ಹೋಂಡಾದ ಲಕ್ಷುರಿ ಬೈಕುಗಳಿಗೆ ಬುಕಿಂಗ್ ಶುರು !
2019ಕ್ಕೆ ಹೊಂಡಾದಿಂದ ನಾಲ್ಕು ಬೈಕ್‌ಗಳು ಬಿಡುಗಡೆಯಾಗಲಿದೆ. ಹೊಂಡಾ ಈಗಾಗಲೇ ದುಬಾರಿ ಬೆಲೆ ಲಕ್ಷುರಿ ಬೈಕ್ ಬಿಡುಗಡೆ ಮಾಡಿದೆ. ಇಲ್ಲಿದೆ ಹೊಂಡಾ ಸಿಬಿ1000ಆರ್ ಪ್ಲಸ್, ಗೋಲ್ಡ್ ವಿಂಗ್ ಟೂರ್ ಡಿಸಿಟಿ ಸೇರಿದಂತೆ ಕೆಲ ಬೈಕ್ ಮಾರುಕಟ್ಟೆ ಪ್ರವೇಶಿಸಿದೆ.
ನವದೆಹಲಿ(ಡಿ.13): ಭಾರತದ ಬೈಕು ಮಾರುಕಟ್ಟೆಇದ್ದಕ್ಕಿದ್ದಂತೆ ರಂಗೇರಿದೆ. ಅದ್ದೂರಿ ಬೈಕು ತಯಾರಿಸುವ ಕಂಪನಿಗಳು ದೊಡ್ಡ ದೊಡ್ಡ ಆಕರ್ಷಕ ಬೈಕುಗಳನ್ನು ಬಿಡುಗಡೆ ಮಾಡುತ್ತಿದ್ದಂತೆಯೇ ಹೋಂಡಾ ಕಂಪನಿ ಕೂಡ ತನ್ನ ಸಾಮರ್ಥ್ಯ ಪ್ರದರ್ಶಿಸಲು ಮುಂದಾಗಿದೆ. ಇದೀಗ ಸಿಬಿ ಸರಣಿಯ ಲಕ್ಷುರಿ ಬೈಕುಗಳನ್ನು ಮಾರುಕಟ್ಟೆಗೆ ಬಿಟ್ಟಿವೆ.
ಸ್ಪೋರ್ಟ್ಸ್ ಬೈಕ್‌ಗಳು ಎಂದಾಕ್ಷಣ ಹೊಂಡಾ ಮೂಂಚೂಣಿಯಲ್ಲಿ ನಿಲ್ಲುತ್ತದೆ. ಈಗ 2018ರ ಕೊನೆಯಲ್ಲಿ ನಿಂತು ಹೊಸ ವರ್ಷಕ್ಕೆ ಬೈಕ್ ಕೊಳ್ಳಬೇಕು ಎನ್ನುವವರಿಗೆ ಸಿಹಿ ಸುದ್ದಿ ನೀಡಿದೆ. ಅದು ಶಕ್ತಿಶಾಲಿ ನಾಲ್ಕು ಬಗೆಯ ಬೈಕ್‌ಗಳನ್ನು ಪರಿಚಯಿಸುವ ಮೂಲಕ. ಸದ್ಯ ಮುಂಬೈ ಮತ್ತು ದೆಹಲಿಯಲ್ಲಿ ಪ್ರೀ ಬುಕ್ಕಿಂಗ್ ಆರಂಭಿಸಿರುವ ಸಂಸ್ಥೆ ಸದ್ಯದಲ್ಲಿಯೇ ಕರ್ನಾಟಕದಲ್ಲೂ ಪ್ರೀ ಬುಕ್ಕಿಂಗ್ ವ್ಯವಸ್ಥೆಗ ಚಾಲನೆ ನೀಡಲಿದೆ.
ಸಿಬಿ1000ಆರ್ ಪ್ಲಸ್, ಗೋಲ್ಡ್ ವಿಂಗ್ ಟೂರ್ ಡಿಸಿಟಿ, ಸಿಬಿಆರ್1000ಆರ್‌ಆರ್ ಫೈರ್‌ಬ್ಲೇಡ್ ಮತ್ತು ಸಿಬಿಆರ್1000ಆರ್‌ಆರ್ ಫೈರ್‌ಬ್ಲೇಡ್ ಸಿಪಿ ಎನ್ನುವ ನಾಲ್ಕು ವಿಧದ ಬೈಕ್‌ಗಳು ಮುಂದಿನ ವರ್ಷ ರೋಡಿಗಿಳಿಯಲು ಸಜ್ಜಾಗಿವೆ.
ಸಿಬಿ1000 ಆರ್ ಪ್ಲಸ್:
ನಿಯೋ ಸ್ಪೋಟ್ಸ್ ಕೆಫೆ ಎಂದೇ ಕರೆಯಲ್ಪಡುತ್ತಿರುವ ಸಿಬಿ1000ಆರ್ ಪ್ಲಸ್ ನಾಲ್ಕು ಸಿಲಿಂಡರ್ ಒಳಗೊಂಡಿರುವ 1000 ಸಿಸಿ ಬೈಕ್. ಇದರಲ್ಲಿ 107 ಕಿಲೋವ್ಯಾಟ್ ಮತ್ತು 104 ಕಿಲೋವ್ಯಾಟ್ ಎರಡೂ ಸಾಮರ್ಥ್ಯದ ಮಾದರಿಗಳಿವೆ. 107 ಕಿ.ವ್ಯಾ ಬೈಕ್ 10.500 ರೊಟೇಷನ್ ಪರ್ ಹವರ್ (ಆರ್‌ಪಿಎಚ್) ಸಾಮರ್ಥ್ಯ ಹೊಂದಿದ್ದು ಅತಿ ಹೆಚ್ಚು ವೇಗವಾಗಿ ಸಾಗಬಹುದಾಗಿದೆ. 104 ಕಿಲೋವ್ಯಾಟ್ ಸಾಮರ್ಥ್ಯದ ಬೈಕ್‌ನ ಆರ್‌ಪಿಎಚ್ 8250 ಆಗಿದೆ. ಎಂಜಿನ್ ಬ್ರೇಕ್, ಹೊಸ ಮಾದರಿಯ ಕ್ಲಚ್ ಸಿಸ್ಟಂನಿಂದ ಹೆಚ್ಚು ವೇಗದಲ್ಲಿಯೂ ತಕ್ಷಣ ಬೈಕನ್ನು ನಿಯಂತ್ರಣಕ್ಕೆ ತರಲು ಸಹಕಾರಿಯಾಗಿದೆ. 14,46000 (ಎಕ್ಸ್ ಶೋರೂಂ, ದೆಹಲಿ)
ಗೋಲ್ಡ್ ವಿಂಗ್ ಟೂರ್ ಡಿಸಿಟಿ:
ಬೈಕ್‌ನಲ್ಲಿ ದೇಶ ಸುತ್ತಬೇಕು ಎಂದು ಆಸೆ ಇಟ್ಟುಕೊಂಡವರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಹೊಂಡಾ ರೂಪಿಸಿರುವ ಬೈಕ್ ಗೋಲ್ಡ್ ವಿಂಗ್ ಟೂರ್ ಡಿಸಿಟಿ. ಮೊದಲ ಬಾರಿಗೆ ಆ್ಯಪಲ್ ಕಾರ್ ಪ್ಲೇ ಸಿಸ್ಟಂ ಅನ್ನು ಹೊಂಡಾ ಈ ಬೈಕ್‌ಗೆ ಅಳವಡಿಸಿದೆ. ಇದರ ಜೊತೆಗೆ ಹೈಟ್‌ಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಸೀಟ್, ಹಿಂಬದಿಯ ಟ್ರಂಕ್ ಈ ಬೈಕ್‌ನ ವಿಶೇಷ.
ಆ್ಯಂಟಿ ಲಾಕ್ ಬ್ರೇಕ್ (ಎಎಲ್‌ಬಿ) ವ್ಯವಸ್ಥೆ ಹೊಂದಿರುವ ಟೂರ್ ಡಿಸಿಟಿ 1833 ಸಿಸಿ ಇಂಜಿನ್ ಸಾಮರ್ಥ್ಯ ಹೊಂದಿದೆ. ಆರು ಸಿಲೆಂಡರ್‌ಗಳ ಸಹಾಯದಿಂದ ಎಂಥಹುದೇ ಕಠಿಣ ಹಾದಿಯಲ್ಲಿಯೂ ಸಾಗಲು 92.7 ಕಿಲೋವ್ಯಾಟ್ ಸಾಮರ್ಥ್ಯ ಈ ಬೈಕ್‌ಗೆ ಇದೆ. ಇದರ ಎಕ್ಸ್‌ಶೋರೂಂ ಬೆಲೆ 27,79000 ರು.
ಸಿಬಿಆರ್1000ಆರ್‌ಆರ್ ಫೈರ್‌ಬ್ಲೇಡ್, ಸಿಬಿಆರ್1000ಆರ್‌ಆರ್ ಫೈರ್‌ಬ್ಲೇಡ್ ಸಿಪಿ:
ಸುರಕ್ಷತೆಯ ಜೊತೆಗೆ ಹೈ ಸ್ಪೀಡ್ ಎನ್ನುವ ಪರಿಕಲ್ಪನೆಯನ್ನು ಹೊಂದಿದೆ ಸಿಬಿಆರ್1000ಆರ್‌ಆರ್ ಫೈರ್‌ಬ್ಲೇಡ್ ಮತ್ತು ಸಿಪಿ. 1000 ಸಿಸಿ ಎಂಜಿನ್ ಸಾಮರ್ಥ್ಯ, 141 ಕಿಲೋವ್ಯಾಟ್, 13000 ಆರ್‌ಪಿಎಚ್ ನೊಂದಿಗೆ ಆರು ಗೇರ್‌ಗಳನ್ನು ಹೊಂದಿದೆ ಫೈರ್‌ಬ್ಲೇಡ್. ರೈಡಿಂಗ್ ಮೋಡ್ ಸೆಲೆಕ್ಟ್ ಸಿಸ್ಟಂ ಈ ಬೈಕ್‌ನಲ್ಲಿ ಇರುವುದು ವಿಶೇಷ. ಸಿಬಿಆರ್1000ಆರ್‌ಆರ್ ಫೈರ್‌ಬ್ಲೇಡ್ ಸಿಪಿಯಲ್ಲಿ ಹೆಚ್ಚುವರಿಯಾಗಿ ಸೆಮಿ ಆಕ್ಟೀವ್ ಎಲೆಕ್ಟ್ರಾನಿಕ್ ಕಂಟ್ರೋಲ್ ಸಿಸ್ಟಂ ಇದೆ.
ಸಿಬಿಆರ್1000ಆರ್‌ಆರ್ ಫೈರ್‌ಬ್ಲೇಡ್ 16. 43000 ರು, ಮತ್ತು ಸಿಪಿ 19,28000 ರು. (ಎಕ್ಸ್ ಶೋ ರೂಂ, ದೆಹಲಿ) ಬೆಲೆ ಹೊಂದಿವೆ.