ನವದೆಹಲಿ(ಜು.08): ಕೇಂದ್ರ ಸರ್ಕಾರದ ಬಜೆಟ್ ಮಂಡಿಸಿದ ಬೆನ್ನಲ್ಲೇ ಇದೀಗ ಎಲೆಕ್ಟ್ರಿಕ್ ವಾಹನಕ್ಕಾಗಿ ಗ್ರಾಹಕರ ಹುಡುಕಾಟ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಹ್ಯುಂಡೈ ಕಂಪನಿಯ ಬಹುನಿರೀಕ್ಷಿತ ಕೋನಾ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗುತ್ತಿದೆ. ಜುಲೈ 9 ರಂದು ಕೋನಾ ಕಾರು ಭಾರತದ ಮಾರುಕಟ್ಟೆ ಪ್ರವೇಶಿಸುತ್ತಿದೆ. 

ಇದನ್ನೂ ಓದಿ: ಭಾರತದಲ್ಲಿ ಬಿಡುಗಡೆಯಾಗಲಿರುವ 5 ಅತ್ಯುತ್ತಮ ಎಲೆಕ್ಟ್ರಿಕ್ ಕಾರು!

ಕೋನಾ ಕಾರಿನ ಅಧೀಕೃತ ಮೈಲೇಜ್ ಬಹಿರಂಗವಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 452 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ. ಸದ್ಯ ಭಾರತದಲ್ಲಿ ಬಿಡುಗಡೆಯಾಗಲಿರುವ ಹಾಗೂ ಲಭ್ಯವಿರುವ ಎಲೆಕ್ಟ್ರಿಕ್ ಕಾರುಗಳ ಪೈಕಿ ಗರಿಷ್ಠ ಮೈಲೇಜ್ ಅನ್ನೋ ಹೆಗ್ಗಳಿಕೆಗೆ ಕೋನಾ ಪಾತ್ರವಾಗಿದೆ. 

ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನಕ್ಕೆ ಬಂಪರ್ ಕೊಡುಗೆ; ಆಟೋ ಕಂಪನಿಗಳಿಗೆ ಬೇವು-ಬೆಲ್ಲ ಬಜೆಟ್ !

ಹ್ಯುಂಡೈ ಕೋನಾದಲ್ಲಿ 2 ವೇರಿಯೆಂಟ್ ಲಭ್ಯವಿದೆ.  39.2 kWh ಬ್ಯಾಟರಿ ಕೋನಾ ಹಾಗೂ 64 kWh ಬ್ಯಾಟರಿ ಚಾಲಿತ ಎಂಜಿನ್ ಲಭ್ಯವಿದೆ. 39.2 kWh ಬ್ಯಾಟರಿ ಚಾಲಿತ ಕೋನಾ ಕಾರು 312 ಕಿ.ಮೀ ಮೈಲೇಜ್ ರೇಂಜ್ ನೀಡಿದರೆ, 64 kWh ಬ್ಯಾಟರಿ ಚಾಲಿತ ಕೋನಾ ಕಾರು 452 ಕಿ.ಮೀ ಮೈಲೇಜ್ ನೀಡಲಿದೆ. ಕೋನಾ ಕಾರಿನ ಬೆಲೆ 20 ರಿಂದ 25 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.