ಬೆಂಗಳೂರು(ಡಿ.9): ಜಪಾನ್ ಮೋಟರ್‌ಸೈಕಲ್ ಹೊಂಡಾ ಇದೀಗ ಆ್ಯಂಟಿ ಲಾಕ್ ಬ್ರೇಕ್ ಸಿಸ್ಟಮ್(ABS) ತಂತ್ರಜ್ಞಾನದೊಂದಿಗೆ ನೂತನ ಬೈಕ್ ಬಿಡುಗಡೆ ಮಾಡಿದೆ. ಹೊಂಡಾ X ಬ್ಲೇಡ್ ಹೆಸರಿನಲ್ಲಿ ಮಾರುಕಟ್ಟೆ ಪ್ರವೇಶಿಸಿರುವ ನೂತನ ಬೈಕ್ ಹಲವು ವಿಶೇಷತೆ ಹೊಂದಿದೆ.

 

 

ನೂತನ ಹೊಂಡಾ X ಬ್ಲೇಡ್ ಬೈಕ್ ಬೆಲೆ 87,776 ರೂಪಾಯಿ(ಎಕ್ಸ್ ಶೋ ರೂಂ). ಇದು ಹಳೆ ಎಕ್ಸ್ ಬ್ಲೇಡ್ ಬೈಕ್ ಬೆಲೆಗಿಂತ 6,000 ರೂಪಾಯಿ ಹೆಚ್ಚಾಗಿದೆ. ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವ ಈ ಬೈಕ್‌ನಲ್ಲಿ ಎಂಜಿನ್ ಹಾಗೂ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ.

 

 

162.7 ಸಿಸಿ ಸಿಂಗಲ್ ಸಿಲಿಂಡರ್ ಎರ್‌ಕೂಲ್‌ಡ್ ಎಂಜಿನ್, 13.93 bph ಪವರ್ ಹಾಗೂ 13.9 nm ಟಾರ್ಕ್ ಉತ್ಪಾದಿಸಲಿದೆ. 5 ಸ್ವೀಡ್ ಗೇರ್ ಬಾಕ್ಸ್ ಹೊಂದಿದೆ. 276 mm ಡಿಸ್ಕ್ ಬ್ರೇಕ್(ABS) ಹಾಗೂ 130mm ರೇರ್ ಡ್ರಮ್ ಬ್ರೇಕ್ ಹೊಂದಿದೆ.  

ಫುಲ್ ಎಲ್ಇಡಿ ರೊಬೊಟ್ ಫೇಸ್ ಹೆಡ್‌ಲ್ಯಾಂಪ್ಸ್, ಡಿಜಿಟಲ್ ಇಂಸ್ಟ್ರುಮೆಂಟ್ ಕ್ಲಸ್ಟರ್, ಡಿಜಿಟಲ್ ಕ್ಲಾಕ್ ಸೇರಿದಂತೆ ಹಲವು ನೂತನ ತಂತ್ರಜ್ಞಾನಗಳನ್ನ ಅಳವಡಿಸಲಾಗಿದೆ. 5 ವಿವಿದ ಬಣ್ಣಗಳಲ್ಲಿ ಈ ಬೈಕ್ ಲಭ್ಯವಿದೆ.