ಮತ್ತೆ ಆತಂಕದಲ್ಲಿ ಆಟೋಮೊಬೈಲ್ ವಲಯ; ಉದ್ಯೋಗಿಗಳಲ್ಲಿ ಕರೋನಾ ಸೋಂಕು ಪತ್ತೆ!
ಲಾಡ್‌ಡೌನ್ ಸಡಿಲಿಕೆ ಬೆನ್ನಲ್ಲೇ ಆಟೋಮೊಬೈಲ್ ಕಂಪನಿಗಳು ಮತ್ತೆ ಆರಂಭಗೊಂಡಿದೆ. ಆದರೆ ಮತ್ತೆ ಆಟೋಮೊಬೈಲ್ ವಲಯ ಬಾಗಿಲು ಮುಚ್ಚುವ ಪರಿಸ್ಥಿತಿ ಬಂದೊದಗಿದೆ. ಈ ಕುರಿತ ವಿವರ ಇಲ್ಲಿದೆ.
ನವದೆಹಲಿ(ಮೇ.24): ಕೊರೋನಾ ವೈರಸ್ ಚೀನಾದಲ್ಲಿ ಮರಣ ಮೃದಂಗ ಭಾರಿಸುತ್ತಿರುವಾಗಲೇ ಭಾರತೀಯ ಆಟೋಮೊಬೈಲ್ ಕ್ಷೇತ್ರ ತೀವ್ರ ಸಂಕಷ್ಟ ಅನುಭವಿಸತೊಡಗಿತು. ಅಷ್ಟೇ ವೇಗದಲ್ಲಿ ಕೊರೋನಾ ವೈರಸ್ ಭಾರತದಲ್ಲಿ ಸ್ಫೋಟ ಗೊಂಡಿತು. ಇದರೊಂದಿಗೆ ಲಾಕ್‌ಡೌನ್ ಹೇರಲಾಯಿತು. ಇಷ್ಟೇ ಅಲ್ಲ ಆಟೋಮೊಬೈಲ್ ವಲಯ ಸಂಪೂರ್ಣ ಸ್ಥಗಿತಗೊಂಡಿತು. ಇದೀಗ ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ಮತ್ತೆ ವಾಹನ ಕಂಪನಿಗಳು ಕಾರ್ಯರಂಭ ಆರಂಭಿಸಿತು. ಇದೀಗ ಸ್ಥಗಿತಗೊಳಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಶೀಘ್ರದಲ್ಲೇ ಜಾರಿಯಾಗಲಿದೆ ಸ್ಕ್ರಾಪ್ ನಿಯಮ; ಹಳೇ ವಾಹನಗಳು ಗುಜುರಿಗೆ ಹಾಕಬೇಕು ಕಡ್ಡಾಯ!..
ಹಲವು ಆಟೋಮೊಬೈಲ್ ಕಂಪನಿಗಳು ಉತ್ಪಾನೆ, ಮಾರ್ಕೆಂಟಿಂಗ್ , ಸೇಲ್ಸ್, ಸರ್ವೀಸ್ ಸೇರಿದಂತೆ ಹಲವು ಚಟುವಟಿಕೆ ಆರಂಭಿಸಿದೆ. ತಮಿಳುನಾಡಿನಲ್ಲಿರುಲ ಹ್ಯುಂಡೈ ಮೋಟಾರ್ಸ್ ಘಟಕದ ಮೂವರು ಉದ್ಯೋಗಿಗಳಿಗೆ ಕೊರೋನಾ ವೈರಸ್ ತಗಲಿರುವುದು ದೃಢಪಟ್ಟಿದೆ. ಇದೀಗ ಈ ಮೂವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಕಂಪನಿಯ ಹಲವು ಉದ್ಯೋಗಿಗಳನ್ನು ಕ್ವಾರಂಟೈನ್ನಲ್ಲಿಡಲಾಗಿದೆ.
4.5 ಲಕ್ಷ ರೂಪಾಯಿ ಬೆಲೆಯ ವುಲ್ಲಿಂಂಗ್ ಎಲೆಕ್ಟ್ರಿಕ್ ಕಾರು ಬಿಡುಗಡೆ; 200 ಕಿ.ಮೀ ಮೈಲೇಜ್
ಇತ್ತ ಮೂವರು ಸೋಂಕಿತರನ್ನು ಐಸೋಲೇಶನ್ ಮಾಡಲಾಗಿದೆ. ಸಾಮಾಜಿಕ ಅಂತರ, ಸ್ಯಾನಿಟೈಸರ್ ಸೇರಿದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಹ್ಯುಂಡೈ ಘಟಕ ಮಾಡಿದೆ. ಆದರೆ ಮೂವರಿಗೆ ಸೋಂಕು ದೃಢಪಟ್ಟಿರುವ ಕಾರಣ ಇತರ ಉದ್ಯೋಗಿಗಳಲ್ಲಿ ಆತಂಕ ಎದುರಾಗಿದೆ. ಇಷ್ಟೇ ಅಲ್ಲ ಹೆಚ್ಚು ಜನರು ಕ್ವಾರಂಟೈನ್‌ಗೆ ಒಳಗಾದರೆ ಘಟಕ ಮತ್ತೆ ಬಾಗಿಲು ಮುಚ್ಚಬೇಕಾದ ಚಿಂತೆ ಎದುರಾಗಿದೆ.
ಹ್ಯುಂಡೈ ಮೋಟಾರ್ಸ್ ಮಾತ್ರವಲ್ಲ, ಗುರುಗಾಂವ್‌ನಲ್ಲಿರುವ ಮಾರುತಿ ಸುಜುಕಿ ಘಟಕದ ಉದ್ಯೋಗಿಯಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ. ಸೋಂಕಿತನನ್ನು ಆಸ್ಪತ್ರೆ ದಾಖಲಿಸಲಾಗಿದೆ. ಕಂಪನಿಯ ಮತ್ತೆ ಆರಂಭಗೊಂಡಾಗ ಉದ್ಯೋಗಿಗಳ ಕೊರೋನಾ ಪರೀಕ್ಷೆ ನಡೆಸಲಾಗಿದೆ. ನೆಗಟೀವ್ ರಿಪೋರ್ಟ್ ಬಂದಿತ್ತು. ಇದೀಗ ದಿಢೀರ್ ಕೊರೋನಾ ಕಾಣಿಸಿಕೊಂಡಿರುವುದು ಆತಂಕ ಹೆಚ್ಚಿಸಿದೆ.