ಬೆಂಗಳೂರು [ಸೆ.12]:  ದಂಡ ಪರಿಷ್ಕೃರಣೆ ಬಳಿಕ ಸಂಚಾರ ವಿಭಾಗದ ಪೊಲೀಸರ ಕಾರ್ಯಾಚರಣೆ ಮುಂದುವರೆದಿದ್ದು, ಸಂಚಾರ ನಿಯಮಗಳನ್ನು ಉಲ್ಲಂಘಿಸಿದವರಿಂದ ಒಂದೇ ದಿನದಲ್ಲಿ 42 ಲಕ್ಷ ರು. ದಂಡ ಸಂಗ್ರಹಿಸಲಾಗಿದೆ.

ನಗರ ವ್ಯಾಪ್ತಿಯಲ್ಲಿ ಮಂಗಳವಾರದ ಬೆಳಗ್ಗೆ 10ರಿಂದ ಬುಧವಾರ ಬೆಳಗ್ಗೆ 11ರವರೆಗೆ 1023 ಪ್ರಕರಣಗಳು ದಾಖಲಾಗಿದ್ದು, 42,53,700 ಲಕ್ಷ ವಸೂಲಿಯಾಗಿದೆ. ಈ ಪರಿಷ್ಕೃತ ದಂಡ ಜಾರಿಗೊಂಡ ಒಂದು ವಾರದ ಅವಧಿಯಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿ 1.10 ಕೋಟಿ ರು. ದಂಡವನ್ನು ಜನರು ಪಾವತಿಸಿದಂತಾಗಿದೆ.

ಪಾನಮತ್ತ ವಾಹನ ಚಾಲನೆ, ಮೊಬೈಲ್‌ನಲ್ಲಿ ಮಾತನಾಡುತ್ತ ವಾಹನ ಓಡಿಸುವುದು, ಹೆಲ್ಮೆಟ್‌ ಇಲ್ಲದೆ ಚಾಲನೆ, ತ್ರಿಬಲ್‌ ರೈಡಿಂಗ್‌, ಸೀಟ್‌ ಬೆಲ್ಟ್‌ ಹಾಕಿಕೊಳ್ಳದೆ ಪ್ರಯಾಣ, ಸಿಗ್ನಲ್‌ ಜಂಪ್‌, ಅತಿವೇಗದ ಚಾಲನೆ, ನೋ ಪಾರ್ಕಿಂಗ್‌ ಹಾಗೂ ಸಿಗ್ನಲ್‌ಗಳ ಬಳಿ ಸಂಚಾರ ಪಥದಲ್ಲಿ ನಿಲ್ಲದ ಹೀಗೆ ಕೆಲವು ಸಂಚಾರ ನಿಯಮಗಳನ್ನು ಹೆಚ್ಚಿನದಾಗಿ ಜನರು ಉಲ್ಲಂಘಿಸುತ್ತಿದ್ದಾರೆ.

ಡಿಜಿಲಾಕರ್‌ ಸರ್ವರ್‌ ಡೌನ್‌!

ಕೇಂದ್ರ ಸರ್ಕಾರದ ಡಿಜಿ ಲಾಕರ್‌ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದ್ದು ಜನರ ಪರದಾಡುವಂತಾಗಿದೆ.

ಸಂಚಾರ ದಂಡ ಪರಿಷ್ಕರಣೆ ಬೆನ್ನಲ್ಲೆ ತಮ್ಮ ವಾಹನದ ದಾಖಲಾತಿಗಳನ್ನು ಸಂಗ್ರಹಿಡಿಸಿಡಲು ಜನರು, ಕೇಂದ್ರ ಸರ್ಕಾರದ ಡಿಜಿ ಲಾಕರ್‌ ಆ್ಯಪ್‌ಗೆ ಮುಗಿ ಬಿದ್ದಿದ್ದಾರೆ. ಒಮ್ಮೆಗೆ ಹೆಚ್ಚಿನ ಜನರು ಲಾಕರ್‌ ಬಳಕೆಗೆ ಮುಂದಾದ ಪರಿಣಾಮ ಸರ್ವರ್‌ ಡೌನ್‌ ಆಗಿದೆ. ಇದರಿಂದ ಜನರು ಕೈ-ಕೈ ಹಿಸುಕಿಕೊಳ್ಳುವಂತಾಗಿದೆ.

ದಂಡ ಹೆಚ್ಚಾಯ್ತಾ? ಹಾಗಾದ್ರೆ ಸಂಚಾರ ನಿಯಮ ಪಾಲಿಸಿ: ಗಡ್ಕರಿ

ಪ್ಲೇ ಸ್ಟೋರ್‌ನಲ್ಲಿ ಆ್ಯಪ್‌ ಡೌನ್‌ ಲೋಡ್‌ ಮಾಡಿಕೊಳ್ಳಬೇಕು. ಬಳಿಕ ಅಲ್ಲಿ ಆಧಾರ್‌, ಚಾಲನಾ ಪರವಾನಗಿ, ಆರ್‌ಸಿ, ವಿಮೆ ಇನ್ನಿತರ ದಾಖಲೆಗಳು ಇರುತ್ತವೆ. ತಮ್ಮಗೆ ಅಗತ್ಯವಿರುವ ದಾಖಲೆಗಳನ್ನು ನೋಂದಣಿ ಸಂಖ್ಯೆ ದಾಖಲಿಸಿ ದಾಖಲಾತಿಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು. ತಮ್ಮ ಬಳಿ ಯಾವುದೇ ಮೂಲ ದಾಖಲೆಗಳನ್ನು ಕೊಂಡೊಯ್ಯುವ ಬದಲಿಗೆ ಡಿಜಿ ಲಾಕರ್‌ನಲ್ಲಿರುವ ದಾಖಲೆ ತೋರಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಡಿಜಿ ಲಾಕರ್‌ನಲ್ಲಿ ತಾಂತ್ರಿಕ ತೊಂದರೆ ಹಿನ್ನೆಲೆ ಜನರು ಮೂಲ ಪ್ರತಿಗಳನ್ನೇ ವಾಹನ ಚಾಲನೆ ವೇಳೆ ಇಟ್ಟುಕೊಳ್ಳಬೇಕಿದೆ.