ನವದೆಹಲಿ(ಅ.30): ಹ್ಯುಂಡೈ ಇಂಡಿಯಾ ಹೊಸ i20 ಆಕ್ಟೀವ್ ಕಾರು ಬಿಡುಗಡೆ ಮಾಡಿದೆ. ಸದ್ಯ ಮಾರುಕಟ್ಟೆಯಲ್ಲಿರುವ i20 ಆಕ್ಟೀವ್ ಕಾರಿನ ಅಪ್‌ಗ್ರೇಡ್ ವರ್ಶನ್ ಇದಾಗಿದ್ದು, ಹೆಚ್ಚುವರಿ ಫೀಚರ್ಸ್, ಹೊಸ ಲುಕ್ ನೀಡಲಾಗಿದೆ. ನೂತನ ಕಾರಿನ ಬೆಲೆ 7.74 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭವಾಗಲಿದೆ. 3 ವೇರಿಯೆಂಟ್‌ಗಳಲ್ಲಿ ನೂತನ ಹ್ಯುಂಡೈ i20 ಆಕ್ಟೀವ್ ಕಾರು ಲಭ್ಯವಿದೆ.

ಇದನ್ನೂ ಓದಿ: ಹ್ಯುಂಡೈ ಸ್ಯಾಂಟ್ರೋ ಆ್ಯನಿವರ್ಸರಿ ಎಡಿಷನ್‌ ಬಿಡುಗಡೆ!

ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯೂ ಲಭ್ಯವಿದೆ. S, SX ಹಾಗೂ SX ಡ್ಯುಯೆಲ್ ಟೋನ್ ವೇರಿಯೆಂಟ್‌ನಲ್ಲಿ ಲಭ್ಯವಿರುವ ನೂತನ ಹ್ಯುಂಡೈ i20 ಆಕ್ಟೀವ್ ಕಾರು, ಸದ್ಯ ಮಾರುಕಟ್ಟೆಯಲ್ಲಿರುವ ಆಕ್ಟೀವ್ ಕಾರಿಗಿಂತ 2,000 ರೂಪಾಯಿ ಹೆಚ್ಚಾಗಿದೆ. ಖಡ್ಡಾಯ ಸುರಕ್ಷತಾ ಸೌಲಭ್ಯಗಳಾದ ಡ್ರೈವರ್, ಪ್ಯಾಸೆಂಜರ್ ಸೀಟ್ ಬೆಲ್ಟ್ ಅಲರ್ಟ್, ಸ್ಪೀಡ್ ಅಲರ್ಟ್, ರಿವರ್ಸ್ ಕ್ಯಾಮರ, ಪಾರ್ಕಿಂಗ್ ಸೆನ್ಸಾರ್ ಎಲ್ಲಾ ವೇರಿಯೆಂಟ್‌ ಕಾರ್‌ಗಳಲ್ಲೂ ಲಭ್ಯವಿದೆ.

ಇದನ್ನೂ ಓದಿ: ಮಾರುತಿ ಬ್ರೆಜ್ಜಾಗೆ ತಲೆನೋವಾದ ಹ್ಯುಂಡೈ ವೆನ್ಯು; 75,000 ಬುಕಿಂಗ್ ದಾಖಲೆ!

ನೂತನ ಹ್ಯುಂಡೈ i20 ಆಕ್ಟೀವ್ ಕಾರಿಗೆ ಸ್ಪೋರ್ಟ್ ಲುಕ್ ನೀಡಲಾಗಿದೆ. ಪ್ರೊಜೆಕ್ಟರ್ ಲೆನ್ಸ್ ಹೆಡ್‌ಲ್ಯಾಂಪ್ಸ್, LED DRLs ಹಾಗೂ ಕಾರ್ನರಿಂಗ್ ಲ್ಯಾಂಪ್ಸ್, LED ಟೈಲ್‌ಲೈಟ್ಸ್, ಶಾರ್ಟ್ ಫಿನ್ ಆ್ಯಂಟೆನಾ, ಫಾಗ್ ಲ್ಯಾಂಪ್ಸ್, ಡೈಮಂಡ್ ಕಟ್ ಅಲೋಯ್ ವ್ಹೀಲ್ಸ್ ಫೀಚರ್ಸ್ ಲಭ್ಯವಿದೆ. 

ಇದನ್ನೂ ಓದಿ:  ಹುಂಡೈ ಗ್ರ್ಯಾಂಡ್ i10 NIOSಕಾರು ಬಿಡುಗಡೆ: ಬೆಲೆ 4.99 ಲಕ್ಷ ರೂಪಾಯಿ!

ನೂತನ ಕಾರು 1 .2-ಲೀಟರ್ ಪೆಟ್ರೋಲ್ ಮೋಟಾರು ಹೊಂದಿದ್ದು,  82 bhp ಪವರ್ ಹಾಗೂ 115 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.   6 ಸ್ಪೀಡ್ ಮಾನ್ಯುಯೆಲ್ ಗೇರ್ ಬಾಕ್ಸ್ ಹೊಂದಿದೆ. ಇನ್ನು  1.4 ಲೀಟರ್ ಡೀಸೆಲ್ ಎಂಜಿನ್ ಕಾರು 89 bhp ಪವರ್ 220 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.