ಮಾರುತಿ ಸುಜುಕಿ ಎಸ್ಟೀಮ್ ಕಾರಿಗೆ ಹೊಸ ಲುಕ್ - ಸಂಕಷ್ಟದಲ್ಲಿ ಮಾಲೀಕ!

ಕಾರು ಮಾಡಿಫಿಕೇಶನ್ ಮಾಡುವಾಗ ಎಚ್ಚರ ವಹಿಸಬೇಕು. ನುರಿತ, ಪರಿಣಿತರಲ್ಲೇ ವಿನ್ಯಾಸ ಮಾಡಿಸಬೇಕು. ಕಡಿಮೆ ಬೆಲೆಗೆ ಕಾರು ಮಾಡಿಫಿಕೇಶನ್ ಮಾಡಿದರೆ ಏನಾಗುತ್ತೆ ಅನ್ನೋದಕ್ಕೆ ಇಲ್ಲಿದೆ ಉದಾಹರಣೆ.
 

Maruti suzuzki esteem modified as a super car turned into cartoon car

ಪ.ಬಂಗಾಳ(ಮಾ.17): ರಸ್ತೆಯಲ್ಲಿ ಸೂಪರ್ ಕಾರು ಇತರ ಎಲ್ಲಾ ಕಾರಿಗಿಂತ ಭಿನ್ನವಾಗಿ ಕಾಣುತ್ತೆ. ಸೂಪರ್ ಕಾರು ಬೆಲೆ ಕೋಟಿ ರೂಪಾಯಿಗಿಂತ ಕಡಿಮೆ ಇಲ್ಲ. ಹೀಗಾಗಿ ಅನೇಕರು ಹಳೇ ಕಾರನ್ನು ಸೂಪರ್ ಕಾರು ರೀತಿ ಮಾಡಿಫೈ ಮಾಡುತ್ತಾರೆ. ಇದೀಗ ಪಶ್ಚಿಮ ಬಂಗಾಳದಲ್ಲಿ ಹಳೇ ಮಾರುತಿ ಸುಜುಕಿ ಎಸ್ಟೀಮ್ ಕಾರನ್ನು ಸೂಪರ್ ಕಾರಾಗಿ ಪರಿವರ್ತಿಸಲಾಗಿದೆ.

ಇದನ್ನೂ ಓದಿ: ಫೆಬ್ರವರಿಯಲ್ಲಿ ಗರಿಷ್ಠ ಮಾರಾಟವಾದ ಸಣ್ಣ ಕಾರು- ಇಲ್ಲಿದೆ ಲಿಸ್ಟ್!

ಮಾರುತಿ ಸುಜುಕಿ ಎಸ್ಟೀಮ್ ಕಾರಿಗೆ ಹೊಸ ಲುಕ್ ನೀಡಲಾಗಿದೆ. ಪೊರ್ಶೆ, ಬುಗಾಟಿ ಸೇರಿದಂತೆ ಸೂಪರ್ ಕಾರಿನ ಮಾಡೆಲ್ ನೋಡಿ ವಿನ್ಯಾಸ ಮಾಡಲಾಗಿದೆ. ಆದರೆ ವಿನ್ಯಾಸ ಪೂರ್ಣಗೊಂಡಾಗ ಕಾರ್ಟೂನ್ ಕಾರಿನ ರೀತಿ ಕಾಣಿಸುತ್ತಿದೆ. ವಿನ್ಯಾಸಗಾರ ಖುಷಿಯಲ್ಲಿದ್ದರೂ ಕಾರು ಮಾತ್ರ ಅತ್ತ ಸೂಪರ್ ಕಾರು ಅಲ್ಲ, ಇತ್ತ ಸಾಮಾನ್ಯ ಕಾರಿನ ವಿನ್ಯಾಸವೂ ಇಲ್ಲದಾಗಿದೆ.  ಹೀಗಾಗಿ ಕಾರು ಮಾಲೀಕ ಮಾರಾಟ ಮಾಡುವಂತಿಲ್ಲ, ಇರಲಿ ಎಂದು ಇಟ್ಟುಕೊಳ್ಳುವಂತಿಲ್ಲ ಅನ್ನೋ ಹಾಗಾಗಿದೆ.

ಇದನ್ನೂ ಓದಿ: ರೋಡ್ ಟೆಸ್ಟ್ ಯಶಸ್ವಿ - ಹೊಸ ಅವತಾರದಲ್ಲಿ ಮಾರುತಿ ಅಲ್ಟೋ!

ಹಳದಿ ಬಣ್ಣ, 4 ಡೋರ್ ಬದಲು 2 ಡೋರ್ ಸೇರಿದಂತೆ ಸಂಪೂರ್ಣ ಕಾರಿನ ವಿನ್ಯಾಸ ಬದಲಾಯಿಸಲಾಗಿದೆ. ಹಿಂಭಾಗದಲ್ಲಿ ಬ್ರೇಕ್ ಲೈಟ್, ಡಿಕ್ಕಿ ಎಲ್ಲವೂ ಬದಲಾಯಿಸಲಾಗಿದೆ. ಆದರೆ ಬದಿಯಿಂದ ಎಸ್ಟೀಮ್ ಕಾರಿನ ಲುಕ್ ಹಾಗೇ ಇದೆ. ಆದರೆ ಕಾರಿನ ಚಕ್ರ ಬದಲಾಯಿಸಿಲ್ಲ. ಮಾಡಿಫಿಕೇಶನ್ ಮಾಡೋ ಮೊದಲು ಬ್ಲೂ ಪ್ರಿಂಟ್ ರೆಡಿ ಮಾಡಬೇಕು. ಕಾರಿನ ಮಾಡೆಲ್ ಯಾವ ರೀತಿ ಇರಬೇಕು ಅನ್ನೋ ಸ್ಪಷ್ಟ ಜ್ಞಾನ ಇರಲೇಬೇಕು. ಕೊಂಚ ಎಡವಟ್ಟಾದರೂ ಕಾರಿನ ಅಂದ ಹಾಳಾಗಲಿದೆ. ಇಲ್ಲೂ ಆಗಿರೋದು ಅಷ್ಟೆ. 
 

Latest Videos
Follow Us:
Download App:
  • android
  • ios