ನವದೆಹಲಿ(ಮಾ.07): ಹೊಂಡಾ ಸಂಸ್ಥೆ ನೂತನ ಸಿವಿಕ್ ಕಾರು ಬಿಡುಗಡೆ ಮಾಡಿದೆ. 2019ರ ನೂತನ ಸಿವಿಕ್ ಕಾರು 10 ಜನರೇಶನ್ ಕಾರು ಎಂದು ಗುರುತಿಸಿಕೊಂಡಿರುವ ಸಿವಿಕ್ ಕಾರು ಹಲವು ವಿಶೇಷತೆ ಹಾಗೂ ಆಧುನಿಕ ತಂತ್ರಜ್ಞಾನ ಒಳಗೊಂಡಿದೆ. ಬರೋಬ್ಬರಿ 7 ವರ್ಷಗಳ ಬಳಿಕ ಭಾರತದಲ್ಲಿ ಹೊಂಡಾ ಸಿವಿಕ್ ಕಾರು ಬಿಡುಗಡೆಗೊಳ್ಳುತ್ತಿದೆ. 

ಇದನ್ನೂ ಓದಿ: ನಡು ರಸ್ತೆಯಲ್ಲಿ ಮಹಿಳೆ ಹೆಲ್ಮೆಟ್ ಪುಡಿ ಮಾಡಿ ಸರ್ಪ್ರೈಸ್ ನೀಡಿದ ಪೊಲೀಸ್!

ಸ್ಕೋಡಾ ಒಕ್ಟಿವಾ, ಟೊಯೊಟಾ ಕೊರೊಲಾ ಹಾಗೂ ಹ್ಯುಂಡೈ ಎಲಾಂಟ್ರ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ನೂತನ ಹೊಂಡಾ ಸಿವಿಕ್ ರಸ್ತೆಗಿಳಿಯುತ್ತಿದೆ.   ನೂತನ ಸಿವಿಕ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ವೇರಿಯೆಂಟ್ ಲಭ್ಯವಿದೆ. ಈ ಹಿಂದೆ ಕೇವಲ ಪೆಟ್ರೋಲ್ ಎಂಜಿನ್ ಮಾತ್ರ ಲಭ್ಯವಿತ್ತು.

ಇದನ್ನೂ ಓದಿ: ಸಾವಿರಾರು ವಾಹನಗಳು ಗುಜರಿಗೆ!: ಯಾಕೆ? ಯಾವ ವಾಹನಗಳು ಇಲ್ಲಿದೆ ಮಾಹಿತಿ!

ABS, EBD ಸೇರಿದಂತೆ ಗರಿಷ್ಠ ಸುರಕ್ಷತೆಯ ಬ್ರೇಕ್, ಕ್ರಾಶ್ ಟೆಸ್ಟ್ ಸುರಕ್ಷತೆಯಲ್ಲಿ 5 ಸ್ಟಾರ್ ರೇಟಿಂಗ್ ಹೊಂದಿದೆ.  1.8 ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್  139 bhp ಪವರ್ ಹಾಗೂ  174 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.  1.6 ಲೀಟರ್  i-DTEC ಡೀಸೆಲ್ ಎಂಜಿನ್ 118 bhp ಪವರ್ ಹಾಗೂ 300 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.