ಆಕರ್ಷಕ ಲುಕ್- ಫೋರ್ಡ್ ಆಸ್ಪೈರ್ ಬ್ಲೂ ಎಡಿಶನ್ ಬಿಡುಗಡೆ!

ಫೋರ್ಡ್ ಇಂಡಿಯಾ ನೂತನ ಆಸ್ಪೈರ್ ಕಾರು ಬಿಡುಗಡೆ ಮಾಡಿದೆ. ಆಸ್ಪೈರ್ ಬ್ಲೂ ಎಡಿಶನ್ ಹಲವು ಹೊಸತನಗಳಿಂದ ಮಾರುಕಟ್ಟೆ ಪ್ರವೇಶಿಸಿದೆ. ಈ ಕಾರಿನ ಬೆಲೆ, ಮೈಲೇಜ್ ಹಾಗೂ ಇತರ ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.

Ford india launch Aspire blue edition with petrol and diesel engine

ನವದೆಹಲಿ(ಮೇ.10): ಫೋರ್ಡ್ ಇಂಡಿಯಾ ಇದೀಗ ಆಸ್ಪೈರ್ ಸೆಡಾನ್ ಕಾರಿಗೆ ಹೊಸ ರೂಪ ನೀಡಿ ಬಿಡುಗಡೆ ಮಾಡಿದೆ. ಆಸ್ಪೈರ್ ಬ್ಲೂ ಎಡಿಶನ್ ಕಾರು ಬಿಡುಗಡೆಯಾಗಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಆಸ್ಪೈರ್ ಕಾರಿಗಿಂತ ನೂತನ ಬ್ಲೂ ಎಡಿಶನ್ ಆಕರ್ಷಕ ವಿನ್ಯಾಸ, ಕಲರ್ ಕಾಂಬಿನೇಶನ್ ಹೊಂದಿದೆ. ಬ್ಲಾಕ್ ಇಂಟೀರಿಯರ್ ಜೊತೆಗೆ ಬ್ಲೂ ಶೇಡ್ ಕಾರಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.

ಇದನ್ನೂ ಓದಿ: ಭಾರತಕ್ಕೆ ಚೀನಾದ ಚೆರಿ ಕಾರು- ವಾಹನ ಮಾರುಕಟ್ಟೆ ತಲ್ಲಣ!

ನೂತನ ಬ್ಲೂ ಎಡಿಶನ್ ಆಸ್ಪೈರ್ ಕಾರು ಪೆಟ್ರೋಲ್ ಹಾಗೂ ಡೀಸೆಲ್ ವೇರಿಯೆಂಟ್ ಲಭ್ಯವಿದೆ.  ಪೆಟ್ರೋಲ್ ಕಾರಿನ ಬೆಲೆ 7.50 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ), ಇನ್ನು ಡೀಸೆಲ್ ಕಾರಿನ ಬೆಲೆ 8.30 ಲಕ್ಷ ರೂಪಾಯಿ(ಎಕ್ಸ್  ಶೋ ರೂಂ). ಸದ್ಯ ಬಿಡುಗಡೆಯಾಗಿರುವ ಬ್ಲೂ ಎಡಿಶನ್, ಟಾಪ್ ಮಾಡೆಲ್‌ಗೆ ಸರಿಸಮವಾಗಿದೆ. ಪೆಟ್ರೋಲ್ ಕಾರು 20.4 ಕಿ.ಮಿ ಮೈಲೇಜ್ ನೀಡಿದರೆ, ಡೀಸೆಲ್ ಕಾರು 26.1 ಕಿ.ಮೀ ಮೈಲೇಜ್ ನೀಡಲಿದೆ.

ಇದನ್ನೂ ಓದಿ: ಕಾರು ರಿಪೇರಿಗೆ ಡೀಲರ್ ಮೊತ್ತ 3 ಲಕ್ಷ- ಲೋಕಲ್ ಗ್ಯಾರೇಜ್‌ನಲ್ಲಿ 1000 ರೂ.ಗೆ ರೆಡಿ!

ಬ್ಲೂ ಎಡಿಶನ್ ಆಸ್ಪೈರ್ ಪೆಟ್ರೋಲ್ ಕಾರು,  1.2-ಸೀಟರ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 95 bhp ಪವರ್ ಹಾಗೂ 120 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  ಡೀಸೆಲ್ ವೇರಿಯೆಂಟ್ ಕಾರು  1.5-ಲೀಟರ್ 4 ಸಿಲಿಂಡರ್ ಆಯಿಲ್ ಬರ್ನರ್ ಎಂಜಿನ್ ಹೊಂದಿದ್ದು,  99 bhp ಪವರ್ ಹಾಗೂ 215 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. 

Latest Videos
Follow Us:
Download App:
  • android
  • ios