ದೆಹಲಿ(ಡಿ.03): ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಮಾರಾಟದ ಸಂಖ್ಯೆ ಇತರ ದೇಶಗಳಿಗೆ ಹೋಲಿಕೆ ಮಾಡಿದರೆ ಕಡಿಮೆ. ಇದಕ್ಕೆ ಇದರ ಬೆಲೆ, ಚಾರ್ಜಿಂಗ್ ಸ್ಟೇಶನ್ ಸೇರಿದಂತೆ ಹಲವು ಕಾರಣಗಳಿವೆ. ಇದರಲ್ಲಿ ಎಲೆಕ್ಟ್ರಿಕ್ ಕಾರಿನ ಕುರಿತು ಸರಿಯಾದ ಮಾಹಿತಿ ಇಲ್ಲದಿರುವುದು ಕೂಡ ಕಾರಣವಾಗಿದೆ. ಬಹುತೇಕರು ಕೇಳುವ ಪ್ರಶ್ನೆ ಕಾರಿನ ಬ್ಯಾಟರಿ ಬಾಳಿಕೆ ಹಾಗೂ ಸುರಕ್ಷತೆ. ಇದೀಗ ಹ್ಯುಂಡೈ ಬಿಡುಗಡೆ ಮಾಡಿದ ಕೋನಾ ಎಲೆಕ್ಟ್ರಿಕ್ ಕಾರಿನಲ್ಲಿ ಇದೇ ಬ್ಯಾಟರಿಯಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ.

250 ಟಾಟಾ ನೆಕ್ಸಾನ್ - ಹ್ಯುಂಡೋ ಕೋನಾ ಎಲೆಕ್ಟ್ರಿಕ್ ಕಾರು ಬುಕ್ ಮಾಡಿದ EESL

ವಿಶ್ವ ಮಾರುಕಟ್ಟೆಯಲ್ಲಿ ಕೋನಾ ಕಾರಿನ ಬ್ಯಾಟರಿಯಲ್ಲಿ ಕೆಲ ಸಮಸ್ಯೆಗಳು ಕಾಣಿಸಿಕೊಂಡಿದೆ. ಹೀಗಾಗಿ ಹ್ಯುಂಡೈ ಇಂಡಿಯಾ, ಭಾರತದಲ್ಲಿ ಮಾರಾಟವಾಗಿರುವ 456 ಕೋನಾ ಕಾರುಗಳನ್ನು ಹತ್ತಿರ ಸರ್ವೀಸ್ ಕೇಂದ್ರಗಳಿಗೆ ತರುವಂತೆ ಸೂಚಿಸಿದೆ. ಎಪ್ರಿಲ್ 1, 2020 ರಿಂದ ಅಕ್ಟೋಬರ್ 1 , 2020ರ ವರೆಗಿನ ಕಾರುಗಳಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ. 

ಒಂದು ಚಾರ್ಜ್‌ಗೆ 1,026 ಕಿ.ಮೀ ಮೈಲೇಜ್: ದಾಖಲೆ ಬರೆದ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು!

ಆಸ್ಟ್ರಿಯಾ, ಕೆನಾಡ ಸೇರಿದಂತೆ ಇತರ ದೇಶಗಳಲ್ಲಿ ಮಾರಾಟವಾಗಿರುವ ಕೋನಾ ಕಾರಿನಲ್ಲಿ ಬ್ಯಾಟರಿ ವೋಲ್ಟೇಜ್ ಹಾಗೂ ಇತರ ಕೆಲ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಬೆಂಕಿ ಕಾಣಿಸಿಕೊಂಡಿದೆ. ಈ ರೀತಿ 13 ಪ್ರಕರಣಗಳು ವಿದೇಶದಲ್ಲಿ ದಾಖಲಾಗಿದೆ. ಹೀಗಾಗಿ ಮುನ್ನಚ್ಚೆರಿಕೆಯಾಗಿ ಭಾರತದಲ್ಲಿನ 456 ಕಾರುಗಳನ್ನು ಹಿಂಪೆಡಯಲು ಹ್ಯುಡೈ ಕೋನಾ ನಿರ್ಧರಿಸಿದೆ. 

ಸರ್ವೀಸ್ ಕೇಂದ್ರಗಳಿಗೆ ತರುವ ಕೋನಾ ಕಾರುಗಳನ್ನು ಪರಿಶೀಲಿಸಿ ಸಮಸ್ಯೆ ಪರಿಹರಿಸಲಾಗುವುದು ಎಂದು ಹ್ಯುಂಡೈ ಇಂಡಿಯಾ ಹೇಳಿದೆ. ಇದು ಸಂಪೂರ್ಣ ಉಚಿತವಾಗಿರಲಿದೆ. ಇದಕ್ಕೆ ಯಾವುದೇ ರೀತಿಯ ಚಾರ್ಜ್ ಮಾಡಲಾಗುವುದಿಲ್ಲ ಎಂದು ಹ್ಯುಂಡೈ ಸ್ಪಷ್ಟಪಡಿಸಿದೆ. 

ಭಾರತದಲ್ಲಿ ಹ್ಯುಂಡೈ ಕೋನಾ 2019ರಲ್ಲಿ ಬಿಡುಗಡೆಯಾಗಿದೆ. ಆರಂಭಿಕ ಬೆಲೆ 23.7 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಒಂದು ಬಾರಿ ಚಾರ್ಜ್ ಮಾಡಿದರೆ 457 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ.