ನವದೆಹಲಿ(ಏ.21): ಹೊಂಡಾ ನೂತನ ಎಲೆಕ್ಟ್ರಿಕ್ ಕಾರು ಅನಾವರಣ ಮಾಡಿದೆ. ಶಾಂಘೈ ಆಟೋ ಮೋಟಾರ್ ಶೋನಲ್ಲಿ ಹೊಂಡಾ XNV ಕಾನ್ಸೆಪ್ಟ್ ಕಾರು ಅನಾವರಣ ಮಾಡಲಾಗಿದೆ. ಈ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 340 ಕಿ.ಮೀ ಪ್ರಯಾಣದ ರೇಂಜ್ ನೀಡಲಿದೆ. SUV ಕಾರು ಇದಾಗಿದ್ದು, ಇದೀಗ ಇತರ ಎಲೆಕ್ಟ್ರಿಕ್ ಕಾರಿಗೆ ಭಾರಿ ಪೈಪೋಟಿ ನೀಡಲಿದೆ.

ಇದನ್ನೂ ಓದಿ: ಹೆಚ್ಚುವರಿ ಫೀಚರ್ಸ್, ಗರಿಷ್ಠ ಸುರಕ್ಷತೆ- ನೂತನ ಮಾರುತಿ ಅಲ್ಟೋ 800 ಫೇಸ್‌ಲಿಫ್ಟ್!

ಹೊಂಡಾ ನೂತನ  XNV ಎಲೆಕ್ಟ್ರಿಕ್ ಕಾರನ್ನು ಚೀನಾ ಹೊಂಡಾ ಕಂಪನಿ ತಯಾರಿಸಿದೆ. 2019ರ ಅಂತ್ಯದಲ್ಲಿ ಚೀನಾದಲ್ಲಿ ಈ ಕಾರು ಮೊದಲು ಬಿಡುಗಡೆಯಾಗಲಿದೆ.  ಬಳಿಕ ಭಾರತಕ್ಕೆ ಪ್ರವೇಶಸಿಲಿದೆ. ಇಷ್ಟೇ ಅಲ್ಲ ಹೊಂಡಾ ಕಂಪನಿ ಬರೊಬ್ಬರಿ 20 ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ.

ಇದನ್ನೂ ಓದಿ: ಮಾರುತಿ ಡಿಸೈರ್ ಪ್ರತಿಸ್ಪರ್ಧಿ ವೋಕ್ಸ್‌ವ್ಯಾಗನ್ ಎಮೋ ಕಾರು ಬಿಡುಗಡೆ!

ನೂತನ ಹೊಂಡಾ XNV ಎಲೆಕ್ಟ್ರಿಕ್ ಕಾರಿನಲ್ಲಿ  VE-1 ಎಂಜಿನ್ ಬಳಸಲಾಗಿದೆ.  161 hp ಪವರ್ ಹಾಗೂ 280 Nm ಎಲೆಕ್ಟ್ರಿಕ್ ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  53.6 kWh ಬ್ಯಾಟರಿ ಬಳಸಲಾಗಿದೆ. ಈ ಕಾರಿನ ಬೆಲೆ ಇನ್ನೂ ಬಹಿರಂಗವಾಗಿಲ್ಲ.