Asianet Suvarna News Asianet Suvarna News

ಹೊಸ ನಿಯಮದ ಪರಿಣಾಮ; 2.5 ಲಕ್ಷ ರೂ ಡಿಸ್ಕೌಂಟ್ ಆಫರ್ ಘೋಷಿಸಿದ ಹ್ಯುಂಡೈ

ಸುಪ್ರೀಂ ಕೋರ್ಟ್ ಎರಡು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶ ಇದೀಗ ಜಾರಿಗೆ ಬರುತ್ತಿದೆ. ನೂತನ ನಿಯಮದಿಂದ ಹಲವು ಆಟೋಮೊಬೈಲ್ ಕಂಪನಿಗಳು ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ಇದೀಗ ಹ್ಯುಂಡೈ ಗರಿಷ್ಠ 2.5 ಲಕ್ಷ  ರೂಪಾಯಿ ಡಿಸ್ಕೌಂಟ್ ನೀಡಿದೆ. 

Hyundai offering upto 2 lakh rupee discount for bs4 vehicle
Author
Bengaluru, First Published Feb 26, 2020, 5:54 PM IST
  • Facebook
  • Twitter
  • Whatsapp

ನವದೆಹಲಿ(ಫೆ.26): ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಎಪ್ರಿಲ್ 1, 2020ರಿಂದ ನೂತನ ವಾಹನಗಳು BS6 ಎಮಿಶನ್ ಎಂಜಿನ್ ಹೊಂದಿರಬೇಕು. ಈಗಾಗಲೇ ಹಲವು ಕಂಪನಿಗಳು ತಮ್ಮ ವಾಹನವನ್ನು  BS6 ಎಂಜಿನ್ ಆಗಿ ಪರಿವರ್ತಿಸಿದೆ. ಕೆಲ ವಾಹನಗಳು ಪ್ರಗತಿಯಲ್ಲಿದೆ. ಸದ್ಯ ಭಾರತದಲ್ಲಿ  BS4 ವಾಹನ ಚಾಲ್ತಿಯಲ್ಲಿದೆ. 

ಇದನ್ನೂ ಓದಿ: ಮಾರುತಿ S ಪ್ರೆಸ್ಸೋ ಪ್ರತಿಸ್ಪರ್ಧಿ, ಬರುತ್ತಿದೆ ಹ್ಯುಂಡೈ ಸಣ್ಣ ಕಾರು!

 BS6 ವಾಹನ ನಿಯಮ ಜಾರಿಗೆ ಇನ್ನೊಂದು ತಿಂಗಳು ಮಾತ್ರ ಬಾಕಿ. ಅಷ್ಟರಲ್ಲೇ  BS4 ಎಂಜಿನ್ ವಾಹನಗಳನ್ನು ಮಾರಾಟ ಮಾಡಬೇಕಾದ ಅನಿವಾರ್ಯತೆಗೆ ಆಟೋಮೊಬೈಲ್ ಕಂಪನಿಗಳು ಸಿಲುಕಿದೆ. ಹೀಗಾಗಿ ವಾಹನಗಳ ಮೇಲೆ ಡಿಸ್ಕೌಂಟ್ ಘೋಷಿಸಿದೆ. ಹ್ಯುಂಡೈ ಇದೀಗ ಗರಿಷ್ಠ 2.5 ಲಕ್ಷ ರೂಪಾಯಿ ಆಫರ್ ಘೋಷಿಸಿದೆ.

ಇದನ್ನೂ ಓದಿ: ನೂತನ ಹ್ಯುಂಡೈ ಕ್ರೆಟಾ ಕಾರು ಬಿಡುಗಡೆ ದಿನಾಂಕ, ಫೋಟೋ ಬಹಿರಂಗ!

ಹ್ಯುಂಡೈ  BS4 ಕಾರುಗಳ ಮೇಲೆ ಗರಿಷ್ಠ 2.5 ಲಕ್ಷ ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಈ ಮೂಲಕ ಎಪ್ರಿಲ್ 1 ರೊಳಗೆ  BS4 ಮಾರಾಟ ಮಾಡುವು ಗುರಿ ಇಟ್ಟುಕೊಂಡಿದೆ. 

ಹ್ಯುಂಡೈ ಡಿಸ್ಕೌಂಟ್ ಆಫರ್( BS4 ಕಾರು)
ಸ್ಯಾಂಟ್ರೋ ಪೆಟ್ರೋಲ್ ಕಾರಿಗೆ 55,000 ರೂಪಾಯಿ ಡಿಸ್ಕೌಂಟ್
ಗ್ರ್ಯಾಂಡ್ i10 ಪೆಟ್ರೋಲ್, ಡೀಸೆಲ್ ಕಾರಿಗೆ 75,000 ರೂಪಾಯಿ ಡಿಸ್ಕೌಂಟ್
ನಿಯೋಸ್ ಡೀಸೆಲ್ ಕಾರಿಗೆ  55,000 ರೂಪಾಯಿ ಡಿಸ್ಕೌಂಟ್
ಎಲೈಟ್  i20 ಎರಾ, ಮ್ಯಾಗ್ನಾ(ಪೆಟ್ರೋಲ್, ಡೀಸೆಲ್) ಕಾರಿಗೆ 45,00 ರೂಪಾಯಿ ಡಿಸ್ಕೌಂಟ್
ಎಕ್ಸೆಂಟ್ ಕಾರಿಗೆ 95,000 ರೂಪಾಯಿ ಡಿಸ್ಕೌಂಟ್
ಕ್ರೆಟಾ ಕಾರಿಗೆ 1.5 ಲಕ್ಷ ರೂಪಾಯಿ ಡಿಸ್ಕೌಂಟ್
ವರ್ನಾ ಪೆಟ್ರೋಲ್, ಡೀಸೆಲ್ ಕಾರಿಗೆ 90,000 ರೂಪಾಯಿ
ಟಕ್ಸನ್ ಪೆಟ್ರೋಲ್, ಡೀಸೆಲ್ ಕಾರಿಗೆ 2.5 ಲಕ್ಷ ರೂಪಾಯಿ

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

Follow Us:
Download App:
  • android
  • ios