Asianet Suvarna News Asianet Suvarna News

ಹ್ಯುಂಡೈ ಕ್ರೆಟಾಗೆ ಪ್ರತಿಸ್ಪರ್ಧಿ- ಬರುತ್ತಿದೆ ಟೊಯೊಟಾ SUV ಕಾರು!

ಹ್ಯುಂಡೈ ಕ್ರೆಟಾ ಕಾರಿಗೆ ಪ್ರತಿಸ್ಪರ್ಧಿಯಾಗಿ ಟೊಯೊಟಾ ಕಾರು ಬಿಡುಗಡೆಯಾಗುತ್ತಿದೆ ಕಾಂಪಾಕ್ಟ್ ಕ್ರಾಸ್‌ಓವರ್ SUV ಕಾರು ಪ್ರೀಯರನ್ನು ಮೋಡಿ ಮಾಡಲಿದೆ. ನೂತನ ಕಾರಿನ ಹೆಚ್ಚಿನ ವಿವರ ಇಲ್ಲಿದೆ.

Hyundai creta competitor Toyota will launch compact crossover SUV car
Author
Bengaluru, First Published Mar 17, 2019, 6:27 PM IST

ನವದೆಹಲಿ(ಮಾ.17): ಹ್ಯುಂಡೈ ಕ್ರೆಟಾ ಭಾರತದಲ್ಲಿ ಕಾರು ಪ್ರೀಯರನ್ನ ಮೋಡಿ ಮಾಡಿದೆ. SUV ಕಾರು ವಿಭಾಗದಲ್ಲಿ ಕ್ರೆಟಾ ಅತ್ಯುತ್ತಮ ಕಾರು ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. ಇದೀಗ ಹ್ಯುಂಡೈ ಕ್ರೆಟಾಗೆ ಪ್ರತಿಸ್ಪರ್ಧಿಯಾಗಿ ಟೊಯೊಟಾ SUV ಕಾರು ಬಿಡುಗಡೆ ಮಾಡುತ್ತಿದೆ.

ಇದನ್ನೂ ಓದಿ: ಮಾರುತಿ ಸುಜುಕಿ ಎಸ್ಟೀಮ್ ಕಾರಿಗೆ ಹೊಸ ಲುಕ್ - ಸಂಕಷ್ಟದಲ್ಲಿ ಮಾಲೀಕ!

ಕಾಂಪಾಕ್ಟ್ ಕ್ರಾಸ್ಓವರ್ ಕಾರು ಉತ್ಪಾದನೆ ಮಾಡಲು ಟೊಯೊಟಾ ತಯಾರಿ ಆರಂಭಿಸಿದೆ. 1.2-ಟರ್ಬೋಚಾರ್ಜ್ ಪೆಟ್ರೋಲ್ ಎಂಜಿನ್ ಹಾಗೂ 1.8  ಲೀಟರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ವೇರಿಯೆಂಟ್‌ನಲ್ಲಿ ನೂತನ SUV ಕಾರು ಬಿಡುಗಡೆಯಾಗಲಿದೆ. 

ಇದನ್ನೂ ಓದಿ: ಟೆಸ್ಲಾ ತಂತ್ರಜ್ಞಾನಕ್ಕೆ ಮೋದಿ ಮೆಚ್ಚುಗೆ- ಭಾರತಕ್ಕೆ ಕಾಲಿಡುತ್ತಿದೆ ಅಮೇರಿಕ ಕಾರು!

2020ಕ್ಕೆ ಟೊಯೊಟಾ ನೂತನ SUV ಕಾರು ಬಿಡುಗಡೆಯಾಗಲಿದೆ. ಮೊದಲು ಥಾಯ್‌ಲೆಂಡ್‌ನಲ್ಲಿ ಕಾರು ಬಿಡುಗಡೆಯಾಗಲಿದ್ದು, ಬಳಿಕ ಭಾರತದ ರಸ್ತೆಗಿಳಿಯಲಿದೆ. ಸದ್ಯ ಈ ಕಾರಿನ ಬೆಲೆ ಹಾಗೂ ಇತರ ಮಾಹಿತಿಯನ್ನು ಕಂಪನಿ ಬಹಿರಂಗ ಪಡಿಸಿಲ್ಲ.
 

Follow Us:
Download App:
  • android
  • ios