ಅಕ್ಟೋಬರ್(ಅ.28): ಹೋಂಡಾ ಮೋಟೊ3 ಸವಾರ ಜೌಮ್ ಮೇಸಿಯಾ (ಲಿಯೊಪಾರ್ಡ್ ರೇಸಿಂಗ್ NSF250RW), ಸ್ಪೇನ್‍ನ ಮೋಟಾರ್‌ಲ್ಯಾಂಡ್ ಅರಗಾನ್‍ನಲ್ಲಿ ನಡೆದ ಮೋಟೊ3 ವಿಭಾಗದÀ 2020ರ FIM *1   ವಿಶ್ವ ಚಾಂಪಿಯನ್‍ಶಿಪ್ ಗ್ರ್ಯಾಂಡ್ ಪ್ರಿಕ್ಸ್ ‌ನ 12 ಸುತ್ತಿನಲ್ಲಿ ಗೆಲುವು ದಾಖಲಿಸಿದ್ದಾರೆ.  1961ರಲ್ಲಿ ನಡೆದಿದ್ದ 125ಸಿಸಿ ವಿಭಾಗದ ಸ್ಪೇನ್ ಗ್ರ್ಯಾಂಡ್  ಪ್ರಿಕ್ಸ್ ‌ನಲ್ಲಿ ತನ್ನ ಮೊದಲ ವಿಶ್ವ ಗ್ರ್ಯಾಂಡ್ ಪ್ರಿಕ್ಸ್ ಗೆಲುವಿನಿಂದ ಹಿಡಿದು ಇಲ್ಲಿಯವರೆಗೆ ತನ್ನ ಗೆಲುವಿನ ಓಟ ಮುಂದುವರೆಸಿರುವ ಹೋಂಡಾ, ಈಗ  800 ಗ್ರ್ಯಾಂಡ್ ಪ್ರಿಕ್ಸ್ ಗೆಲುವು ದಾಖಲಿಸಿದೆ..

ಕಾರಿನ ಮೇಲೆ 2.5 ಲಕ್ಷ ರೂ ಡಿಸ್ಕೌಂಟ್ ಘೋಷಿಸಿದ ಹೊಂಡಾ!.

ಎಫ್‍ಐಎಂ:  ಫೆಡರೇಷನ್ ಇಂಟರ್‍ನ್ಯಾಷನಲ್ ಡಿ ಮೊಟೊಸೈಕ್ಲಿಸ್ಮೆ (ಮೋಟರ್ ಸೈಕಲ್ ಸ್ಪರ್ಧೆ)
ಫ್‍ಐಎಂನ ದಾಖಲೆಗಳನ್ನು ಆಧರಿಸಿದ ಹೋಂಡಾ ಗೆದ್ದಿರುವ ಸಂಖ್ಯೆಗಳು

2010 ರಿಂದ 2018ರವರೆಗಿನ ಅವಧಿಯಲ್ಲಿ ನಡೆದಿದ್ದ ಮೋಟೊ2 ವಿಭಾಗದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಎಲ್ಲ ಮೋಟರ್ ಸೈಕಲ್‍ಗಳು ಹೋಂಡಾದ ಎಂಜಿನ್ ಹೊಂದಿದ್ದರಿಂದ ಈ ಗೆಲುವಿನಲ್ಲಿ ಸೇರ್ಪಡೆ ಮಾಡಿಲ್ಲ 
2012ರಲ್ಲಿ ನಡೆದಿದ್ದ ಮೋಟೊ3 ವಿಭಾಗದ ಸ್ಪರ್ಧೆಯಲ್ಲಿ ಹೋಂಡಾ ಗೆದ್ದಿದ್ದರೂ, FTR ಹೋಂಡಾ ರೆಜಿಸ್ಟರ್ಡ್ ಕನ್‍ಸ್ಟ್ರಕ್ಟರ್ ಆಗಿದ್ದರಿಂದ (NSF250R ಎಂಜಿನ್ ಇದ್ದರೂ) ಅದನ್ನು ಪರಿಗಣಿಸಿಲ್ಲ. 

ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿ ಹೊಂಡಾ H'Ness CB 350 ಬೈಕ್ ಬಿಡುಗಡೆ!
    
1954ರಲ್ಲಿ ಹೋಂಡಾದ ಸ್ಥಾಪಕ ಸೊಯಿಚಿರೊ ಹೋಂಡಾ ಅವರು, ಆ ಕಾಲದ ಪ್ರೀಮಿಯಂ ಮೋಟರ್ ಕ್ರೀಡೆಯಾಗಿದ್ದ ಇಸ್ಲೆ ಆಫ್ ಮ್ಯಾನ್ ಟಿಟಿಯಲ್ಲಿ ಸ್ಪರ್ಧಿಸುವುದನ್ನು ಘೋಷಿಸಿದ್ದರು. ಮೋಟರ್ ಸೈಕಲ್ ಕ್ಷೇತ್ರದಲ್ಲಿ ಹೋಂಡಾ, ವಿಶ್ವದ ಅತ್ಯುತ್ತಮ ಮೋಟರ್ ಸೈಕಲ್ ಆಗುವ ಕನಸು ನನಸಾಗಿಸುವ ಗುರಿ ಸಾಧಿಸಲು ಅವರು ಈ ನಿರ್ಧಾರ ಕೈಗೊಂಡಿದ್ದರು. 

‘ಇಸ್ಲೆ ಆಫ್ ಮ್ಯಾನ್ ಟಿಟಿ’ ಹೆಸರಿನ ಸ್ಪರ್ಧೆಯಲ್ಲಿ ಭಾಗವಹಿಸಿದ ಮೋಟರ್ ಸೈಕಲ್ ತಯಾರಿಕೆಯ ಜಪಾನಿನ ಮೊದಲ ಕಂಪನಿ ಹೋಂಡಾ ಆಗಿತ್ತು.  ನಂತರದ ವರ್ಷಗಳಲ್ಲಿ 1960ರಲ್ಲಿ ಹೋಂಡಾ, 125ಸಿಸಿ ಮತ್ತು 250ಸಿಸಿ ವಿಭಾಗದ ಎಫ್‍ಐಎಂ ರೋಡ್ ರೇಸಿಂಗ್ ಜಾಗತಿಕ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಿತ್ತು.  1961ರಲ್ಲಿ   ರೇಸ್‍ನ ಆ ಋತುವಿನ ಆರಂಭಿಕ ಸ್ಪರ್ಧೆಯಾಗಿದ್ದ ಸ್ಪೇನ್‍ನ ಗ್ರ್ಯಾಂಡ್ ಪ್ರಿಕ್ಸ್‍ನಲ್ಲಿ ಭಾಗವಹಿಸಿದ್ದ ಟಾಮ್ ಫಿಲಿಸ್ ಅವರು ಹೋಂಡಾಗೆ ಮೋಟರ್ ಸೈಕಲ್ ಸ್ಪರ್ಧೆಯಲ್ಲಿ ಅದರ ಮೊದಲ ಗೆಲುವು ತಂದುಕೊಟ್ಟಿದ್ದರು.  ಅಲ್ಲಿಂದಾಚೆಗೆ ಹೋಂಡಾ, 1962ರಲ್ಲಿ 50ಸಿಸಿ ಮತ್ತು 350ಸಿಸಿ ವಿಭಾಗದ ಸ್ಪರ್ಧೆಗಳಲ್ಲಿ ಭಾಗವಹಿಸಿತ್ತು.  1966ರಲ್ಲಿ 500ಸಿಸಿ ವಿಭಾಗದಲ್ಲಿ ಭಾಗವಹಿಸಿತ್ತು. 1966ರಲ್ಲಿ  ಎಲ್ಲ ಐದು ವಿಭಾಗದ  ಚಾಂಪಿಯನ್‍ಶಿಪ್ ಸ್ಪರ್ಧೆಗಳಲ್ಲಿ ಹೋಂಡಾ ಗೆಲುವು ಸಾಧಿಸಿತ್ತು. 1967ರ ಮೋಟರ್ ಸೈಕಲ್ ಸ್ಪರ್ಧೆ ಋತುವಿನ ಅಂತ್ಯದ ವೇಳೆಗೆ ಹೋಂಡಾ ತನ್ನ ತಯಾರಿಕಾ ಘಟಕಗಳು ರೇಸಿಂಗ್ ಸ್ಪರ್ಧೆಗಳಲ್ಲಿ ತನ್ನ ಪಾಲ್ಗೊಳ್ಳುವಿಕೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿದಿತ್ತು.  11 ವರ್ಷಗಳ ನಂತರ ಮೋಟರ್ ಸೈಕಲ್ ರೇಸ್‍ನಲ್ಲಿ ಭಾಗವಹಿಸುವುದಕ್ಕೆ ಚಾಲನೆ ನೀಡಿತ್ತು. ಅಲ್ಲಿಂದಾಚೆಗೆ 138 ಗ್ರ್ಯಾಂಡ್ ಪ್ರಿಕ್ಸ್ ಗೆಲುವು ಸಾಧಿಸಿದೆ.

1979ರಲ್ಲಿ ಹೋಂಡಾ, 500ಸಿಸಿ ವಿಭಾಗದ  ಎಫ್‍ಐಎಂ ರಸ್ತೆ ಸ್ಪರ್ಧೆಯ ವಿಶ್ವ ಚಾಂಪಿಯನ್‍ಶಿಪ್‍ಗೆ ಮರಳಿತ್ತು. ಮೂರು ವರ್ಷಗಳ ನಂತರ 1982ರಲ್ಲಿ ಅಮೆರಿಕದ ಸವಾರ ಫ್ರೆಡ್ಡಿ ಸ್ಪೆನ್ಸರ್, ಬೆಲ್ಜಿಯಂನಲ್ಲಿ ನಡೆದಿದ್ದ 7ನೇ ಸುತ್ತಿನ ಸ್ಪರ್ಧೆಯಲ್ಲಿ ತಮ್ಮ ಹೋಂಡಾ ಎನ್‍ಎಸ್500 ಮೋಟರ್ ಸೈಕಲ್‍ನಲ್ಲಿ  ಜಯಶಾಲಿಯಾಗಿದ್ದರು. ವಿಶ್ವ ಗ್ರ್ಯಾಂಡ್ ಪ್ರಿಕ್ಸ್ ರೇಸಿಂಗ್‍ಗೆ ಕಂಪನಿಯು ಮರಳಿದ ನಂತರದ ಮೊದಲ ಗೆಲುವು ಇದಾಗಿತ್ತು.

ಆನಂತರ ಹೋಂಡಾ, 125ಸಿಸಿ ಮತ್ತು 250ಸಿಸಿ ವಿಭಾಗದಲ್ಲಿನ ಗ್ರ್ಯಾಂಡ್ ಪ್ರಿಕ್ಸ್ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸಿತ್ತು.   ಇಟಲಿಯ ಸವಾರ ವ್ಯಾಲೆಂಟಿನೊ ರೊಸ್ಸಿ ಅವರು 2001ರಲ್ಲಿ  ಜಪಾನ್ ಗ್ರ್ಯಾಂಡ್ ಪ್ರಿಕ್ಸ್‍ನ ಋತುವಿನ ಆರಂಭದಲ್ಲಿ 500ಸಿಸಿ ವಿಭಾಗದಲ್ಲಿ ಗೆಲುವು ಸಾಧಿಸಿದಾಗ, ಹೋಂಡಾ ತನ್ನ 500ನೇ ಗೆಲುವು ಸಾಧಿಸಿತ್ತು. 2015ರಲ್ಲಿ  ಮಾರ್ಕ್ ಮಾಕ್ರ್ವೆಜ್ ಅವರು ತಮ್ಮ ಹೋಂಡಾ ಆರ್‍ಸಿ213ವಿ ಮೋಟರ್ ಸೈಕಲ್‍ನಲ್ಲಿ ಅಮೆರಿಕದ ಇಂಡಿಯಾನಾದಲ್ಲಿ ನಡೆದಿದ್ದ ಇಂಡಿಯಾನಾಪೊಲಿಸ್ ಮೋಟರ್ ಸ್ಪೀಡ್‍ವೇದ ಮೊಟೊಜಿಪಿ ವಿಭಾಗದ 10ನೇ ಸುತ್ತಿನ ರೇಸ್‍ನಲ್ಲಿ ಗೆಲುವಿನ ಬಾವುಟ ಹಿಡಿದುಕೊಂಡಾಗ ಹೋಂಡಾ 700ನೇಯ ಗ್ರ್ಯಾಂಡ್ ಪ್ರಿಕ್ಸ್ ವಿಜಯ ಸಾಧಿಸಿತ್ತು.

‘ಹೋಂಡಾದ 800ನೇಯ ಎಫ್‍ಐಎಂ ವಿಶ್ವ ಚಾಂಪಿಯನ್‍ಶಿಪ್ ಗ್ರ್ಯಾಂಡ್ ಪ್ರಿಕ್ಸ್ ಗೆಲುವು ಸಾಧಿಸಿರುವುದು ನನಗೆ ತುಂಬ ಹೆಮ್ಮೆಯ ಸಂಗತಿಯಾಗಿದೆ’ ಎಂದು ಹೋಂಡಾ ಮೋಟರ್ ಕಂಪನಿ ಲಿಮಿಟೆಡ್‍ನ ಅಧ್ಯಕ್ಷ, ಸಿಇಒ ಮತ್ತು ಪ್ರತಿನಿಧಿ ನಿರ್ದೇಶಕ ತಕಹಿರೊ ಹಚಿಗೊ ಅವರು ಹೇಳಿದ್ದಾರೆ. ‘ಹೋಂಡಾದ ರೇಸಿಂಗ್ ಚಟುವಟಿಕೆಗಳಿಗೆ ಒಂದೇ ಬಗೆಯಲ್ಲಿ ಬೆಂಬಲ ಮತ್ತು ಅಪಾರ ಕೊಡುಗೆ ನೀಡುತ್ತಿರುವ ವಿಶ್ವದಾದ್ಯಂತ ಇರುವ ಅಭಿಮಾನಿಗಳಿಗೆ ನಾನು ತುಂಬ ಕೃತಜ್ಞನಾಗಿದ್ದೇನೆ. 1959ರಿಂದ ಆರಂಭಿಸಿ ಸದ್ಯಕ್ಕೆ ನಾವು ತಲುಪಿರುವ ಈ ಸಾಧನೆವರೆಗೆ ಎದುರಾದ ಅಸಂಖ್ಯ  ಸಮಸ್ಯೆ / ಸವಾಲುಗಳನ್ನು ನಿವಾರಿಸಿಕೊಳ್ಳಲು ಶ್ರದ್ಧೆಯಿಂದ ಶ್ರಮಿಸಿದ  ಮತ್ತು ನಮ್ಮ ಬಗ್ಗೆ ಪ್ರೀತಿ – ಅಭಿಮಾನ ತೋರುತ್ತಿರುವವರಿಗೆಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ. ಹೋಂಡಾ, ಈ ಸಂದರ್ಭದಲ್ಲಿ ಒಮ್ಮೆ ಹಿಂತಿರುಗಿ ನೋಡಿ ಮುಂದುವರೆಯಲು  ಮತ್ತು ಗೆಲುವಿನ ಓಟ ಮುಂದುವರೆಸಲು   ಬಯಸುತ್ತದೆ. ಮುಂದೆಯೂ ನಿಮ್ಮ  ಬೆಂಬಲವನ್ನು ನಾವು ನಿರೀಕ್ಷಿಸುತ್ತೇವೆ’ ಎಂದು ಹೇಳಿದ್ದಾರೆ.