Asianet Suvarna News Asianet Suvarna News

ನೂತನ ಸ್ಯಾಂಟ್ರೋ ಬಿಡುಗಡೆ-ಬೆಲೆ ಕೇವಲ 3.89 ಲಕ್ಷ!

ನೂತನ ಸ್ಯಾಂಟ್ರೋ ಕಾರು ಬಿಡುಗಡೆಗೊಂಡಿದೆ. 3.89 ಲಕ್ಷ ರೂಪಾಯಿ ಬೆಲೆಯ ಆಲ್ ನ್ಯೂ ಸ್ಯಾಂಟ್ರೋ ಕಾರು ಹಲವು ವಿಶೇಷತೆಗಳನ್ನೊಳಗೊಂಡಿದೆ. ನೂತನ ಸ್ಯಾಂಟ್ರೋ ಕಾರಿನ ಹೆಚ್ಚಿನ ಮಾಹಿತಿ ಇಲ್ಲಿದೆ.

Hyundai Santro 2018 launch Prices start at Rs 3.9 lakh
Author
Bengaluru, First Published Oct 24, 2018, 1:04 PM IST
 • Facebook
 • Twitter
 • Whatsapp

ಬೆಂಗಳೂರು(ಅ.24): ಸ್ಯಾಂಟ್ರೋ ಕಾರನ್ನು ಇಷ್ಟ ಪಡುತ್ತಿದ್ದ ಲಕ್ಷಾಂತರ ಜನರಿದ್ದಾರೆ. ಒಂದೊಮ್ಮೆ ಹ್ಯುಂಡೈ ಕಂಪನಿ ಸ್ಯಾಂಟ್ರೋ ಉತ್ಪಾದನೆ ನಿಲ್ಲಿಸಿದಾಗ ಬಹಳ ಜನ ಬೇಸರ ಪಟ್ಟಿದ್ದರು. ಇದೀಗ ಅವರಿಗೆಲ್ಲಾ ಸಂತೋಷದ ಸುದ್ದಿ ಬಂದಿದೆ. ಹ್ಯುಂಡೈ ಹೊಸ ಸ್ಯಾಂಟ್ರೋ ಬಿಡುಗಡೆ ಮಾಡಿದೆ. 

ಅದರ ಹೆಸರು ದಿ ಆಲ್ ನ್ಯೂ ಸ್ಯಾಂಟ್ರೋ. ಮೇಡ್ ಇನ್ ಇಂಡಿಯಾ ಪರಿಕಲ್ಪನೆಯಲ್ಲಿ ದೇಶದ ಜನರನ್ನು ಮನಸ್ಸಿನಲ್ಲಿಟ್ಟುಕೊಂಡು ಇಲ್ಲಿನ ರಸ್ತೆಗಳಿಗೆ ಹೊಂದುವ ರೀತಿಯಲ್ಲಿಯೇ ಬಂದಿದೆ ಹ್ಯುಂಡೈನ ದಿ ಆಲ್ ನ್ಯೂ ಸ್ಯಾಂಟ್ರೋ ಕಾರ್. ಮೊದಲು ಇದ್ದ ಸ್ಯಾಂಟ್ರೋ ಕಾರು ಒಂದು ಕುಟುಂಬಕ್ಕೆ ಹೇಳಿ ಮಾಡಿಸಿದ ಕಾರು ಎಂದು ಖ್ಯಾತಿ ಪಡೆದುಕೊಂಡು ಹೆಚ್ಚು ಮಾರಾಟ ಕಂಡಿತ್ತು. 

Hyundai Santro 2018 launch Prices start at Rs 3.9 lakh

ಈಗ ಅದೇ ಮಾದರಿಯನ್ನು ಮತ್ತಷ್ಟು ಉತ್ಕೃಷ್ಟ ದರ್ಜೆಗೆ ಏರಿಸಿ ಭಾರತೀಯ ಮಾರುಕಟ್ಟೆಗೆ ತಂದಿದೆ ಹ್ಯುಂಡೈ ಕಂಪನಿ. ಸುಮಾರು ಏಳು ಬಣ್ಣಗಳಲ್ಲಿ ಈ ಕಾರು ಲಭ್ಯವಿದೆ.

ವೈಶಿಷ್ಟ್ಯತೆಗಳು

 • 17.64 ಸೆಂಟಿಮೀಟರ್‌ನ ಟಚ್ ಸ್ಕ್ರೀನ್ ಆಡಿಯೋ ವಿಡೀಯೋ ಸಿಸ್ಟಂ
 • ಧ್ವನಿ ಗ್ರಹಿಸುವ ವ್ಯವಸ್ಥೆ (ವಾಯ್ಸ್ ರೆಕಗ್ನಿಷನ್)
 • ಆ್ಯಂಡ್ರಾಯ್ಡ್ ಆಟೋ, ಆ್ಯಪಲ್ ಕಾರ್‌ಪ್ಲೇ ಮತ್ತು ಮಿರರ್
 • ಲಿಂಕ್ ಮತ್ತು ವಾಯ್ಸ್ ರೆಕಗ್ನಿಷನ್‌ಗಳನ್ನು ಒಳಗೊಂಡ ಸ್ಮಾರ್ಟ್‌ಫೋನ್  ಕನೆಕ್ಟಿವಿಟಿ.
 • ಫ್ರಂಟ್ ಆ್ಯಂಡ್ ರಿಯರ್ ಪವರ್ ವಿಂಡೋಸ್
 • ರಿಮೋಟ್ ಕೀಲೆಸ್ ಎಂಟ್ರಿ
Follow Us:
Download App:
 • android
 • ios