ನವದೆಹಲಿ(ಅ.26):  ಹ್ಯುಂಡೈ ಮೋಟಾರ್‌ ಇಂಡಿಯಾ ತನ್ನ ಆ್ಯನಿವರ್ಸರಿ ಪ್ರಯುಕ್ತ ಎರಡು ಹೊಸ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸ್ಯಾಂಟ್ರೋ ಸ್ಪೋರ್ಟ್ಸ್ MT ಹಾಗೂ AMT ಆವೃತ್ತಿಗಳು ಮಾರುಕಟ್ಟೆಗೆ ಬಂದಿವೆ. ಆ್ಯನಿವರ್ಸರಿಯ ಲಾಂಛನ ಇದರಲ್ಲಿರೋದು ವಿಶೇಷ. ಇದು ಸೀಮಿತ ಆವೃತ್ತಿ ಮಾಡೆಲ್‌ಗಳು ಇದರಲ್ಲಿವೆ.

ಇದನ್ನೂ ಓದಿ: ಸ್ಯಾಂಟ್ರೋ ಕಾರು ದರ ಪರಿಷ್ಕರಣೆ; ಇಲ್ಲಿದೆ ನೂತನ ಬೆಲೆ!

ಈ ಮಾಡೆಲ್‌ಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಹ್ಯುಂಡೈ ಮೋಟಾರ್‌ ಇಂಡಿಯಾ ಲಿಮಿಟೆಡ್‌ನ ನ್ಯಾಷನಲ್‌ ಸೇಲ್ಸ್‌ ಹೆಡ್‌ ವಿಕಾಸ್‌ ಜೈನ್‌, ‘ಸ್ಯಾಂಟ್ರೋದ ಈ ವಿಶೇಷ ಆವೃತ್ತಿಯಲ್ಲಿ ಜಾಗತಿಕ ತಂತ್ರಜ್ಞಾನ, ಸ್ಟೈಲಿಶ್‌ ವಿನ್ಯಾಸ ಹಾಗೂ ಇನ್ನಿತರ ಫೀಚರ್‌ಗಳನ್ನು ಅಳವಡಿಸಲಾಗಿದೆ’ ಎಂದರು.

ಇದನ್ನೂ ಓದಿ: ಎಪಿ ಸಿಎಂ ಜಗನ್ ಕಾರು ನಿಲ್ಲಿಸಿ, ವಂಚನೆ ಪ್ರಕರಣ ದಾಖಲಿಸಿದ ಪೊಲೀಸ್!

ಬೆಲೆ: ಸ್ಪೋರ್ಟ್ಸ್ MT(ಆನಿವರ್ಸರಿ ಆವೃತ್ತಿ) : 5,16,890 ರು.

ಸ್ಪೋರ್ಟ್ಸ್ AMT(ಆನಿವರ್ಸರಿ ಆವೃತ್ತಿ) : 5,74,890 ರು.