ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ವಿನ್ಯಾಸ, ಮತ್ತಷ್ಟು ಆಕರ್ಷಕ ಹ್ಯುಂಡೈ i20!
ಪ್ರಿಮಿಯಂ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಹ್ಯುಂಡೈ ಐ20 ಕಾರು ಅತ್ಯಂತ ಜನಪ್ರಿಯವಾಗಿದೆ. ಆರಾಮದಾಯಕ ಪ್ರಯಾಣ, ಆಕರ್ಷಕ ವಿನ್ಯಾಸ, ಅಗ್ರೆಸ್ಸೀವ್ ಹಾಗೂ ಸ್ಪೋರ್ಟ್ ಲುಕ್‌ನಿಂದ ಐ20 ಬಹುತೇಕರ ನೆಚ್ಚಿನ ಕಾರಾಗಿದೆ. ಇದೀಗ ಹೆಚ್ಚುವರಿ ಫೀಚರ್ಸ್, ಮಹತ್ವದ ಬದಲಾವಣೆ, ಮತ್ತಷ್ಟು ಆಕರ್ಷಕ ವಿನ್ಯಾಸದೊಂದಿಗೆ ಹ್ಯುಂಡೈ ಐ20 ಕಾರು ಭಾರತದಲ್ಲಿ ಬಿಡುಗಡೆಯಾಗಲಿದೆ.
ನವದೆಹಲಿ(ಜು.20): ಭಾರತದಲ್ಲಿ ಪ್ರಿಮಿಯಂ ಹ್ಯಾಚ್‌ಬ್ಯಾಕ್ ಕಾರುಗಳ ನಡುವೆ ಭಾರಿ ಪೈಪೋಟಿ ಇದೆ. ಆದರೆ ಹ್ಯುಂಡೈ ಐ20 ಬೇಡಿಕೆಯನ್ನು ಹಾಗೇ ಉಳಿಸಿಕೊಂಡಿದೆ. ಐ20 ಕಾರಿನ ಎಂಜಿನ್, ವಿನ್ಯಾಸ, ಪ್ರಯಾಣ, ಲುಕ್ ಎಲ್ಲವೂ ಕಾರು ಪ್ರಿಯರಿಗೆ ಇಷ್ಟವಾಗಿತ್ತು. ಇದೀಗ ನೂತನ ಐ20 ಬಿಡುಗಡೆಯಾಗುತ್ತಿದೆ. ನೂತನ ಕಾರು ಮತ್ತಷ್ಟು ಆಕರ್ಷಕ ವಿನ್ಯಾಸ, ಸ್ಪೋರ್ಟ್ ಲುಕ್‌ನೊಂದಿಗೆ ಕಾರು ಬಿಡುಗಡೆ ಮಾಡುತ್ತಿದೆ.
ಟಕ್ಸನ್ ಫೇಸ್‌ಲಿಫ್ಟ್ ಕಾರು ಬಿಡುಗಡೆ: ಇದು ಹ್ಯುಂಡೈನ ದುಬಾರಿ ಕಾರು!.
ನೂತನ ಐ20 ಕಾರಿನಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಶಾರ್ಪ್ ಹೆಡ್‌ಲ್ಯಾಂಪ್ಸ್ ಜೊತೆಗೆ LED DRLs ಕಾರಿನ ಅಂದ ಹೆಚ್ಚಿಸಿದೆ. ಮಂಭಾಗದ ಹಾಗೂ ರೇರ್ ಬಂಪರ್ ವಿನ್ಯಾಸದಲ್ಲೂ ಬದಲಾವಣೆ ಮಾಡಲಾಗಿದೆ. ಮುಖ್ಯವಾಗಿ ಕಾರಿನ ಟೈಲ್ ಲ್ಯಾಂಪ್‌ನಲ್ಲಿ ಬದಲಾವಣೆ ಮಾಡಲಾಗಿದೆ. ಸಾಮಾನ್ಯವಾಗಿ SUV ಕಾರಿನಲ್ಲಿರುವಂತೆ ಟೈಲ್ ಲ್ಯಾಂಪ್ ಬದಲಾಯಿಸಲಾಗಿದೆ. ನೂತನ ಟೈಲ್ ಲ್ಯಾಂಪ್ ಹೆಚ್ಚು ಆಕರ್ಷಕವಾಗಿದೆ.
1.2 ಲೀಟರ್ ಪೆಟ್ರೋಲ್ ಎಂಜಿನ್ ವೇರಿಯೆಂಟ್ 5-ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಹೊಂದಿದೆ. 83 PS ಪವರ್ ಹಾಗೂ 115 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ . ಇನ್ನು 1 ಲೀಟರ್ ಟರ್ಬೋ ಪೆಟ್ರೋಲ್ ವರ್ಶನ್ ಎಂಜಿನ್ 6-ಸ್ಪೀಡ್ MT ಅಥವಾ 7 ಸ್ಪೀಡ್ DCT ಟ್ರಾನ್ಸ್‌ಮಿಶನ್ ಹೊಂದಿರಲಿದೆ.
ಟರ್ಬೋ ಎಂಜಿನ್ 120 PS ಪವರ್ ಹಾಗೂ 170 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನ 1.5 ಲೀಟರ್ ಡೀಸೆಲ್ ಎಂಜಿನ್ 100 PS ಪವರ್ ಹಾಗೂ 240 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 6-ಸ್ಪೀಡ್ MT ಟ್ರಾನ್ಸ್‌ಮಿಶನ್ ಹೊಂದಿದೆ.