ಹೊಸ ಟ್ರಾಫಿಕ್ ನಿಯಮ; ಕಲಬುರಗಿ RTO ಕಚೇರಿ ಮುಂದೆ ಫುಲ್ ಕ್ಯೂ!
ಹೊಸ ಟ್ರಾಫಿಕ್ ನಿಯಮ ಜಾರಿಯಾದ ಬಳಿಕ RTO ಕಚೇರಿ, ಎಮಿಶನ್ ಟೆಸ್ಟ್, ಇನ್ಶೂರೆನ್ಸ್ ನವೀಕರಣ ಸೇರಿದಂತೆ ಹಲವು ಕಚೇರಿಗಳು ಜನರಿಂದ ತುಂಬಿ ತುಳುಕುತ್ತಿದೆ. ಸಂಜೆ ಕಚೇರಿ ಬಾಗಿಲು ಹಾಕಿದರೂ ಜನರು ಕ್ಯೂ ಮುಗಿಯುತ್ತಿಲ್ಲ.
ಕಲಬುರಗಿ(ಸೆ.13): ಮೋಟಾರು ವಾಹನ ಕಾಯ್ದೆ ತಿದ್ದಪಡಿಯಿಂದ ದೇಶದೆಲ್ಲೆಡೆ ಹೊಸ ಟ್ರಾಫಿಕ್ ದಂಡ ಜಾರಿಯಾಗಿದೆ. ಬರೋಬ್ಬರಿ 10 ಪಟ್ಟು ದಂಡ ಹೆಚ್ಚಿಸಲಾಗಿದೆ. ಹೀಗಾಗಿ ದುಬಾರಿ ದಂಡದಿಂದ ತಪ್ಪಿಸಿಕೊಳ್ಳಲು ವಾಹನ ಸವಾರರು ನಿಯಮ ಪಾಲನೆಗೆ ಮುಂದಾಗಿದ್ದಾರೆ. ಹೀಗಾಗಿ ಎಂದೂ RTO(Regional Transport Office) ಕಚೇರಿಯತ್ತ ಮುಖಮಾಡದ ಜನರು ಸರದಿ ಸಾಲಿನಲ್ಲಿ ನಿಂತು ದಾಖಲೆ ಪತ್ರಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಬರೋಬ್ಬರಿ 2 ಲಕ್ಷ ರೂಪಾಯಿ ದಂಡ; ಫೈನ್ ನೋಡಿ ಚಾಲಕ ಕಂಗಾಲು!
ಕಲಬುರಗಿಯ RTO ಕಚೇರಿ ಮುಂದೆ ಜನಸಾಗರವೇ ಹರಿದು ಬಂದಿದೆ. ಕಚೇರಿಗೆ ಬರುವವರಿಲ್ಲಿ ಡ್ರೈವಿಂಗ್ ಲೈಸೆನ್ಸ್‌ಗಾಗಿ ಅರ್ಜಿ ಹಾಕುವವರೆ ಹೆಚ್ಚಾಗಿದ್ದಾರೆ. ಇಷ್ಟು ದಿನ ಯಾವುದೇ ಲೈಸೆನ್ಸ್ ಇಲ್ಲದೆ ವಾಹನ ಓಡಿಸುತ್ತಿದ್ದ ಚಾಲಕರು, ರೈಡರ್ ಇದೀಗ ಲೈಸೆನ್ಸ್‌ಗಾಗಿ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಇನ್ನು ವಾಹನ ನೋಂದಾವಣಿ, ಅವದಿ ಮುಗಿದಿರುವ ದಾಖಲೆ ಪತ್ರಗಳನ್ನು ನವೀಕರಿಸಲು ಸವಾರರು ಕಚೇರಿ ಬಾಗಿಲು ತಟ್ಟುತ್ತಿದ್ದಾರೆ.
ಇದನ್ನೂ ಓದಿ: ಅಬ್ಬಾ ದಂಡ... ಒಂದೇ ವಾರದಲ್ಲಿ 1 ಕೋಟಿ ರು. ಸಂಗ್ರಹ
ಜನರು ಎಚ್ಚೆತ್ತುಕೊಂಡಿದ್ದಾರೆ. ದಾಖಲೆ ಪತ್ರಗಳ ನವೀಕರಣ, ಹೊಸ ಪತ್ರ, ಲೈಸೆನ್ಸ್ ಸೇರಿದಂತೆ ಹಲವು ಕಾರಣಗಳಿಗೆ ಸಾವರರು ಕಚೇರಿಗೆ ಬರುತ್ತಿದ್ದಾರೆ. ದುಬಾರಿ ದಂಡಕ್ಕಿಂತ ನಿಯಮ ಪಾಲಿಸಲು ಜನ ಮುಂದಾಗಿದ್ದಾರೆ. ದುಬಾರಿ ದಂಡದಿಂದ ಜನರು ಟ್ರಾಪಿಕ್ ನಿಯಮಗಳನ್ನು ಪಾಲಿಸಲು ಆರಂಭಿಸಿದ್ದಾರೆ ಎಂದು ಕಲಬುರಗಿ RTO ಅಧಿಕಾರಿ ದಾಮೋದರ್ ಹೇಳಿದ್ದಾರೆ.
ಸೆಪ್ಟೆಂಬರ್ಲ1 ರಿಂದ ಮೋಟಾರು ವಾಹನ ಕಾಯ್ದೆ 2019 ಜಾರಿಯಾಗಿದೆ. ಕರ್ನಾಟಕ ಸೇರಿದಂತೆ ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ನೂತನ ನಿಯಮ ಜಾರಿಯಲ್ಲಿದೆ.