ಹೊರಟಿರುವ ಹ್ಯುಂಡೈ ನೂತನ ವೆನ್ಯೂ ಕಾರು ಬಿಡುಗಡೆ ಮಾಡುತ್ತಿದೆ. ಕಾರಿನ ಅದೀಕೃತ ಬುಕಿಂಗ್ ದಿನಾಂಕವನ್ನು ಪ್ರಕಟಿಸಲಾಗಿದೆ. ಇಲ್ಲಿದೆ ಈ ಕಾರಿನ ಹೆಚ್ಚಿನ ವಿವರ.

Hyundai Venue suv car officially booking date announces
Author
Bengaluru, First Published Apr 28, 2019, 6:09 PM IST

ದೆಹಲಿ(ಏ.28): ಮಾರುತಿ ಬ್ರೆಜಾ, ಫೋರ್ಡ್ ಇಕೋಸ್ಪೋರ್ಟ್, ಟಾಟಾ ನೆಕ್ಸಾನ್, ಮಹೀಂದ್ರ XUV300 ಕಾರಿಗೆ ಪ್ರತಿಸ್ಪರ್ಧಿಯಾಗಿ ಹ್ಯುಂಡೈ ವೆನ್ಯೂ ಕಾರು ಬಿಡುಗಡೆಯಾಗುತ್ತಿದೆ. ಮೇ. 21ರಂದು ನೂತನ ಕಾರು ಮಾರುಕಟ್ಟೆ ಪ್ರವೇಶಿಸಲಿದೆ. ಬಿಡುಗಡೆ ಬೆನ್ನಲ್ಲೇ  ಕಾರಿನ ಬುಕಿಂಗ್ ದಿನಾಂಕವನ್ನ ಹ್ಯುಂಡೈ ಪ್ರಕಟಿಸಿದೆ. ಮೇ. 2 ರಿಂದ ಅದೀಕೃತ ಬುಕಿಂಗ್ ಆರಂಭಗೊಳ್ಳಲಿದೆ. 

ಇದನ್ನೂ ಓದಿ: ಅಕ್ಷಯ್ ಕುಮಾರ್ to ಜಾಕ್ವೆಲಿನ್: ಸೆಲೆಬ್ರೆಟಿಗಳಿಗೆ ಜೀಪ್ ಮೇಲೆ ಪ್ರೀತಿ ಯಾಕೆ?

ನೂತನ್ ಹ್ಯುಂಡೈ ವೆನ್ಯೂ ಕಾರು, ಈ ಹಿಂದಿನ ಹ್ಯುಂಡೈ ಕಾರುಗಳಿಗಿಂತ ಭಿನ್ನವಾಗಿದೆ. ಹೊಸ ವಿನ್ಯಾಸ, ಮುಂಭಾಗದ ಗ್ರಿಲ್, ಕ್ರೋಮ್ ಲೈನ್ ಮೆಶ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ.  ನೂತನ ಕಾರಿನ ಬೆಲೆ 8 ರಿಂದ 12 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. 

ಇದನ್ನೂ ಓದಿ: ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು- ಬೆಲೆ ಬಹಿರಂಗ ಪಡಿಸಿದ ಮಾರುತಿ!

ಹ್ಯುಂಡೈ  ವೆನ್ಯೂ ಕಾರಿನಲ್ಲಿ 3 ವೇರಿಯೆಂಟ್‌ಗಳು ಲಭ್ಯವಿದೆ. 1.2 ಲೀಟರ್ ಪೆಟ್ರೋಲ್, 1.0 ಲೀಟರ್ ಪೆಟ್ರೋಲ್ ಟರ್ಬೋ ಹಾಗೂ 1.4 ಲೀಟರ್ ಡೀಸೆಲ್ ವೇರಿಯೆಂಟ್ ಲಭ್ಯವಿದೆ. 1.2 ಲೀಟರ್ ಪೆಟ್ರೋಲ್ ಕಾರು 83hp ಪವರ್ ಹಾಗೂ 115Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  ಇನ್ನು  1.0-ಲೀಟರ್ ಪೆಟ್ರೋಲ್ ಕಾರು, 2 ಸಿಲಿಂಡರ್, ಡೈರೆಕ್ಟ್ ಇಂಜೆಕ್ಷನ್ ಟರ್ಬೋ ಹೊಂದಿದ್ದು, 120hp ಪವರ್ ಹಾಗೂ 172Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಇನ್ನು  1.4  ಡೀಸೆಲ್  ಕಾರು 90hp ಪವರ್ 220Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.

Follow Us:
Download App:
  • android
  • ios